Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ...

ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ವಾರ್ತಾಭಾರತಿವಾರ್ತಾಭಾರತಿ7 Aug 2016 7:29 PM IST
share
ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಹಾಸನ,ಆ.7: ಮೀಟರ್ ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ತಡರಾತ್ರಿ ನಡೆದಿದೆ.

     ನಗರದ ತಣ್ಣಿರುಹಳ್ಳದಲ್ಲಿ ವಾಸವಾಗಿರುವ ಸಯ್ಯಿದ್ ಮುಬಾರಕ್ (34) ಎಂಬುವರು ಮಾಡಿದ ಸಾಲಕ್ಕೆ ಮೀಟರ್ ಬಡ್ಡಿದಾರರ ಹಿಂಸೆ ತಾಳಲಾರದೆ ವಿಷ ಸೇವಿಸಿ ಸಾವಿಗೆ ಶರಣಾಗಲು ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಕ್ಯಾಂಟಿನ್ ಹಾಗೂ ಇತರೆ ಉದ್ದೇಶದಲ್ಲಿ ಕಳೆದ ಮೂರು ವರ್ಷಗಳ ಹಿಂದೆ 3 ಲಕ್ಷದ 50 ಸಾವಿರ ರೂಗಳನ್ನು ಸಾಲವಾಗಿ ಪಡೆಯಲಾಗಿತ್ತು. ತಣ್ಣಿರುಹಳ್ಳದಲ್ಲಿ ಒಂದು ಕ್ಯಾಂಟಿನ್ ನಡೆಸುತ್ತಿದ್ದು, ಆದರೇ ಕೆಲ ತಿಂಗಳ ಹಿಂದೆ ಡೆಂಗ್ ಜ್ವರ ಬಂದಿದ್ದರಿಂದ ಆಸ್ಪತ್ರೆ ಸೇರಬೇಕಾಯಿತು. ಕ್ಯಾಂಟಿನ್ ನಡೆಸಲು ಸಾಧ್ಯವಾಗದೆ ಇದ್ದುದರಿಂದ ಸಲ್ಪ ಹಣಕಾಸಿನಲ್ಲಿ ವ್ಯತ್ಯಾಸವಾಗಿದೆ. ಸಾಲ ಪಡೆದವರಿಗೆ ಸರಿಯಾಗಿ ಬಡ್ಡಿ ನೀಡಿದರೂ ಕೂಡ ಆಗಾಗ್ಗೆ ಮನೆ ಬಾಗಿಲಿಗೆ ಬಂದು ಅವಾಚ್ಯ ಪದಗಳಿಂದ ನಿಂದಿಸಲಾಗುತಿತ್ತು ಎಂದು ದೂರಿದರು. ಈ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲು ಮುಂದಾಗಿದ್ದಾರೆ. ಸಿಟಿ ಪೊಲೀಸ್ ಠಾಣೆಗೆ ದೂರು ನೀಡಿ, ಸ್ಪಂದಿಸದಿದ್ದರೇ ನಮಗೆ ತಿಳಿಸಬೇಕು ಎಂದು ಸಲಹೆ ನೀಡಿ ನಮ್ಮ ದೂರಿಗೆ ಸೂಚನೆ ಬರೆದು ಕಳುಹಿಸಲಾಗಿತ್ತು. ಅವರ ಸೂಚನೆಯಂತೆ ದೂರು ನೀಡಿ ಮೂರು ದಿವಸವಾದರೂ ಬಡ್ಡಿದಾರರ ವಿರುದ್ಧ ಯಾವ ಕ್ರಮ ಕೈಗೊಳ್ಳಲಿಲ್ಲ. ನಂತರ ಹಣ ನೀಡದವರು ಮೊಬೈಲಿಗೆ ಕರೆ ಹಾಗೂ ಮನೆಯತ್ತಿರ ಬಂದು ಹಿಂಸೆ ಕೊಡಲು ಮುಂದಾದಗ ಬೇಸರದಿಂದ ವಿಷ ಸೇವನೇ ಮಾಡಲು ಮುಂದಾಗಿರುವುದಾಗಿ ಇದೆ ವೇಳೆ ತಿಳಿಸಿದ್ದಾರೆ. ಈಗ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೊರಟ ನಡೆಸುತ್ತಿದ್ದಾರೆ.

     ಬಡ್ಡಿಗಾರರ ಹಿಂಸೆ ತಾಳಲಾರದೆ ವಿಷ ಸೇವನೆ ಮಾಡಿದ ಸಯ್ಯಿದ್ ಮುಬಾರಕ್ ಪತ್ರಕರ್ತರೊಂದಿದೆ ಮಾತನಾಡಿ, ಕ್ಯಾಂಟಿನ್ ಹಾಗೂ ಇತರೆ ಉದ್ದೇಶಕ್ಕೆ ಸಾಲವನ್ನು ಅಡ್ಲಿಮನೆ ನಿವಾಸಿ ಕೇಶವಮೂರ್ತಿ, ಆತನ ಮಗ ಮಧುಚಂದ್ರ, ಪೆನ್ಷನ್ ಮೊಹಲ್ಲಾ ನಿವಾಸಿ, ವೇಲು ಮತ್ತು ಆತನ ಮಗ ಮದನ್ ಹಾಗೂ ಹೊಳೆನರಸೀಪುರದ ನಿವಾಸಿ ಹೇಮರಾಜ್ ಇವರುಗಳಿಂದ ಪಡೆದಿದ್ದೇನೆ. ಸರಿಯಾದ ಸಮಯಕ್ಕೆ ಕಳೆದ ಎರಡು ವರ್ಷಗಳಿಂದಲೂ ಬಡ್ಡಿ ಕಟ್ಟುತ್ತಿದ್ದರೂ ಆಗಾಗ್ಗೆ ಬಂದು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರೂ. ಇವರ ಕಾಟ ತಾಳಲಾರದೆ ಎಸ್ಪಿ ಬಳಿ ದೂರು ನೀಡಿ ನನ್ನ ಅಳಲು ತೋಡಿಕೊಂಡಿದ್ದನು. ಸಿಟಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು. ದೂರು ನೀಡಿದರೂ ಇದುವರೆಗೂ ಸಾಲ ನೀಡಿದವರ ಮೇಲೆ ಯಾವ ಕ್ರಮವೂ ಜರುಗಿಸಿಲ್ಲ. ಪ್ರತಿನಿತ್ಯ ಮೀಟರ್ ಬಡ್ಡಿಗಾರರ ಹಿಂಸೆ ಸಹಿಸಲಾರದೆ, ಕ್ಯಾಂಟಿನ್ ನಡೆಸದೆ ಕದ್ದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬೇಸರದಿಂದ ವಿಷ ಸೇವನೆಗೆ ಮುಂದಾಗಿರುವುದಾಗಿ ಹೇಳಿಕೊಂಡರು. 

    ಸಯ್ಯದ್ ಮುಬಾರಕ್ ಪತ್ನಿ ಹೇಳುವಂತೆ ಕಳೆದ ಎರಡು ವರ್ಷಗಳ ಹಿಂದೆ ಒಂದುವರೆ ಲಕ್ಷ ರೂ.ಗಳನ್ನು ಕೆಲವರಿಂದ ಬಡ್ಡಿಗೆ ಸಾಲವನ್ನು ಕ್ಯಾಂಟಿನ್ ಮಾಡುವ ಉದ್ದೇಶದಲ್ಲಿ ಪಡೆದಿದ್ದರು. ಬಡ್ಡಿ ಮತ್ತು ಚಕ್ರ ಬಡ್ಡಿ ಸೇರಿ ಈಗ 7 ಲಕ್ಷ ರೂಗಳಾಗಿವೆ. ಮಧ್ಯೆ ಡೆಂಗ್ ಜ್ವರ ಬಂದಿದ್ದರಿಂದ ಹಣ ಕೊಡಲು ಕಷ್ಟವಾಯಿತು. ಸಾಲ ನೀಡಿದವರು ಕರೆ ಮಾಡಿ ಮತ್ತು ಮನೆಗೆ ಬಂದು ಹಿಂಸೆ ನೀಡಲಾಗುತ್ತಿತ್ತು. ಕೂಡಲೇ ಹಣ ನೀಡದಿದ್ದರೇ ನೀಡಲಾಗಿರುವ ಚೆಕನ್ನು ಕೋರ್ಟಿಗೆ ಹಾಕುವುದಾಗಿ ಬೆದರಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ನಮ್ಮ ನೋವು ಹೇಳಿಕೊಂಡಾಗ ಸಿಟಿ ಪೊಲೀಸ್ ಠಾಣೆಗೆ ದೂರು ನೀಡಲು ಸಲಹೆ ನೀಡಿ, ನಿಮಗೆ ನ್ಯಾಯದೊರಕದಿದ್ದರೇ ಇಲ್ಲಿಗೆ ಮತ್ತೆ ಬರಲು ಹೇಳಿದ್ದರು. ಮೂರು ದಿನಗಳಾದರೂ ಪೊಲೀಸರು ಸ್ಪಂದಿಸಲಿಲ್ಲ.ಮೂರು ದಿನಗಳ ಹಿಂದೆ ಮತ್ತೆ ಹಿಂಸೆ ನೀಡಿದ್ದರಿಂದ ಮನನೊಂದು ರಾತ್ರಿ ಮನೆಯಿಂದ ಕೆಳಗೆ ಇಳಿದು ಕ್ಯಾಂಟಿನ್ ಬಳಿ ವಿಷ ಸೇವನೆ ಮಾಡಿರುವುದಾಗಿ ವಿವರ ತಿಳಿಸಿದರು.

    ನಗರದ ಸಿಟಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಿಂದ ವಿಚಾರ ತಿಳಿದು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X