ಕರಾವಳಿಯೆಲ್ಲೆಡೆ ಸಂಭ್ರಮದ ನಾಗರಪಂಚಮಿ ಆಚರಣೆ
ಮಂಗಳೂರು, ಆ.7: ಕರಾವಳಿಯೆಲ್ಲೆಡೆ ಇಂದು ನಾಗರಪಂಚಮಿ ಆಚರಣೆಯ ಸಂಭ್ರಮ. ಬೆಳಗ್ಗಿನಿಂದಲೇ ವಿವಿಧ ನಾಗ ದೇವಾಲಯಗಳಲ್ಲಿ ಭಕ್ತರು ಸಂಭ್ರಮದಿಂದ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾರೆ.
ವಿವಿಧ ನಾಗ ದೇವಳಗಳು, ಸುಬ್ರಹ್ಮಣ್ಯ ದೇವಸ್ಥಾನ, ಕುಡುಪು ದೇವಸ್ಥಾನಗಳಲ್ಲಿ ತನು ಅರ್ಪಿಸುತ್ತಿದ್ದಾರೆ. ನಾಗಬನಗಳಲ್ಲಿ ಪೂಜೆಗಳು ನಡೆಯುತ್ತಿವೆ.
ರವಿವಾರ ಆದುದರಿಂದ ಹಬ್ಬ ಆಚರಣೆಯಲ್ಲಿ ಹೆಚ್ಚಿನ ಜನರು ಪಾಲ್ಗೊಂಡಿರುವುದು ಕಂಡುಬರುತ್ತಿದೆ. ಕುಡುಪು ದೇವಳದಲ್ಲಿ ಬೆಳಗ್ಗೆಯೇ ಭಾರೀ ಸಂಖ್ಯೆಯಲ್ಲಿ ಜನರು ಪಾಲ್ಗೊಂಡು ನಾಗರಪಂಚಮಿ ಆಚರಿಸಿದರು.
Next Story