ಸುಳ್ಯ: ಜಲ ಸಂರಕ್ಷಣಾ ಜನಜಾಗೃತಿ ಯಾತ್ರೆ ಸಮಾರೋಪ

ಸುಳ್ಯ, ಆ.8: ಸುಳ್ಯ ತಾಲೂಕು ಗ್ರಾಮ ವಿಕಾಸ ಸಮಿತಿಗಳ ಒಕ್ಕೂಟದ ಆಶ್ರಯದಲ್ಲಿ 8 ದಿನಗಳ ಕಾಲ ನಡೆದ ಜಲ ಸಂರಕ್ಷಣೆ ಜನ ಜಾಗೃತಿ ಯಾತ್ರೆಯು ಸಮಾಪನಗೊಂಡಿದೆ. ಸುಳ್ಯದ ಕೆವಿಜಿ ಪುರಭವನದಲ್ಲಿ ನಡೆದ ಸಮಾರೋಪ ಸಮಾರಂಭ ಹಾಗೂ ಜಲ ಸಂರಕ್ಷಣೆ ಕಾರ್ಯಾಗಾರವನ್ನು ಸುಳ್ಯ ನಗರ ಪಂಚಾಯತ್‌ನ ಸ್ವಚ್ಛತಾ ರಾಯಭಾರಿ ಡಾ.ಕೆ.ವಿ.ಚಿದಾನಂದ ಉದ್ಘಾಟಿಸಿ ಮಾತನಾಡಿ, ಕೆಲವು ವರ್ಷಗಳ ಹಿಂದೆ ಕೆರೆ, ಬಾವಿ, ತೋಡುಗಳಿಗೆ ಕಟ್ಟ ಕಟ್ಟುವ ಮೂಲಕ ಮಳೆ ನೀರನ್ನು ಸಂಗ್ರಹಿಸಲಾಗುತ್ತಿತ್ತು. ಆದರೆ ಈಗ ಮನೆ-ಮನೆಗೂ ನಳ್ಳಿ ನೀರು ಸರಬರಾಜು ಆಗುವುದರಿಂದ ಅವುಗಳೆಲ್ಲಾ ಮುಚ್ಚಿ ಹೋಗಿವೆ.ಇದರಿಂದಾಗಿ ಜಲ ಕ್ಷಾಮ ಬಂದಿದೆ. ಇಂತಹ ಸಂದರ್ಭ ನೀರಿನ ಕುರಿತು ಜಾಗೃತಿ ಮೂಡಿಸುವ ಕೆಲಸ ಶ್ಲಾಘನೀಯ ಎಂದವರು ಹೇಳಿದರು.ಾರ್ಯಾಗಾರದಲ್ಲಿ ಮಣಿಪಾಲದ ಎಂಐಟಿ ಪ್ರಾಧ್ಯಾಪಕ ನಾರಾಯಣ ಶೆಣೈ ತರಬೇತಿ ನೀಡಿದರು. ನಗರ ಪಂಚಾಯತ್ ಅಧ್ಯಕ್ಷ ಪ್ರಕಾಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್.ಅಂಗಾರ, ಎಪಿಎಂಸಿ ಅಧ್ಯಕ್ಷ ಜಾಕೆ ಮಾಧವ ಗೌಡ, ತರಬೇತುದಾರ ನಾರಾಯಣ ಶೆಣೈ ಉಪಸ್ಥಿತರಿದ್ದರು.
ಸುಭೋದ್ ಶೆಟ್ಟಿ ಸ್ವಾಗತಿಸಿದರು. ವಿನೋದ್ ಬೊಳ್ಮಲೆ ವಂದಿಸಿದರು. ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರೂಪಿಸಿದರು.





