ಹೆಲ್ಮೆಟ್ ಧರಿಸದ್ದಕ್ಕೆ ವಯರ್‌ಲೆಸ್ ಸೆಟ್‌ನಿಂದ ಕಪಾಳಮೋಕ್ಷ : ಬೈಕ್ ಸವಾರ ಗಂಭೀರ

ಕೊಲ್ಲಂ,ಆ.7: ಪೊಲೀಸ್ ಕಾನ್‌ಸ್ಟೇಬಲ್ ಹೆಲ್ಮೆಟ್ ಧರಿಸದ ಬೈಕ್ ಚಲಾಯಿಸಿದ ವ್ಯಕ್ತಿಯೊಬ್ಬನ ಕೆನ್ನೆಗೆ ವಯರ್‌ಲೆಸ್ ಸೆಟ್‌ನಿಂದ ಬಾರಿಸಿದ್ದು, ಇದೀಗ ಆತನ ಆರೋಗ್ಯ ಸ್ಥಿತಿ ಚಿಂತಾನಜನಕವಾಗಿದೆಯೆಂದು ವರದಿಯಾಗಿದೆ. ಕೊಲ್ಲಂ ಆಶ್ರಮ ಲಿಂಕ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಸಂತೋಷ್ ಫೆಲಿಕ್ಸ್(34) ಎಂಬವರು ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿ ಬಂದಿದ್ದರು.ಇದನ್ನು ಪ್ರಶ್ನಿಸಿದ ಮಾಸ್‌ದಾಸ್ ಎಂಬ ಪೊಲೀಸ್ ಕಾನ್‌ಸ್ಟೇಬಲ್ ತನ್ನ ಕೈಯಲ್ಲಿದ್ದ ವಯರ್‌ಲೆಸ್ ಸೆಟ್‌ನಿಂದ ಸಂತೋಷ್‌ನ ಕೆನ್ನೆಗೆ ಬಾರಿಸಿದ್ದರು.
ಹೊಡೆತ ತೀವ್ರವಾಗಿ ತಾಗಿದ್ದು ಸಂತೋಷ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಲೆಯಲ್ಲಿ ಆಂತರಿಕ ರಕ್ತಸ್ರಾವ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸಂತೋಷ್ ಈಗ ಮಾತಾಡುವ ಸ್ಥಿತಿಯಲ್ಲಿಲ್ಲ. ಎಡಕಿವಿಯ ಶ್ರವಣ ಶಕ್ತಿ ಕಳಕೊಂಡಿದ್ದಾರೆ. ದ್ರವರೂಪದಲ್ಲಿ ಆಹಾರ ನೀಡಲಾಗುತ್ತಿದೆ ಎಂದು ಸಂತೋಷ್ ಸಹೋದರ ಜೋಸ್‌ಫೆಲಿಕ್ಸ್ ತಿಳಿಸಿದ್ದಾರೆ.
ತಪ್ಪಿತಸ್ಥ ಕಾನ್‌ಸ್ಟೇಬಲ್‌ನನ್ನು ಅಮಾನುತುಗೊಳಿಸಿ ಇಲಾಖಾ ತನಿಖೆಗೆ ಪೊಲೀಸ್ ಕಮೀಶನರ್ ಆದೇಶ ಹೊರಡಿಸಿದ್ದಾರೆ. ಈ ನಡುವೆ ತಪ್ಪಿತಸ್ಥ ಪೊಲೀಸನ ವಿರುದ್ಧ ಕೇಸು ದಾಖಲಿಸಬೇಕೆಂದು ಸಿಟಿಪೊಲೀಸ್ ಕಮೀಶನರ್‌ಗೆ ಗಾಯಾಳು ಯುವಕನ ಸಂಬಂಧಿಕರು ದೂರು ನೀಡಿದ್ದಾರೆ ಎಂದು ವರದಿ ತಿಳಿಸಿದೆ.







