ಬಂಟ್ವಾಳ: ಪರಿಹಾರ ಚೆಕ್ ವಿತರಣೆ

ಬಂಟ್ವಾಳ,ಆ.7: ತಾಲೂಕಿನ ಬೋಳಂತೂರು ಗ್ರಾಮದ ಮಹಮ್ಮದ್ ಕಮಾಲ್‌ರವರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಯಾದ ರೂ.20,000 ಮೊತ್ತದ ಚೆಕ್ಕನ್ನು ಅರಣ್ಯ, ಪರಿಸರ, ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ಇವರು ಇತ್ತೀಚಿಗೆ ಸಚಿವರ ಬಂಟ್ವಾಳ ಕಛೇರಿಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಬೋಳಂತೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚಂದ್ರಶೇಖರ್ ರೈ, ಜನಾರ್ಧನ್ ಚೆಂಡ್ತಿಮಾರ್ ಮೊದಲಾದವರು ಉಪಸ್ಥಿತರಿದ್ದರು.
Next Story





