ರಂಗಮನೆಯಲ್ಲಿ ಕೊಲಾಜ್ ಚಿತ್ರಕಲಾ ಪ್ರದರ್ಶನ : ರಂಗ ಕುಟೀರ ತುಂಬಿದೆ ಆಕರ್ಷಕ ಪೈಂಟಿಂಗ್ಸ್
ಆಗಸ್ಟ್ 13ರವರೆಗೆ ವೀಕ್ಷಣೆಗೆ ಅವಕಾಶ

ಸುಳ್ಯ,ಆ.7: ಸುಳ್ಯ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಕೊಳ್ನಾಡು ಸರಕಾರಿ ಪ್ರೌಢ ಶಾಲೆಯ ಪ್ರತಿಭಾನ್ವಿತ 25 ವಿದ್ಯಾರ್ಥಿಗಳು ತಯಾರಿಸಿದ ಕೊಲಾಜ್ ಚಿತ್ರಕಲಾಕೃತಿಗಳ ಪ್ರದರ್ಶನ ಆರಂಭಗೊಂಡಿದೆ.
ಸಾಹಿತಿ, ನಿವೃತ್ತ ಪ್ರಾಂಶುಪಾಲರಾದ ಡಾ ಪ್ರಭಾಕರ ಶಿಶಿಲ ಉದ್ಘಾಟನೆ ನೆರವೇರಿಸಿದರು. ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎನ್.ಎಸ್. ದೇವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲ ಕುಳ, ಸುಳ್ಯ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷರಾದ ಲಕ್ಷ್ಮೀಶ ರೈ ಮರ್ಕಂಜ, ಹಿರಿಯ ನಿವೃತ್ತ ಕಲಾ ಶಿಕ್ಷಕ ಎಂ.ಎಸ್. ಪುರುಷೋತ್ತಮ, ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಡಾ ಸುಂದರ್ ಕೇನಾಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಚಿತ್ರಕಲಾ ಶಿಕ್ಷಕರುಗಳಾದ ಎಮ್.ಎಸ್.ಪುರುಷೋತ್ತಮ, ವಿ. ಶ್ರೀರಾಮ ಮೂರ್ತಿ, ತಾರನಾಥ್ ಕೈರಂಗಳ, ಉಮೇಶ್ ವಳಲಂಬೆ, ಶ್ರೀಹರಿ ಪೈಂದೋಡಿ, ಪದ್ಮನಾಭ ಕೊನಾಡು, ಪ್ರಸನ್ನ ಐವರ್ನಾಡು, ಸತೀಶ್ ಪಂಜ, ಸುಜಿತ್ ಕೆ, ಸಂದೇಶ್ ಅಡ್ಕಾರ್, ಕೆಂಚವೀರಪ್ಪ, ಮಂಜು ಬೀರಮಂಗಿಲ ಉಪಸ್ಥಿತರಿದ್ದರು. ಈಗಾಗಲೇ ಮಂಗಳೂರು ಮತ್ತು ಬಂಟ್ವಾಳ ತಾಲೂಕಿನಲ್ಲಿ ಅತ್ಯಂತ ಪ್ರಶಂಶೆಗೆ ಪಾತ್ರವಾದ ಈ ಕೊಲಾಜ್ ಚಿತ್ರಕಲಾ ಪ್ರದರ್ಶನವು ಪ್ರತಿದಿನ ರಂಗಮನೆಯಲ್ಲಿ ಪೂ 9.00 ರಿಂದ ಸಂಜೆ 6.00 ಘಂಟೆಯ ತನಕ ವೀಕ್ಷಿಸಲು ಅವಕಾಶವಿದ್ದು ಚಿತ್ರಕಲಾ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಂಗಮನೆಯ ರೂವಾರಿ ಜೀವನ್‌ರಾಂ ಕೋರಿದರು.





