ಟರ್ಕಿ ಕ್ಷೋಭೆಯಲ್ಲಿ ಅಮೆರಿಕದ ಪಾಲಿಲ್ಲ: ಅಮೆರಿಕದ ರಾಯಭಾರಿ
ಇಸ್ತಾಂಬುಲ್, ಆ. 6: ಟರ್ಕಿಯಲ್ಲಿ ಕಳೆದ ತಿಂಗಳು ನಡೆದ ವಿಫಲ ಸೇನಾ ದಂಗೆಯಲ್ಲಿ ತನ್ನ ದೇಶ ಶಾಮೀಲಾಗಿದೆ ಎಂಬ ಆರೋಪಗಳನ್ನು ಟರ್ಕಿಗೆ ಅಮೆರಿಕದ ರಾಯಭಾರಿ ಜಾನ್ ಬ್ಯಾಸ್ ಮತ್ತೊಮ್ಮೆ ತಳ್ಳಿಹಾಕಿದ್ದಾರೆ ಎಂದು ಟರ್ಕಿಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
‘‘ಜುಲೈ 15ರ ರಾತ್ರಿ ನಡೆದ ಯಾವುದೇ ಅಕ್ರಮ ಚಟುವಟಿಕೆಗಳನ್ನು ಅಮೆರಿಕ ಸರಕಾರ ರೂಪಿಸಿಲ್ಲ, ನಿರ್ದೇಶಿಸಿಲ್ಲ, ಅದಕ್ಕೆ ಬೆಂಬಲ ನೀಡಿಲ್ಲ ಅಥವಾ ಆ ಕುರಿತ ಯಾವುದೇ ಪೂರ್ವ ಮಾಹಿತಿ ಇರಲಿಲ್ಲ ಎಂಬುದನ್ನು ನಾನು ಈ ಹಿಂದೆ ಹೇಳಿರುವಂತೆಯೇ ಹಾಗೂ ವಾಶಿಂಗ್ಟನ್‌ನಿಂದ ನಾವು ಈಗಾಗಲೇ ಹೇಳಿರುವಂತೆಯೇ ನಾನು ಮತ್ತೊಮ್ಮೆ ಹೇಳಬಯಸುತ್ತೇನೆ. ಇಲ್ಲಿಗೆ ಪೂರ್ಣವಿರಾಮ ಹಾಕುತ್ತೇನೆ’’ ಎಂದು ಇಂಗ್ಲಿಷ್ ದೈನಿಕ ‘ಹುರಿಯತ್ ಡೇಲಿ ನ್ಯೂಸ್’ನಲ್ಲಿ ಪ್ರಕಟಗೊಂಡ ಅಮೆರಿಕದ ರಾಯಭಾರಿ ಜಾನ್ ಬ್ಯಾಸ್‌ರ ಹೇಳಿಕೆ ತಿಳಿಸಿದೆ. ತನ್ನ ದೇಶದ ವಿರುದ್ಧ ಮಾಡಲಾಗುತ್ತಿರುವ ಆರೋಪಗಳಿಂದ ತನಗೆ ‘‘ತೀವ್ರ ವೇದನೆಯಾಗಿದೆ’’ ಎಂದಿದ್ದಾರೆ.
Next Story





