ಸುಳ್ಯ ರಂಗಮನೆಯಲ್ಲಿ ಕೊಲಾಜ್ ಚಿತ್ರಕಲಾ ಪ್ರದರ್ಶನ
ಸುಳ್ಯ, ಆ.7: ಇಲ್ಲಿನ ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ 25 ವಿದ್ಯಾರ್ಥಿಗಳು ತಯಾರಿಸಿದ ‘ಕೊಲಾಜ್’ ಚಿತ್ರಕಲಾಕೃತಿಗಳ ಪ್ರದರ್ಶನ ಆರಂಭಗೊಂಡಿದೆ.
ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ.ಪ್ರಭಾಕರ ಶಿಶಿಲ ಪ್ರದರ್ಶನ ಉದ್ಘಾಟಿಸಿದರು. ಕರ್ನಾಟಕ ಅರೆಬಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡಮಿಯ ಮಾಜಿ ಅಧ್ಯಕ್ಷ ಎನ್.ಎಸ್. ದೇವಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲ ಕುಳ, ಸುಳ್ಯ ತಾಲೂಕು ದೈಹಿಕ ಶಿಕ್ಷಕ ಪರಿವೀಕ್ಷಕ ಲಕ್ಷ್ಮೀಶ ರೈ ಮರ್ಕಂಜ, ನಿವೃತ್ತ ಕಲಾ ಶಿಕ್ಷಕ ಎಂ.ಎಸ್. ಪುರುಷೋತ್ತಮ, ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಸಂಚಾಲಕ ಡಾ. ಸುಂದರ್ ಕೇನಾಜೆ ಮುಖ್ಯ ಅತಿಥಿಗಳಾಗಿದ್ದರು.
ಚಿತ್ರಕಲಾ ಶಿಕ್ಷಕರಾದ ಎಂ.ಎಸ್. ಪುರುಷೋತ್ತಮ, ವಿ.ಶ್ರೀರಾಮ ಮೂರ್ತಿ, ತಾರನಾಥ್ ಕೈರಂಗಳ, ಉಮೇಶ್ ವಳಲಂಬೆ, ಶ್ರೀಹರಿ ಪೈಂದೋಡಿ, ಪದ್ಮನಾಭ ಕೊನಾಡು, ಪ್ರಸನ್ನ ಐವರ್ನಾಡು, ಸತೀಶ್ ಪಂಜ, ಸುಜಿತ್ ಕೆ., ಸಂದೇಶ್ ಅಡ್ಕಾರ್, ಕೆಂಚವೀರಪ್ಪ, ಮಂಜು ಬೀರಮಂಗಿಲ ಉಪಸ್ಥಿತರಿದ್ದರು. ಈ ಕೊಲಾಜ್ ಚಿತ್ರಕಲಾ ಪ್ರದರ್ಶನವು ಪ್ರತಿದಿನ ರಂಗಮನೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ವೀಕ್ಷಿಸಲು ಅವಕಾಶವಿದೆ.





