ಮಾಯಾ ನಿಂದನೆ: ದಯಾಶಂಕರ್‌ಗೆ ಜಾಮೀನು
ವಾರಣಾಸಿ, ಆ.6: ಬಿಎಸ್ಪಿ ನಾಯಕಿ ಮಾಯಾವತಿ ಯವರ ಕುರಿತು ಅವಹೇಳನಕಾರಿ ಟೀಕೆ ಮಾಡಿದ ಆರೋಪದಲ್ಲಿ ಬಂಧಿಸಲಾಗಿದ್ದ ಉಚ್ಚಾಟಿತ ಬಿಜೆಪಿ ನಾಯಕ ದಯಾಶಂಕರ ಸಿಂಗ್‌ಗೆ ಮಾವುದ ನ್ಯಾಯಾಲಯವೊಂದು ಶನಿವಾರ ಜಾಮೀನು ಮಂಜೂರು ಮಾಡಿದೆ.
ಎಡಿಜೆ-4 ನ್ಯಾಯಾಲಯದ ನ್ಯಾಯಾಧೀಶ ಡಾ. ಅಜಯ್‌ಕುಮಾರ್, ತಲಾ ರೂ. 50 ಸಾವಿರದ 2 ಬಾಂಡ್‌ಗಳ ಮೇಲೆ ಅವರಿಗೆ ಜಾಮೀನು ನೀಡಿದ್ದಾರೆ.
ಸಿಂಗ್‌ಗೆ ಜಾಮೀನು ಮಂಜೂರು ಮಾಡಿರುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದೆಂದು ಬಿಎಸ್ಪಿ ಹೇಳಿದೆ.
Next Story





