Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸುಷ್ಮಾ ಫ್ಲೇವರ್...!

ಸುಷ್ಮಾ ಫ್ಲೇವರ್...!

ವಾರ್ತಾಭಾರತಿವಾರ್ತಾಭಾರತಿ6 Aug 2016 10:40 PM IST
share

ಸುಷ್ಮಾ ಫ್ಲೇವರ್...!

 ಗಲ್ಫ್ ದೇಶಗಳಲ್ಲಿ ಉದ್ಯೋಗ ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿರುವ ಭಾರತೀಯರ ನೋವಿಗೆ ಸ್ಪಂದಿಸಿದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಇದು ಅನುಕರಣೀಯ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕರಾಗಿರುವ ಅವರು ಹೇಳಿದ್ದಾರೆ. ಹಲವು ತಿಂಗಳುಗಳಿಂದ ವೇತನವಿಲ್ಲದೆ ಪರದಾಡುತ್ತಿರುವ ಭಾರತೀಯ ಕಾರ್ಮಿಕರಿಗೆ ಪರಿಹಾರ ಕಲ್ಪಿಸುವಂತೆ, ತಮ್ಮ ಸಚಿವಾಲಯ ಸೌದಿ ಅರೇಬಿಯ ಸರಕಾರವನ್ನು ಹೇಗೆ ಮನವೊಲಿಸಿತು ಎಂದು ಲೋಕಸಭೆಗೆ ವಿವರ ನೀಡಿದ ವೇಳೆ, ಸಿಂಧಿಯಾ, ಸುಷ್ಮಾ ಅವರ ಗುಣಗಾನ ಮಾಡಿದರು. ‘‘ಸುಷ್ಮಾಜಿಯವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಂಥ ವಿಷಯವನ್ನು ಎತ್ತಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡ ಮೊದಲ ಸಚಿವೆ. ಮೋದಿ ಸರಕಾರದ ಇತರ ಸಚಿವರು ಸುಷ್ಮಾ ಅವರನ್ನು ಅನುಸರಿಸಬೇಕು’’ ಎಂದು ಹೇಳಿದರು. ಆದರೆ ಈ ಹೊಗಳಿಕೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಪಥ್ಯವಾಗಲಿಲ್ಲ. ‘‘ಇಂಥ ರಾಜಕೀಯ ಹೇಳಿಕೆ ಬೇಕಿಲ್ಲ’’ ಎಂದು ಮಹಾಜನ್ ಹೇಳಿದರು. ಇದರಿಂದ ಸಿಂಧಿಯಾ ಬೆರಗಾದರು. ಆದರೆ ಸುಷ್ಮಾ ಮಾತ್ರ ಈ ವೈಭವ ನಿರಾಕರಿಸಲಿಲ್ಲ.

ಅಡ್ವಾಣಿಯವರ ಕೊನೆಯ ನಿರೀಕ್ಷೆ?

ಇತ್ತೀಚಿನ ದಿನಗಳಲ್ಲಿ ಎಲ್.ಕೆ.ಅಡ್ವಾಣಿ ಒಬ್ಬಂಟಿಯಾಗು ತ್ತಿದ್ದಾರೆ. ಬಿಜೆಪಿಯ ಈ ಲೋಹಪುರುಷನನ್ನು ರಾಷ್ಟ್ರಪತಿ ಹುದ್ದೆಗೆ ಅಥವಾ ಉಪರಾಷ್ಟ್ರಪತಿ ಸ್ಥಾನಕ್ಕೆ ಪರಿಗಣಿಸುವ ಸಾಧ್ಯತೆ ವಿರಳ. ಆದಾಗ್ಯೂ, ಅಡ್ವಾಣಿ ಕ್ಲಬ್ ಸದಸ್ಯರು ಮೋದಿ ಆಡಳಿತದಲ್ಲಿ ಸಮೃದ್ಧವಾಗಿ ಬೆಳೆದಿದ್ದಾರೆ. ವಿರೋಧ ಪಕ್ಷಗಳ ಸದಸ್ಯರ ಜತೆ ಸಂಧಾನ ಏರ್ಪಡಿಸುವಲ್ಲಿ ಅನಂತ ಕುಮಾರ್ ಎತ್ತಿದ ಕೈ. ವೆಂಕಯ್ಯ ನಾಯ್ಡು ಅವರಿಗೆ ಪ್ರಮುಖ ಖಾತೆಗಳ ಹೊಣೆ ಹೆಗಲೇರಿದೆ. ಸುಷ್ಮಾ ಕೂಡಾ ವಿಕಸನಗೊಳ್ಳುತ್ತಿದ್ದಾರೆ. ಅವರ ಬೆಂಬಲಿಗ ರಾಕೇಶ್ ಸಿಂಗ್, ಪಕ್ಷದ ಮುಖ್ಯ ಸಚೇತಕರಾಗಿದ್ದಾರೆ. ಕುಮಾರ್, ನಾಯ್ಡು, ಸುಷ್ಮಾ ಅವರ ಬಯಕೆಗಳು ಈ ಮಾಜಿ ಮಾರ್ಗದರ್ಶಕನ ನೆರವಿಗೆ ಬರುತ್ತವೆಯೇ?

ಸಿಧು ಎಲ್ಲಿ ಹೋಗುತ್ತಾರೆ?

ಮಾಜಿ ಕ್ರಿಕೆಟಿಗ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯ ನವಜ್ಯೋತ್ ಸಿಂಗ್ ಸಿಧು ಅವರಿಗೆ ಪ್ರಸಕ್ತ ರಾಜಕೀಯ ಕಠಿಣ ಆಟವಾಗಿ ಪರಿಣಮಿಸಿದೆ. ಬಿಜೆಪಿ ನಾಯಕರನ್ನು ತೆಗಳಿ, ಆಮ್ ಆದ್ಮಿ ಪಾರ್ಟಿ ಸೇರುವ ಆಸಕ್ತಿ ತೋರಿದ್ದಾರೆ. ಆದರೆ ಇದೀಗ ಇವರ ಉತ್ಸಾಹಕ್ಕೆ ತಣ್ಣೀರೆರಚಿದಂತೆ ಕಾಣುತ್ತಿದೆ. ಕೆಲ ವಿಶ್ಲೇಷಕರ ಪ್ರಕಾರ, ಅವರ ಕಣ್ಣಿರುವುದು ಪಂಜಾಬ್ ಸಿಎಂ ಗಾದಿ ಮೇಲೆ. ಆದರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದರೆ ಪಕ್ಷದ ಒಡಕಿಗೆ ಕಾರಣವಾಗಬಹುದು ಎಂಬ ಚಿಂತೆ ಆಪ್ ನಾಯಕರದ್ದು. ಇನ್ನೊಂದೆಡೆ ಕಾಂಗ್ರೆಸ್ ಕೂಡಾ ಸಿಧು ಅವರ ಓಲೈಕೆಗೆ ಮುಂದಾಗಿದೆ. ಆದರೆ ಇದು ಕೂಡಾ ಅಮರೀಂದರ್ ಸಿಂಗ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಈಗಾಗಲೇ ಬಿಂಬಿಸಿದೆ. ಸಿಧು ಅವರ ಮುಂದಿನ ಕಾರ್ಯತಂತ್ರ ಏನು ಎಂಬ ಚರ್ಚೆ ದಿಲ್ಲಿ ಹಾಗೂ ಪಂಜಾಬ್‌ನಲ್ಲಿ ಚರ್ಚಾವಸ್ತುವಾಗಿದೆ. ಸಿಧು ತಮ್ಮ ಪಕ್ಷಕ್ಕೆ ಬರುವುದು ಶತಃಸಿದ್ಧ ಎಂಬ ವಿಶ್ವಾಸ ಆಪ್ ನಾಯಕರಲ್ಲಿದೆ. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನವೂ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಪಕ್ಷಕ್ಕೆ ಔಪಚಾರಿಕ ಪ್ರವೇಶ ಪಡೆಯುವಂತೆ ಸಿಧು ಅವರ ಮನವೊಲಿಸುವ ಹಿಂಬಾಗಿಲ ಪ್ರಯತ್ನಗಳು ನಡೆಯುತ್ತಿವೆ ಎಂದು ಆಪ್ ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಆದರೆ ಸಿಧು ಬಗ್ಗೆ ಅಂದಾಜು ಮಾಡಬಹುದಾದ ವಿಚಾರವೆಂದರೆ ಅವರ ಊಹೆಗೆ ನಿಲುಕದ ನಡೆ. ಇದನ್ನು ಕಾದು ನೋಡಬೇಕು.

ಅಹ್ಲುವಾಲಿಯಾ ಪ್ರಮಾದ!


ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಜೆಪಿ ಮುಖಂಡ ಎಸ್.ಎಸ್.ಅಹ್ಲುವಾಲಿಯಾ ತೀರಾ ಮುಜುಗರದಲ್ಲಿ ಸಿಕ್ಕಿಹಾಕಿಕೊಂಡರು. ಇದು ನಡೆದದ್ದು ಹೀಗೆ. ತೃಣಮೂಲ ಕಾಂಗ್ರೆಸ್ ಸಂಸದೆ ಅರ್ಪಿತಾ ಘೋಷ್, ಖ್ಯಾತ ಬಂಗಾಳಿ ಗಾಯಕ, ಸಂಯೋಜಕ ರಜನಿಕಾಂತ ಸೇನ್ ಹಾಡಿದ ತಮ್ಮ ಕವಿತೆಗಳನ್ನು ಅಧಿನಾಯಕಿ ಮುಂದೆ ಪ್ರಸ್ತುತಪಡಿಸಲು ಆಗಮಿಸಿದ್ದರು. ಆಗ ಡಾರ್ಜಿಲಿಂಗ್ ಬಿಜೆಪಿ ಸಂಸದ ಅಹ್ಲುವಾಲಿಯಾ ಕೂಡಾ ಅಲ್ಲಿ ಪ್ರತ್ಯಕ್ಷರಾದರು. ಅಹ್ಲುವಾಲಿಯಾ ಅವರನ್ನು ಕಂಡ ಬ್ಯಾನರ್ಜಿ, ರಜನಿಕಾಂತ ಅವರ ಇಂಪಾದ ಧ್ವನಿ ಆಲಿಸಲು ಅಹ್ಲುವಾಲಿಯಾ ಅವರನ್ನು ಆಹ್ವಾನಿಸಿದರು. ದೀದಿ ರಜನಿಕಾಂತ್ ಅವರ ಅಭಿಯಾನಿಯಾಗಿದ್ದರೆ, ನಾನು ಅವರ ಇತ್ತೀಚಿನ ಸಿನೆಮಾ ಕಬಾಲಿಯ ಸಿ.ಡಿ. ತರಬಹುದಿತ್ತು ಎಂದು ಈ ಸಂದರ್ಭದಲ್ಲಿ ಅಹ್ಲುವಾಲಿಯಾ ಹೇಳಿಬಿಟ್ಟರು ಎನ್ನಲಾಗಿದೆ. ಅಹ್ಲುವಾಲಿಯಾ ಉತ್ತರದಿಂದ ದೀದಿಗೆ ಒಂದು ಕ್ಷಣ ಮಾತೇ ಹೊರಡಲಿಲ್ಲ. ಇದರಿಂದ ಮುಜುಗರಕ್ಕೀಡಾದ ಬಿಜೆಪಿ ಮುಖಂಡನಿಗೆ ತಕ್ಷಣ ತಮ್ಮ ಪ್ರಮಾದ ಅರಿವಾಗಿ ಮಾತು ತಿದ್ದಿಕೊಂಡರು. ದೀದಿ ಒಳ್ಳೆಯ ಮೂಡ್‌ನಲ್ಲಿದ್ದುದರಿಂದ ಕ್ಷಮೆ ಯಾಚಿಸುವ ಪ್ರಮೇಯ ಅಹ್ಲುವಾಲಿಯಾಗೆ ಬರಲಿಲ್ಲ.

ಇದು ನಿರ್ಗಮನದ ಕ್ಷಣ!

ಎಐಸಿಸಿ ಪುನಾರಚನೆ ಇನ್ನೂ ವಿಳಂಬವಾಗಬಹುದು. ಆದರೆ ಸ್ಥಾನ ವಂಚಿತರಾಗುವ ಸಾಧ್ಯತೆ ಇರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಗಳು ಈಗಾಗಲೇ ಕಚೇರಿಗೆ ಹಾಜರಾಗುವುದು ನಿಲ್ಲಿಸಿದ್ದಾರೆ ಎಂಬ ಪಿಸುಮಾತುಗಳು ಪಕ್ಷದ ವಲಯದಲ್ಲಿ ಕೇಳಿಬರುತ್ತಿವೆ. ಉದಾಹರಣೆಗೆ ಮಧುಸೂಧನ ಮಿಸ್ತ್ರಿ ಅವರಿಗೆ ಭವಿಷ್ಯದ ಸ್ಪಷ್ಟ ಕಲ್ಪನೆ ಇದೆ. ಗುಲಾಂ ನಬಿ ಆಝಾದ್ ಅವರಿಗೆ ಉತ್ತರ ಪ್ರದೇಶದ ಹೊಣೆಯನ್ನು ವಹಿಸಿದ ಬಳಿಕ ಪರಿಸ್ಥಿತಿಯನ್ನು ಅವರು ಸರಿಯಾಗಿಯೇ ಊಹಿಸಿದ್ದಾರೆ ಎನ್ನಲಾಗಿದೆ. ಇನ್ನೂ ವಿಚಿತ್ರವೆಂದರೆ, ಗಾಂಧಿ ಕುಟುಂಬಕ್ಕೆ ಆಪ್ತರಾಗಿರುವ ಅಂಬಿಕಾ ಸೋನಿ ಕೂಡಾ ಎಐಸಿಸಿ ಕಚೇರಿಯಲ್ಲಿ ಕಾಣಸಿಗುತ್ತಿಲ್ಲ. ಅಂದರೆ ಅವರು ಕೂಡಾ ಹೊರಹೋಗುತ್ತಿದ್ದಾರೆ ಎಂಬುದರ ಮುನ್ಸೂಚನೆ ಎಂಬ ಅರ್ಥವೇ? ಸೋನಿಯಾ ಅಥವಾ ರಾಹುಲ್ ಅವರ ಭೇಟಿಗೆ ಹತಾಶರಾದ ಇತರರೂ ತುದಿಗಾಲಲ್ಲಿ ನಿಂತಿದ್ದಾರೆ. ಇದು ಹತಾಶ ಸಮಯ! ನಿರ್ಗಮನದ ಕ್ಷಣ!?

share
ವಾರ್ತಾಭಾರತಿ
ವಾರ್ತಾಭಾರತಿ
Next Story
X