ದಿಲ್ಲಿಯಲ್ಲಿ ಪ್ರತಿ ದಿನ ಸರಾಸರಿ ನಾಲ್ವರು ಮಹಿಳೆಯರ ಅತ್ಯಾಚಾರ
ಪೊಲೀಸ್ ದಾಖಲೆಯಿಂದ ಬಹಿರಂಗ, 9ಮಂದಿಗೆ ಲೈಂಗಿಕ ಹಿಂಸೆ
ಹೊಸದಿಲ್ಲಿ, ಆ.7: ದೇಶದ ರಾಜಧಾನಿಯಲ್ಲಿ 2012ರಿಂದ 2015ರವರೆಗೆ ಪ್ರತಿ ದಿನ ಸರಾಸರಿ ನಾಲ್ವರು ಮಹಿಳೆಯರನ್ನು ಅತ್ಯಾಚಾರ ಮಾಡಲಾಗಿದೆ ಹಾಗೂ 9 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆಯೆಂದು ಮಹಿಳೆಯರ ವಿರುದ್ಧ ಅಪರಾಧಗಳಿಗೆ ಸಂಬಂಧಿಸಿ ದಿಲ್ಲಿ ಪೊಲೀಸ್ ಸಂಗ್ರಹಿಸಿರುವ ಅಂಕಿ-ಅಂಶ ತಿಳಿಸಿದೆ.
ಈ ನಾಲ್ಕು ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು ಮೂರು ಪಟ್ಟು ಹೆಚ್ಚಾಗಿದ್ದವು. 2012ರಲ್ಲಿ ಒಟ್ಟು 706 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ, 2015ರಲ್ಲಿ ಅವುಗಳ ಸಂಖ್ಯೆ 2,199ಕ್ಕೇರಿತ್ತು. 2013ರಲ್ಲಿ 1,636 ಹಾಗೂ 2014ರಲ್ಲಿ 2,166 ಅತ್ಯಾಚಾರ ಪ್ರಕರಣಗಳು ದಿಲ್ಲಿಯಲ್ಲಿ ದಾಖಲಾಗಿದ್ದವು.ರಲ್ಲಿ ದಾಖಲಾಗಿದ್ದ 381 ಅತ್ಯಾಚಾರ ಪ್ರಕರಣಗಳು 2015ರಲ್ಲಿ 2,199ಕ್ಕೆ ತಲುಪುವುದರೊಂದಿಗೆ 15 ವರ್ಷಗಳಲ್ಲಿ ಅತ್ಯಾಚಾರ 6 ಪಟ್ಟು ಹೆಚ್ಚಿದಂತಾಗಿದೆ.ರಲ್ಲಿ ಅವಮಾನಿಸುವ ಉದ್ದೇಶದಿಂದ ಮಹಿಳೆಯರ ಮೇಲೆ ಹಲ್ಲೆಯ 727 ಪ್ರಕರಣಗಳು ವರದಿಯಾಗಿದ್ದರೆ, 2013ರಲ್ಲಿ 3,515 ಪ್ರಕರಣ, 2014ರಲ್ಲಿ 4,322 ಹಾಗೂ 2015ರಲ್ಲಿ 5,367 ಪ್ರಕರಣಗಳು ದಾಖಲಾಗಿದ್ದವು.ರ ಜನವರಿಯಿಂದ ಜುಲೈ ಮಧ್ಯದ ವರೆಗೆ ದಾಖಲಾಗಿದ್ದ ಅತ್ಯಾಚಾರ ಪ್ರಕರಣಗಳ ಸಂಖ್ಯೆ 1,120. ಅವುಗಳ ಸಂಖ್ಯೆ 2016ರ ಜನವರಿಯಿಂದ ಜುಲೈ ಮಧ್ಯದ ವರೆಗೆ 68ರಷ್ಟು ಹೆಚ್ಚಿದ್ದು, 1,186ಕ್ಕೆ ತಲುಪಿದೆ.
ಮಹಿಳೆಯರು ತಮ್ಮ ಮನೆಗಳೊಳಗೂ ಸುರಕ್ಷಿತರಲ್ಲವೆಂಬುದನ್ನು ಅಂಕಿ-ಅಂಶ ತೋರಿಸಿದೆ. ವರದಕ್ಷಿಣೆ ಪ್ರಕರಣ ಹಾಗೂ ಅವನ ತಂದೆ-ತಾಯಿ, ಬಂಧುಗಳಿಂದ ಹಿಂಸೆಯ ಪ್ರಕರಣಗಳು ಸತತವಾಗಿ ಏರಿಕೆಯಾಗಿರುವುದನ್ನು ಅದು ದಾಖಲಿಸಿದೆ.ರಿಂದ 2016 ಜುಲೈ ಮಧ್ಯದ ವರೆಗೆ ದಿಲ್ಲಿಯಲ್ಲಿ 681 ವರದಕ್ಷಿಣೆ ಸಂಬಂಧಿ ಸಾವುಗಳು ವರದಿಯಾಗಿವೆ. ಈ ನಾಲ್ಕು ವರ್ಷಗಳಲ್ಲಿ ಗಂಡಂದಿರು ಹಾಗೂ ಅತ್ತೆ-ಮಾವಂದಿರ ವಿರುದ್ಧ ಒಟ್ಟು 13,984 ಪ್ರಕರಣಗಳು ದಾಖಲಾಗಿವೆ. 2012ರಲ್ಲಿ ಅಂತಹ 2,046 ಪ್ರಕರಣಗಳು, 2013ರಲ್ಲಿ 3,045 ಪ್ರಕರಣಗಳು, 2014ರಲ್ಲಿ 3,194 ಹಾಗೂ 2015ರಲ್ಲಿ 3,536 ಅಂತಹ ಪ್ರಕರಣಗಳು ದಾಖಲಾಗಿದ್ದವು. 2015ರ ಜನವರಿಯಿಂದ ಜುಲೈ ಮಧ್ಯದ ವರೆಗೆ 1,842 ವರದಕ್ಷಿಣೆ ಕಿರುಕುಳ ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷದ ಅದೇ ಅವಧಿಯಲ್ಲಿ 2,163 ಪ್ರಕರಣಗಳು ವರದಿಯಾಗಿವೆ.
ಪರಿಶೀಲಿಸಲಾಗಿರುವ 4 ವರ್ಷಗಳಲ್ಲಿ ನಡೆದಿರುವ ಒಟ್ಟು 681 ವರದಕ್ಷಿಣೆ ಸಾವು ಪ್ರಕರಣಗಳಲ್ಲಿ 134 ಸಾವುಗಳು 2012ರಲ್ಲಿ ಹಾಗೂ 144 ಸಾವುಗಳು 2013ರಲ್ಲಾಗಿವೆ. ಅದು 2014ರಲ್ಲಿ ಸ್ವಲ್ಪ ಏರಿಕೆಯಾಗಿ 153ಕ್ಕೆ ತಲುಪಿದ್ದರೆ, 2015ರಲ್ಲಿ ಸ್ವಲ್ಪ ಇಳಿಕೆಯಾಗಿ 122 ಸಾವುಗಳು ಸಂಭವಿಸಿದ್ದವು.







