ಟೆಂಪೊ-ರಿಕ್ಷಾ ಢಿಕ್ಕಿ: ಎಂಟು ಮಂದಿಗೆ ಗಾಯ
ಕುಂದಾಪುರ, ಆ.6: ಇಲ್ಲಿಗೆ ಸಮೀಪದ ಕರ್ಕಿ ಗ್ರೀನ್‌ಲ್ಯಾಂಡ್ ಕಾರ್ಖಾನೆ ಬಳಿ ರಸ್ತೆಯಲ್ಲಿ ಶನಿವಾರ ಬೆಳಗ್ಗೆ 407 ಗೂಡ್ಸ್ ಟೆಂಪೊವೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ 8 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡವರನ್ನು ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಬಸ್ರೂರು ಪಾನಕಕಟ್ಟೆಯ ಮಂಜುಳಾ, ಕುಸುಮಾ, ಚಾಲಕ ಗುರುರಾಜ್ ಮತ್ತು ಗೂಡ್ಸ್ ವಾಹನದಲ್ಲಿದ್ದ ಕೋಟಿ, ಆರಿಫ್ ರೆಹ್ಮಾನ್, ಮುಸ್ತಫಾ, ತಮ್ಮಣ್ಣ , ಚಾಲಕ ಮಯ್ಯದಿ ಎಂದು ಗುರುತಿಸಲಾಗಿದೆ. ಇವರೆಲ್ಲ ಕುಂದಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾವಿನಕಟ್ಟೆ ಕಡೆಯಿಂದ ತಲ್ಲೂರು ಕಡೆಗೆ ಹೋಗುತ್ತಿದ್ದ ಗೂಡ್ಸ್ ವಾಹನ ಎದುರಿನಲ್ಲಿ ಹೋಗುತ್ತಿದ್ದ ರಿಕ್ಷಾವನ್ನು ಓವರ್‌ಟೇಕ್ ಮಾಡುವ ವೇಳೆ ಈ ಅಪಘಾತ ನಡೆದಿದೆ. ಪರಿಣಾಮ ಎರಡು ವಾಹನಗಳು ಮಗುಚಿ ಬಿದ್ದು 8 ಮಂದಿ ಗಾಯಗೊಂಡರು ಎನ್ನಲಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





