ರೊಸಾರಿಯೊ ಕೆಥೆಡ್ರಾಲ್‌ನಲ್ಲಿ ಸಂತ ಕ್ರಿಸ್ಟೋಫರ್ ಹಬ್ಬ, ವಾಹನಗಳ ಆರ್ಶೀವಚನ ಕಾರ್ಯಕ್ರಮ

ಮಂಗಳೂರು, ಆ.7: ಸಂತ ಕ್ರಿಸ್ಟೋಫರ್ ಅಸೋಸಿಯೇಶನ್ ವತಿಯಿಂದ ನಗರದ ರೊಸಾರಿಯಾ ಕೆಥೆಡ್ರಾಲ್‌ನಲ್ಲಿ ಸಂತ ಕ್ರಿಸ್ಟೋಫರ್ ಹಬ್ಬ ಆಚರಣೆ ಹಾಗೂ ವಾಹನಗಳ ಆಶೀರ್ವಚನ ಕಾರ್ಯಕ್ರಮವು ರವಿವಾರ ಜರಗಿತು.
ಮಂಗಳೂರು ಬಿಷಪ್ ಅ.ವಂ. ಡಾ.ಅಲೋಶಿಯಸ್ ಪೌಲ್ ಡಿಸೋಜ ಹಬ್ಬದ ಬಲಿಪೂಜೆ ನೆರವೇರಿಸಿದರು.
ಕೆಥೆಡ್ರಾಲ್‌ನ ಪ್ರಧಾನ ಧರ್ಮಗುರು ವಂ. ಫಾ. ಜೆ.ಬಿ.ಕ್ರಾಸ್ತಾ ಹಾಗೂ ಸಹಾಯಕ ಧರ್ಮಗುರು ವಂ.ಫಾ. ಪಾವ್ಲ್ ಡಿಸೋಜ ಉಪಸ್ಥಿತರಿದ್ದರು. ಸಂತ ಕ್ರಿಸ್ಟೋಫರ್‌ರನ್ನು ವಾಹನ ಮಾಲಕರ ಪೋಷಕರ ಸಂತ ಎಂಬುದಾಗಿ ಪರಿಗಣಿಸಲಾಗಿದ್ದು, ಆಗಸ್ಟ್ ಪ್ರಥಮ ರವಿವಾರ ಅವರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.
ಬೆಳಗ್ಗೆ ನಡೆದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಅಸೋಸಿಯೇಶನ್ ಗೌರವಾಧ್ಯಕ್ಷ ಸುಶೀಲ್ ನೊರೊನ್ಹ, ಅಧ್ಯಕ್ಷ ರೈಮೆಂಡ್ ಡಿಕುನ್ಹ, ಕಾರ್ಯದರ್ಶಿ ಡೆನಿಸ್ ಡಿಸೋಜ ಉಪಸ್ಥಿತರಿದ್ದರು.
ಇದೇ ಸಂದರ್ಭ ಕಳೆದ ಸಾಲಿನ ಎಸೆಸೆಲ್ಸಿ, ಪಿಯುಸಿ, ಪದವಿ ಹಾಗೂ ಇಂಜಿನಿಯರಿಂಗ್‌ನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ಅಸೋಸಿಯೇಶನ್ ಸದಸ್ಯರ 23 ಮಕ್ಕಳಿಗೆ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅಭಿನಂದಿಸಿದರು.
ಗುರುದೀಕ್ಷೆ ಪಡೆದು 50 ವರ್ಷಗಳನ್ನು ಪೂರೈಸಿದ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜರನ್ನು ಕೆಥೆಡ್ರಾಲ್‌ನ ಪ್ರಧಾನ ಧರ್ಮಗುರು ಫಾ.ಜೆ.ಬಿ.ಕ್ರಾಸ್ತಾರವರು ಶಾಲು ಹೊದಿಸಿ ಸ್ಮಾನಿಸಿದರು.
ಇದೇ ಸಂದರ್ಭ ಕ್ರಿಸ್ಟೋಫರ್ ಅಸೋಸಿಯೇಶನ್‌ನ 50ನೆ ಸಂಭ್ರಮಾಚರಣೆಯ ಸ್ಟಿಕ್ಕರ್‌ನ್ನು ಬಿಡುಗಡೆಗೊಳಿಸಲಾಯಿತು.
ಲ್ಯಾನ್ಸಿ ಡಿಕುನ್ಹ ಕಾರ್ಯಕ್ರಮ ನಿರೂಪಿಸಿದರು. ಲೀನಾ ಡಿಸೋಜ ವಂದಿಸಿದರು.





