ಮೊದಲ ದಿನ ಭಾರತದ ಕಳಪೆ ಪ್ರದರ್ಶನ; ಗುರಿ ತಪ್ಪಿದ ಜಿತು ಪದಕದ ಬೇಟೆ , 8ನೆ ಸ್ಥಾನ

ರಿಯೋ ಡಿ ಜನೈರೋ,ಆ .7: ಭಾರತದ ಶೂಟರ್ ಜಿತು ರಾಯ್ ರಿಯೋ ಒಲಿಂಪಿಕ್ಸ್ನ ಪುರುಷರ 10 ಮೀಟರ್ ಏರ್ಪಿಸ್ತೂಲ್ ವಿಭಾಗದಲ್ಲಿ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು. ಫೈನಲ್‌ನಲ್ಲಿ ಎಂಟನೆ ಸ್ಥಾನಕ್ಕೆ ತೃಪ್ತಿಪಟ್ಟರು.
ಅರ್ಹತಾ ಸುತ್ತಿನಲ್ಲಿ 580 ಅಂಕ ಕಲೆಹಾಕುವ ಮೂಲಕ 6ನೆ ಸ್ಥಾನದೊಂದಿಗೆ ಫೈನಲ್ ಪ್ರವೇಶಿಸಿದ್ದ ಜಿತು ಕ್ರೀಡಾಕೂಟದ ಮೊದಲ ದಿನವೇ ಪದಕದ ನಿರೀಕ್ಷೆ ಮೂಡಿಸಿದ್ದರು. ಆದರೆ ಫೈನಲ್‌ನಲ್ಲಿ ಅವರು 78.7 ಅಂಕಗಳನ್ನು ಸಂಪಾದಿಸಿ ಎಂಟನೆ ಸ್ಥಾನವನ್ನು ತನ್ನದಾಗಿಸಿಕೊಂಡರು.
ಮೊದಲ ದಿನ ಭಾರತದ ಖಾತೆಗೆ ಯಾವುದೇ ಪದಕ ದೊರೆಯಲಿಲ್ಲ.
Next Story





