Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ...

ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ 6/6/66ರ ಬಗ್ಗೆ ನಿಮಗೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ7 Aug 2016 6:43 PM IST
share
ಭಾರತದ ಆರ್ಥಿಕತೆಯ ದಿಕ್ಕನ್ನೇ ಬದಲಾಯಿಸಿದ 6/6/66ರ ಬಗ್ಗೆ ನಿಮಗೆ ಗೊತ್ತೇ?

ಅರ್ಧಶತಮಾನದ ಹಿಂದೆ 1966 ಜೂನ್ 6ರಂದು ಅಥವಾ ಸ್ವತಂತ್ರ ಭಾರತದ ಅರ್ಥವ್ಯವಸ್ಥೆಯಲ್ಲಿ ಇತಿಹಾಸವೊಂದು ರಚನೆಯಾಯಿತು. ಆ ನಿರ್ಣಾಯಕ ದಿನದಂದು ಇಂದಿರಾ ಗಾಂಧಿ ರೂಪಾಯಿಯನ್ನು 36.5% ಅಪಮೌಲ್ಯ ಮಾಡಿದರು. ಆ ಮೂಲಕ ಅದರ ವಿರುದ್ಧ ಡಾಲರ್ ಮೌಲ್ಯವನ್ನು 57.4%ರಷ್ಟು ಏರಿಸಿದರು. ಈ ನಡೆಗೆ ರಾಷ್ಟ್ರಮಟ್ಟದಲ್ಲಿ ಕಹಿ ಟೀಕೆ ವ್ಯಕ್ತವಾಯಿತು.

 ರಾಜಕೀಯ ಮತ್ತು ಅರ್ಥವ್ಯವಸ್ಥೆಯಲ್ಲಿ 1966 ಭಾರತದ ದುರದೃಷ್ಟದ ವರ್ಷ. ಅದೇ ವರ್ಷ ಜನವರಿ 11ರಂದು ಜನಪ್ರಿಯ, ಗೌರವಾನ್ವಿತ ವ್ಯಕ್ತಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಟಾಷ್ಕಂಚ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟು, ಅವರ ಬದಲಿಗೆ ಇಂದಿರಾ ಗಾಂಧಿ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷದ ಹಿರಿತಲೆಗಳು ಅನನುಭವಿ ವ್ಯಕ್ತಿಯನ್ನು ಮುಖ್ಯ ಸ್ಥಾನಕ್ಕೇರಿಸುವ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುವ ಪಿತೂರಿ ನಡೆಸಿದ್ದರು. 1966ರಲ್ಲಿ ಇಂದಿರಾ ಅಧಿಕಾರ ಸ್ವೀಕರಿಸಿದ್ದೇ ದೊಡ್ಡ ಸಂಘರ್ಷದ ಸಂದರ್ಭದಲ್ಲಿ. ಬರದಿಂದಾಗಿ ಆಹಾರ ಧಾನ್ಯಗಳ ಕೊರತೆ ಇತ್ತು. ಹೀಗಾಗಿ ಮೊದಲ ಬಾರಿಗೆ ಭಾರತ ಅಕ್ಕಿ ಮತ್ತು ಗೋಧಿಯನ್ನು ಆಮದು ಮಾಡಿಕೊಳ್ಳಬೇಕಾಗಿ ಬಂದಿತ್ತು. ಭಾರತದ ವಿದೇಶಿ ವಿನಿಮಯ ಸಂಗ್ರಹವನ್ನು ಖರ್ಚು ಮಾಡಬೇಕಾಗಿದ್ದ ಕಾರಣ ಇದು ಸುಲಭದ ಕೆಲಸವಾಗಿರಲಿಲ್ಲ. 1965ರಲ್ಲಿ ರೂ. 2194 ಕೋಟಿ ಆಮದು ಮತ್ತು ರೂ. 1264 ಕೋಟಿ ರಫ್ತು ಇದ್ದ ಭಾರತದ ವ್ಯಾಪಾರ ವಿತ್ತೀಯ ಕೊರತೆಯು ಅತ್ಯಧಿಕ ರೂ. 930 ಕೋಟಿಯಾಗಿತ್ತು.

ಆಹಾರವನ್ನು ಆಮದು ಮಾಡಿಕೊಳ್ಳಲು ಹಣವಿಲ್ಲದೆ ಭಾರತ ಅಮೆರಿಕದ ಸಹಾಯ ಯಾಚಿಸಿತು. ಅಮೆರಿಕದ ಪಬ್ಲಿಕ್ ಲಾ 480ಯಲ್ಲಿ ಉಲ್ಲೇಖಿಸಲಾಗಿದ್ದ ಶಾಂತಿಗಾಗಿ ಆಹಾರ ಕಾರ್ಯಕ್ರಮದ ನೆರವು ಪಡೆದುಕೊಳ್ಳುವುದು ಭಾರತದ ಉದ್ದೇಶವಾಗಿತ್ತು. ಈ ಕಾನೂನಿನ ಪ್ರಕಾರ ಭಾರತದಂತಹ ಬಡ ರಾಷ್ಟ್ರಗಳು ತಮ್ಮದೇ ಕರೆನ್ಸಿಯಲ್ಲಿ ಅಮೆರಿಕಕ್ಕೆ ಹಣ ಪಾವತಿಸಬೇಕಾಗಿತ್ತು. ಆಗಿನ ಅಮೆರಿಕದ ಅಧ್ಯಕ್ಷ ಲಿಂಡನ್ ಬಿ ಜಾನ್ಸನ್ 16 ದಶಲಕ್ಷ ಟನ್ ಗಳಷ್ಟು ಗೋಧಿ ಮತ್ತು 1 ದಶಲಕ್ಷ ಅಕ್ಕಿಯನ್ನು ಭಾರತಕ್ಕೆ ಸಾಗಿಸಲು ಒಪ್ಪಿದರು. ಅಲ್ಲದೆ ಭಾರತದ ಹಣಕಾಸು ಬಿಕ್ಕಟ್ಟು ನಿವಾರಣೆಗೆ ಅಮೆರಿಕ 1 ಶತಕೋಟಿ ಹಣಕಾಸು ನೆರವನ್ನೂ ನೀಡಿತು. ಇಂದಿರಾಗಾಂಧಿ ಈ ನೆರವು ಸ್ವೀಕರಿಸುವ ನಿರ್ಧಾರ ಬಹಳ ಕುಖ್ಯಾತಿ ಪಡೆಯಿತು.

ಖ್ಯಾತ ವಕೀಲರೂ ಆಗಿರುವ ಕೇಂದ್ರ ಹಣಕಾಸು ಸಚಿವ ಸಚೀಂದ್ರ ಚೌಧುರಿ ತಮ್ಮ ಬಜೆಟ್ ಭಾಷಣದಲ್ಲಿ ಸದ್ಯಕ್ಕೆ ಈ ನೆರವು ಪಡೆಯುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ದೇಶದ ಬಿಕ್ಕಟ್ಟಿಗೆ ಸದ್ಯದ ಉತ್ತಮ ಪರಿಹಾರ ಇದೆಂದೂ ಮುಂದಿಟ್ಟಿದ್ದರು. ಆದರೆ ಈ ನೆರವನ್ನು ಸ್ಥಗಿತಗೊಳಿಸಿ ಭಾರತ ಉದಾರೀಕರಣವನ್ನು ಅಪ್ಪಿಕೊಳ್ಳಬೇಕು ಎಂದು ಹೇಳಿದಾಗ ಇಂದಿರಾ ಗಾಂಧಿ ಎದೆಗಾರಿಕೆಯ ಹೆಜ್ಜೆ ಇಟ್ಟರು. 1966 ಜೂನ್ 6ರಂದು ಅವರು ರೂಪಾಯಿ ಅಪಮೌಲ್ಯದ ನಿರ್ಧಾರ ಕೈಗೊಂಡರು. ರೂಪಾಯಿ ಮುಂದೆ ಡಾಲರ್ ಶೇ. 57.4ರಷ್ಟು ಏರುವಂತೆ ಮಾಡಿದರು. ಈ ಬದಲಾವಣೆಗೂ ವ್ಯಾಪಕ ಟೀಕೆ ವ್ಯಕ್ತವಾಯಿತು. ಅಮೆರಿಕ ಮತ್ತು ವಿಶ್ವಬ್ಯಾಂಕಿಗೆ ಭಾರತವನ್ನು ಮಾರಲಾಗಿದೆ ಎನ್ನುವ ಮಾತು ಕೇಳಿಬಂತು. ಆದರೆ ಚೌಧುರಿ ಸ್ಥಾನದಲ್ಲಿ ಗಾಂಧಿವಾದಿ ಮೊರಾರ್ಜಿ ದೇಸಾಯಿ ಬಂದಾಗ ಈ ಟೀಕೆ ಬಿದ್ದು ಹೋಯಿತು.

ಆದರೆ ರೂಪಾಯಿಯ ಅಪಮೌಲ್ಯ ಕೆಲಸ ಮಾಡಿತು. ಭಾರತ ದಿವಾಳಿಯಾಗುವುದನ್ನು ತಪ್ಪಿಸಿಕೊಂಡಿತು. ರಫ್ತು ನೀತಿಯ ಬದಲಾವಣೆಗಳು ಭಾರತದ ವಿತ್ತೀಯ ಕೊರತೆಯನ್ನು 1970ಕ್ಕಾಗುವಾಗ ರೂ. 100 ಕೋಟಿಗೆ ಇಳಿಸಿತು. ನಂತರದ ವರ್ಷದಲ್ಲಿ ಭಾರತ ಬಾಂಗ್ಲಾದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿತು. ಈ ಸಮಯದಲ್ಲಿ ಹಸಿರು ಕ್ರಾಂತಿಯ ಮಾಸ್ಟರ್ ಮೈಂಡ್ ನೋರ್ಮನ್ ಬೊರ್ಲಾಗ್ ನೇತೃತ್ವದಲ್ಲಿ ಭಾರತ ಸಾಕಷ್ಟು ಅಕ್ಕಿ, ಗೋಧಿ ಮತ್ತು ಜೋಳವನ್ನು ಬೆಳೆಸಿ ರಫ್ತು ಅವಕಾಶಕ್ಕಾಗಿ ಕಾಯುತ್ತಿತ್ತು. ಬೊರ್ಲಾಗ್ ಅವರಿಗೆ 1970ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯೂ ಸಿಕ್ಕಿದೆ. ಈ ಸ್ವಾವಲಂಬನೆಗೆ ಭಾರತೀಯರು ಬಹಳ ಖುಷಿಪಟ್ಟಿದ್ದರು.

50 ವರ್ಷಗಳ ಹಿಂದೆ ಭಾರತ ತೆಗೆದುಕೊಂಡ ಐತಿಹಾಸಿಕ ನಿರ್ಧಾರವು ಅಲ್ಪಾವಧಿ ಮತ್ತು ಧೀರ್ಘಾವಧಿ ಪರಿಣಾಮಗಳನ್ನು ಬೀರಿದೆ. ಆದರೆ ಈ ಬಗ್ಗೆ ಹೆಚ್ಚು ಮಂದಿಗೆ ತಿಳಿದೇ ಇಲ್ಲ. 1947 ಆಗಸ್ಟ್ 15ರಂದು ಭಾರತ ಸ್ವತಂತ್ರ್ಯವಾದಾಗ ಒಂದು ಡಾಲರ್ ಬೆಲೆ ಒಂದು ರೂಪಾಯಿ ಆಗಿತ್ತು. ಆದರೆ ಈಗ 2016ರಲ್ಲಿ ರೂಪಾಯಿ ಅಪಮೌಲ್ಯ ಶೇ. 6600 ರಷ್ಟಿದೆ. ಇಲ್ಲಿಂದ ನಾವೆತ್ತಕಡೆಗೆ ಸಾಗಲಿದ್ದೇವೆ?


ಕೃಪೆ: http://www.indiatimes.com/

share
ವಾರ್ತಾಭಾರತಿ
ವಾರ್ತಾಭಾರತಿ
Next Story
X