Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಎಲ್ಲಾ ಸಂಸ್ಕೃತಿಗಳಿಗೆ ಗೌರವ ನೀಡಿದರೆ...

ಎಲ್ಲಾ ಸಂಸ್ಕೃತಿಗಳಿಗೆ ಗೌರವ ನೀಡಿದರೆ ಪ್ರಪಂಚದ ಅಭಿವೃದ್ಧಿ ಸಾಧ್ಯ.

ವಾರ್ತಾಭಾರತಿವಾರ್ತಾಭಾರತಿ7 Aug 2016 11:20 PM IST
share
ಎಲ್ಲಾ ಸಂಸ್ಕೃತಿಗಳಿಗೆ ಗೌರವ ನೀಡಿದರೆ ಪ್ರಪಂಚದ ಅಭಿವೃದ್ಧಿ ಸಾಧ್ಯ.

ಎಲ್ಲಾ ಸಂಸ್ಕೃತಿಗಳಿಗೆ ಗೌರವ ನೀಡಿದರೆ ಪ್ರಪಂಚದ ಅಭಿವೃದ್ಧಿ ಸಾಧ್ಯ.

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

  ಆರೆಸ್ಸೆಸ್ ಸಂಸ್ಕೃತಿಗೂ ಅಭಿವೃದ್ಧಿಗೂ ಏನು ಸಂಬಂಧ?

---------------------

  ಗೋಹತ್ಯೆ ಎಂದರೆ ಸ್ವಹತ್ಯೆ ಮಾಡಿಕೊಂಡಂತೆ.

-ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ

  ಹೆಣ್ಣಿನ ಮಾನಕ್ಕೆ ಕೈ ಹಾಕಿ, ತಾವು ಹತ್ಯೆ ಮಾಡಿಕೊಂಡದ್ದು ಏನನ್ನು ?

---------------------

  ಆನಂದಿಬೆನ್ ರಾಜೀನಾಮೆಗೆ ಆಮ್ ಆದ್ಮಿ ಪಕ್ಷದ ಭಯವೇ ಕಾರಣ.

-ಅರವಿಂದ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ

ನರೇಂದ್ರ ಮೋದಿಯವರು ಸ್ವದೇಶಕ್ಕೆ ಬರದೇ ವಿದೇಶದಲ್ಲೇ ತಿರುಗಲೂ ನಿಮ್ಮ ಭಯವೇ ಕಾರಣವಂತೆ.

---------------------

  ಆಮಿರ್‌ಖಾನ್‌ಗೆ ದೇಶಭಕ್ತಿಯ ಅರಿವಿಲ್ಲ.

-ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ಮುಖಂಡ

 ನಿಮ್ಮಷ್ಟು ಚೆನ್ನಾಗಿ ನಟಿಸಲು ಅವರಿಗೆ ಬರುವುದಿಲ್ಲ ಬಿಡಿ.

---------------------

ಸ್ವಾತಂತ್ರ ಚಳವಳಿಗೆ ಸ್ಫೂರ್ತಿ ತುಂಬಿದ ಹರಿಕಥೆ ಕೇಳಲು ಈಗ ಜನರಿಗೆ ಆಸಕ್ತಿ ಇಲ್ಲ.

-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ

  ದಲಿತ, ಶೂದ್ರರ ಸ್ವಾತಂತ್ರವನ್ನು ಕಸಿದುಕೊಂಡ ಹರಿಕಥೆಯ ಕುರಿತಂತೆ ನಿಮಗಲ್ಲದೆ ಇನ್ನಾರಿಗೆ ಆಸಕ್ತಿ ಇದ್ದೀತು?

---------------------

ಹಿಂದೂಗಳು ನಪುಂಸಕರು.

-ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ಆದುದರಿಂದಲೇ ನಿಮಗೆ ಈ ಹೇಳಿಕೆ ನೀಡಲು ಧೈರ್ಯ ಬಂತು.

---------------------

ಸಿದ್ದರಾಮಯ್ಯ ನನ್ನ ಸ್ನೇಹಿತ.

-ದೇವೇಗೌಡ, ಮಾಜಿ ಪ್ರಧಾನಿ

ಕುಮಾರಸ್ವಾಮಿ ನಿಮ್ಮ ಶತ್ರುವೇ?

---------------------

ಹಿಂದೂ ಸಂಪ್ರದಾಯ ಮತಾಂತರವನ್ನು ಒಪ್ಪುವುದಿಲ್ಲ.

-ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ

ಹಿಂದೂ ಸಂಪ್ರದಾಯವನ್ನು ಒಪ್ಪದವರಷ್ಟೇ ಮತಾಂತರ ಆಗುತ್ತಾರೆ.

---------------------

ಅತ್ಯಾಚಾರಿಗಳು ಭಯೋತ್ಪಾದಕರಿದ್ದಂತೆ.

- ಕಪಿಲ್ ಮಿಶ್ರಾ, ದಿಲ್ಲಿ ಸಚಿವ

ಭಯೋತ್ಪಾದಕರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದ್ದು ಈವರೆಗೆ ವರದಿಯಾಗಿಲ್ಲ.

---------------------

ಮಹಾದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಸ್ಥಿಕೆ ಅನಿವಾರ್ಯ.

-ಕಾಗೋಡು ತಿಮ್ಮಪ್ಪ, ಸಚಿವ

ಅವರ ಮಧ್ಯಸ್ಥಿಕೆಯಿಂದಲೇ ಕರ್ನಾಟಕಕ್ಕೆ ಈ ಸ್ಥಿತಿ ಒದಗಿರುವುದು.

---------------------

ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುವ ಪ್ರಶ್ನೆಯೇ ಇಲ್ಲ.

-ಎಚ್.ವೈ.ಮೇಟಿ, ಸಚಿವ

ಹಳೆ ಮದ್ಯದಂಗಡಿಗಳಿಗೆ ಹೊಸದಾಗಿ ಪರವಾನಿಗೆ ನೀಡುತ್ತೀರಿ ಅಂತಾಯಿತು.

---------------------

ಈ ಬಾರಿ ನನ್ನ ಹುಟ್ಟುಹಬ್ಬ ಆಚರಿಸಲು ಮನಸ್ಸು ಒಪ್ಪುತ್ತಿಲ್ಲ, ಆಸಕ್ತಿಯೂ ಇಲ್ಲ.

-ಡಾ.ಜಿ. ಪರಮೇಶ್ವರ, ಸಚಿವ

ಗೃಹ ಸಚಿವ ಸ್ಥಾನ ತೃಪ್ತಿ ತಂದಿದೆ ಎಂದಾಯಿತು.

---------------------

ಚುನಾವಣೆಯಲ್ಲಿ ಮೋಸ ನಡೆಯುವ ಭೀತಿಯಿದೆ.

-ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ

ಚುನಾವಣೆಯಲ್ಲಿ ನೀವೇ ಅಮೆರಿಕನ್ನರ ಪಾಲಿನ ಬಹುದೊಡ್ಡ ಮೋಸ.

--------------------

ಭ್ರಷ್ಟಾಚಾರದಲ್ಲಿ ತೊಡಗುವವರ ಕೈಗಳನ್ನು ಕತ್ತರಿಸಿ ಹಾಕಬೇಕು.

-ಸುರೇಶ್ ನವಾಲ್, ಗೋವಾ ವಿಪಕ್ಷ ನಾಯಕ

ಎಲ್ಲ ರಾಜಕಾರಣಿಗಳೂ ಕೈ ಯಿಲ್ಲದೆ ಓಡಾಡಬೇಕಾಗುತ್ತದೆ.

---------------------

  ನಮ್ಮ ಕನಸುಗಳು ದೊಡ್ಡವು.

-ಸುರೇಶ್ ಪ್ರಭು, ಕೇಂದ್ರ ಸಚಿವ

ಅಂದರೆ ದೊಡ್ಡ ದೊಡ್ಡ ಹಗರಣಗಳೇ?

---------------------

ಉತ್ತರ ಪ್ರದೇಶದಲ್ಲಿ ಚಮತ್ಕಾರವೊಂದು ನಡೆಯುವ ಅಗತ್ಯ ನಮಗಿದೆ.

- ರಾಜ್ ಬಬ್ಬರ್, ಉ.ಪ. ಕಾಂಗ್ರೆಸ್ ಅಧ್ಯಕ್ಷ

ಉದಯ್ ಜಾದುಗಾರ್‌ರನ್ನು ಪಕ್ಷಾಧ್ಯಕ್ಷರನ್ನಾಗಿ ಮಾಡಿ.

---------------------

ಆನಂದಿಬೆನ್‌ರನ್ನು ಬಲಿಪಶು ಮಾಡುವುದರಿಂದ ಬಿಜೆಪಿಯನ್ನು ರಕ್ಷಿಸಲು ಸಾಧ್ಯವಿಲ್ಲ.

-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

ಕಾಂಗ್ರೆಸ್‌ನಲ್ಲಿ ತಮ್ಮನ್ನು ಬಲಿಪಶು ಮಾಡಿದಂತೆ.

---------------------

ಸೂರ್ಯ ಚಂದ್ರರು ಇರುವ ತನಕ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ.

-ಪ್ರಮೋದ್ ಮಧ್ವರಾಜ್, ಸಚಿವ

ಹಾಗಾದರೆ ಜನರು ಸೂರ್ಯ, ಚಂದ್ರರನ್ನೇ ಮುಗಿಸುವ ನಿರ್ಧಾರಕ್ಕೆ ಬರಬಹುದು.

---------------------

ಕಾಶ್ಮೀರದಲ್ಲಿ ಈಗ ಮೂರನೆ ತಲೆಮಾರಿನ ಸ್ವಾತಂತ್ರ ಹೋರಾಟ ನಡೆಯುತ್ತಿದೆ.

-ನವಾಝ್ ಶರೀಫ್, ಪಾಕ್ ಪ್ರಧಾನಿ

ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸ್ವಾತಂತ್ರ ಹೋರಾಟ ಎಷ್ಟನೆ ತಲೆ ಮಾರಿನದ್ದು?

---------------------

ನರೇಂದ್ರ ಮೋದಿ ಸರಕಾರ ವಿಶ್ವಮನ್ನಣೆ ಗಳಿಸುತ್ತಿದೆ.

-ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವ

  ಹೌದು. ಗೋರಕ್ಷಕರ ಕುರಿತಂತೆ ನರೇಂದ್ರ ಮೋದಿಯವರೇ ಅದನ್ನು ಒಪ್ಪಿಕೊಂಡಿದ್ದಾರೆ.

---------------------

ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಕಾರ್ಯಕರ್ತರು ಶ್ರಮಿಸಬೇಕು.

-ಸುರೇಶ್ ಕುಮಾರ, ಶಾಸಕ

ಆದರೆ ಉಳಿದ ನಾಯಕರು ಅದಕ್ಕೆ ಅವಕಾಶ ನೀಡಬೇಕಲ್ಲ?

---------------------

ಉಗ್ರರನ್ನು ಬೆಂಬಲಿಸುವ ದೇಶಗಳಿಗೆ ಶಿಕ್ಷೆಯಾಗಲಿ.

-ರಾಜನಾಥ ಸಿಂಗ್, ಕೇಂದ್ರ ಸಚಿವ

ಅಭಿನವ ಭಾರತ, ಸನಾತನಸಂಸ್ಥೆಯಂತಹ ಉಗ್ರರನ್ನು ಬೆಂಬಲಿಸುವ ದೇಶಗಳಿಗೆ ಯಾವ ಶಿಕ್ಷೆ?

---------------------

ಮಹಾದಾಯಿ ನದಿ ನೀರು ಹಂಚಿಕೆ ಬಗ್ಗೆ ಬಿಜೆಪಿ ರಾಜಕಾರಣ ಮಾಡುತ್ತಿದೆ.

-ಪ್ರಕಾಶ್ ಹುಕ್ಕೇರಿ, ಸಂಸದ

ಗೋವಾದ ಬೀರಿನ ಋಣ ತೀರಿಸುತ್ತಿರಬೇಕು.

--------------------

ಪ್ರಮೋದ್ ಮಧ್ವರಾಜ್ ಅವರನ್ನು ಸನ್ಮಾನ್ಯ ಸಚಿವ ಎನ್ನುವ ಬದಲು ‘ಸನ್ಮಾನ’ ಸಚಿವ ಎಂದರೆ ಸೂಕ್ತ.

-ರಘುಪತಿ ಭಟ್, ಮಾಜಿ ಶಾಸಕ

  ತಾವು ಶಾಸಕರಾಗಿದ್ದಾಗ ಕಳೆದುಕೊಂಡ ಮಾನದ ಬಗ್ಗೆ ಏನು ಹೇಳುತ್ತೀರಿ?

---------------------

ಜನ ರಾಜ್ಯದಲ್ಲಿ ಯಾವಾಗ ಬಿಜೆಪಿ ಅಧಿಕಾರಕ್ಕೆ ಬರುತ್ತದೋ ಎಂದು ಕಾಯುತ್ತಿದ್ದಾರೆ.

-ಡಿ.ವಿ ಸದಾನಂದ ಗೌಡ, ಕೇಂದ್ರ ಸಚಿವ

ಕಾಯುತ್ತಿರುವುದು ಜನರಲ್ಲ, ಮುಖ್ಯಮಂತ್ರಿಯ ಸ್ಥಾನದ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನಾಯಕರು.

--------------------

ಸಚಿವರು, ಅಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಸ್ವಾತಂತ್ರ.

-ಅರುಣ್ ಜೇಟ್ಲಿ, ಕೇಂದ್ರ ಸಚಿವ

ನರೇಂದ್ರ ಮೋದಿಯನ್ನು ಹೊಗಳುವುದಕ್ಕೆ.

---------------------

share
ವಾರ್ತಾಭಾರತಿ
ವಾರ್ತಾಭಾರತಿ
Next Story
X