ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಕಡಬ,ಆ.7: ಇತಿಹಾಸ ಕಟ್ಟುವ ಪ್ರಕ್ರಿಯೆಯ ಹಿಂದೆ ದೊರೆತಿರುವ ಕಲ್ಲಿನ ಶಾಸನಗಳು, ಕಥನಗಳೇ ಇತಿಹಾಸದ ಪ್ರತಿಧ್ವನಿಗಳಾಗಿವೆ ಎಂದು ವಾಮನಪದವು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ವಸಂತ ಕುಮಾರ್ ಎಚ್. ಅಭಿಪ್ರಾಯಪಟ್ಟರು. ಅವರು ಏಮ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ "ತುಳುನಾಡಿನ ಇತಿಹಾಸ ಕಥನ" ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅದ್ಯಕ್ಷತೆಯನ್ನು ಪ್ರಾಂಶುಪಾಲರಾದ ಕು. ಸಮೀರಾ ಕೆ.ಎ. ವಹಿಸಿದ್ದರು. ವೇದಿಕೆಯಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥೆ ಶ್ರೀಮತಿ ನಳಿನಾಕ್ಷಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಸಂಘದ ಮುಖ್ಯಸ್ಥ ಇಕ್ಬಾಲ್ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ನಳಿನಾಕ್ಷಿ ಸ್ವಾಗತಿಸಿ, ದ್ವಿತೀಯ ಬಿ ಎ ವಿದ್ಯಾರ್ಥಿನಿ ಪದ್ಮಾವತಿ ವಂದಿಸಿದರು. ತೃತೀಯ ಬಿ.ಎ ವಿದ್ಯಾರ್ಥಿನಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.
Next Story





