ಗಾಂಜಾ ಸಹಿತ ಓರ್ವ ಆರೋಪಿಯ ಬಂಧನ
ಮಂಜೇಶ್ವರ, ಆ.8: ಕಾರಿನಲ್ಲಿ ಸಾಗಿಸುತ್ತಿದ್ದ 120 ಗ್ರಾಂ. ಗಾಂಜಾ ಸಹಿತ ಓರ್ವನನ್ನು ಮಂಜೇಶ್ವರ ಪೊಲೀಸರು ರವಿವಾರ ರಾತ್ರಿ ಬಂಧಿಸಿದ್ದಾರೆ. ಪುಚ್ಚತ್ತಬೈಲಿನ ಯಾಸಿನ್(19) ಬಂಧಿತ ಆರೋಪಿ. ಈತ ಸಂಚರಿಸುತ್ತಿದ್ದ ಕಾರನ್ನು ಹಾಗೂ ಗಾಂಜಾವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ರವಿವಾರ ರಾತ್ರಿ ತಲಪಾಡಿಯಿಂದ ಹೊಸಂಗಡಿಗೆ ಕರ್ನಾಟಕ ನೋಂದಾವಣೆಯ ಕಾರಿನಲ್ಲಿ ತೆರಳುತ್ತಿದ್ದಾಗ ತೂಮಿನಾಡಿನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಎಸ್ಸೈ ಪಿ. ಪ್ರಮೋದ್ ನೇತೃತ್ವದ ತಂಡ ಕಾರನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ. ಈತನನ್ನು ಬಂಧಿಸಿ ಗಾಂಜಾ ಹಾಗೂ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ದೂರು ದಾಖಲಿಸಿದ್ದಾರೆ.
Next Story