ಕುರುಂಜಿ ವೆಂಕಟರಮಣ ಗೌಡರ ಮೂರನೇ ಪುಣ್ಯತಿಥಿ
ಅಮರ ಶಿಲ್ಪಿಯ ಪುತ್ಥಳಿಗೆ ಮಾಲಾರ್ಪಣೆ

ಸುಳ್ಯ,ಆ.7: ಭವ್ಯ ಸುಳ್ಯದ ಶಿಲ್ಪಿ ಡಾ. ಕುರುಂಜಿ ವೆಂಕಟರಮಣ ಗೌಡರು ಅಗಲಿ ಮೂರು ವರ್ಷ ಸಂದಿದೆ. ಮೂರನೇ ವರ್ಷದ ಪುಣ್ಯತಿಥಿ ಪ್ರಯುಕ್ತ ಕ್ಯಾಂಪಸ್‌ನಲ್ಲಿರುವ ಅವರ ಪುತ್ಥಳಿ ಪ್ರತಿಮೆಗೆ ಪುಷ್ಪಾರ್ಚನೆ ನಡೆಯಿತು.
ಅಕಾಡೆಮಿ ಆಪ್ ಲಿಬರಲ್ ಎಜ್ಯಕೇಶನ್ ಅಧ್ಯಕ್ಷ ಡಾ ಕೆ.ವಿ ಚಿದಾನಂದ , ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಚಿದಾನಂದ, ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಡಾ. ಎನ್.ಎ ಜ್ಞಾನೇಶ್, ಜಗದೀಶ್ ಅಡ್ತಲೆ, ಡಾಲೀಲಾಧರ, ಭವಾನಿಶಂಕರ ಅಡ್ತಲೆ, ಕೆವಿಜಿ ಸಂಸ್ಥೆಗಳ ಉದ್ಯೋಗಿಗಳು ಹಾಗೂ ಕುರುಂಜಿಯವರ ಅಭಿಮಾನಿಗಳು ಸಾರ್ವಜನಿಕರು ಪುಷ್ಪ ನಮನ ಸಲ್ಲಿಸಿದರು.
ಕೆ.ವಿ.ಜಿ.ಯವರ ಮೂರನೇ ವರ್ಷದ ಪುಣ್ಯತಿಥಿ ಪ್ರಯುಕ್ತ ಕೆ.ವಿ.ಜಿ. ಡೆಂಟಲ್ ಕಾಲೇಜಿನಲ್ಲಿ ಕುರುಂಜಿಯವರ ಭಾವಚಿತ್ರಕ್ಕೆ ಡಾ.ಕೆ.ವಿ.ರೇಣುಕಾಪ್ರಸಾದ್ ಪುಷ್ಪ ನಮನ ಸಲ್ಲಿಸಿದರು. ಕಾಲೇಜಿನ ಆಡಳಿತಾಧಿಕಾರಿ ಬಿ.ಟಿ.ಮಾಧವ ಮೊದಲಾದವರಿದ್ದರು.
ಕುರುಂಜಿ ವೆಂಕಟರಮಣ ಗೌಡರ ಮೂರನೇ ವರ್ಷದ ಪುಣ್ಯ ತಿಥಿ ಪ್ರಯುಕ್ತ ಸುಳ್ಯ ಸರಕಾರಿ ಆಸ್ಪತೆಯಲ್ಲಿ ದಾಖಲಾದ ರೋಗಿಗಳಿಗೆ ಸುಳ್ಯ ತಾಲೂಕು ಗೌಡ ಸೇವಾ ಸಂಪುಟ ವತಿಯಿಂದ ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ದಿನೇಶ್ ಮಡಪ್ಪಾಡಿ, ಎನ್.ಎ. ಜ್ಞಾನೇಶ್, ಚಂದ್ರಶೇಖರ ಪೇರಾಲು, ದೊಡ್ಡಣ್ಣ ಬರೆಮೇಲು, ದಯಾನಂದ ಡಿ.ಟಿ, ಸಂತೋಷ್ ಮಡ್ತಿಲ, ರಾಕೇಶ್ ಕುಂಟಿಕಾನ, ವಿಶ್ವನಾಥ ಕುಂಚಡ್ಕ, ಸತೀಶ್, ವಿಠಲ್ ಅಳಿಕೆಮಜಲು ಉಪಸ್ಥಿತರಿದ್ದರು.







