ಮಹಿಳೆಯರ ಸಿಂಗಲ್ಸ್: ವೀನಸ್, ಇವಾನೊವಿಕ್ಗೆ ಶಾಕ್
ರಿಯೋ ಡಿ ಜನೈರೊ, ಆ.7: ಮಾಜಿ ಒಲಿಂಪಿಕ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಬೆಲ್ಜಿಯಂನ ಕ್ರಿಸ್ಟೆನ್ ಫ್ಲಿಪ್ಕಿನ್ಸ್ ವಿರುದ್ಧ ಸೋಲುವ ಮೂಲಕ ರಿಯೋ ಗೇಮ್ಸ್ನಿಂದ ನಿರ್ಗಮಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವೀನಸ್ ವಿಶ್ವದ ನಂ.62ನೆ ಆಟಗಾರ್ತಿ ಫ್ಲಿಪ್ಕಿನ್ಸ್ ವಿರುದ್ಧ 4-6, 6-3, 7-6(5) ಸೆಟ್ಗಳ ಅಂತರದಿಂದ ಸೋತಿದ್ಧಾರೆ.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮಾಜಿ ವಿಶ್ವದ ನಂ.1 ಆಟಗಾರ್ತಿ ಅನಾ ಇವಾನೊವಿಕ್ ವಿಶ್ವದ ನಂ.12ನೆ ಆಟಗಾರ್ತಿ ಕಾರಿಯಾ ಸುಯರೆಝ್ ನವಾರ್ರೊ ವಿರುದ್ಧ 2-6, 6-1, 6-2 ಸೆಟ್ಗಳ ಅಂತರದಿಂದ ಸೋತಿದ್ದಾರೆ.
2000ರ ಸಿಡ್ನಿ ಗೇಮ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ವೀನಸ್ ಮಹಿಳೆಯರ ಡಬಲ್ಸ್ನಲ್ಲಿ ಸಹೋದರಿಗೆ ಸೆರೆನಾ ವಿಲಿಯಮ್ಸ್ನ್ನು ಸ್ಪರ್ಧೆಗಿಳಿಯಲಿದ್ದಾರೆ. ವಿಲಿಯಮ್ಸ್ ಸಹೋದರಿಯರು ನಾಲ್ಕನೆ ಬಾರಿ ಡಬಲ್ಸ್ ವಿಭಾಗದಲ್ಲಿ ಚಿನ್ನದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
Next Story