Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಅಭಿವೃದ್ಧಿಪಥದತ್ತ ಸಾಗುತ್ತಿರುವ...

ಅಭಿವೃದ್ಧಿಪಥದತ್ತ ಸಾಗುತ್ತಿರುವ ಜಿಲ್ಲೆಯಲ್ಲಿ ಸವಲತ್ತುಗಳ ಕೊರತೆ!

ದ.ಕ. ಜಿಲ್ಲೆಯ ಅಭಿವೃದ್ಧಿಯ ಪಥದಲ್ಲಿನ ಇನ್ನಷ್ಟು ಹಿನ್ನಡೆಗಳು!

ಎನ್.ಜಿ. ಮೋಹನ್ಎನ್.ಜಿ. ಮೋಹನ್9 Aug 2016 12:26 AM IST
share
ಅಭಿವೃದ್ಧಿಪಥದತ್ತ ಸಾಗುತ್ತಿರುವ ಜಿಲ್ಲೆಯಲ್ಲಿ ಸವಲತ್ತುಗಳ ಕೊರತೆ!

*ವರ್ತುಲ ರಸ್ತೆ ನಿರ್ಮಾಣ

 ಮಂಗಳೂರಿನ ಹಿಂದಿನ ಜನಪ್ರಿಯ ಶಾಸಕರಾಗಿದ್ದ ಯೋಗೀಶ್ ಭಟ್‌ರವರ ಮಹತ್ವಾಕಾಂಕ್ಷಿ ವರ್ತುಲ ರಸ್ತೆ ಯೋಜನೆಯ ಬಗ್ಗೆ ಸುಮಾರು 15 ವರ್ಷಗಳಿಂದ ನಾವು ಕೇಳುತ್ತಿದ್ದೇವೆ. ಆಗಾಗ್ಗೆ ನಮ್ಮ ಅಧಿಕಾರಿಗಳು, ನೇತಾರರು ಇದರ ಬಗ್ಗೆ ಮಾತನಾಡುತ್ತಾರೆ. ಗುಜರಾತಿನಿಂದ ಪರಿಣಿತರನ್ನು ಕರೆಯಿಸಿ ಇದಕ್ಕೊಂದು ಯೋಜನೆ ಸಿದ್ದಪಡಿಸುವ ಕೆಲಸ ನಡೆಯುತ್ತಿರುವುದರ ಬಗ್ಗೆಯೂ ಪತ್ರಿಕೆಗಳಲ್ಲಿ ಓದಿದ್ದೇವೆ. ಇದರ ಬಗ್ಗೆ ಇನ್ನೂ ಒಂದು ಸಕಾರಾತ್ಮಕ ನಿಲುವಿಗೆ ಯಾರೂ ಬಂದಂತೆ ಕಾಣುವುದಿಲ್ಲ. ಕೆಲವು ತಿಂಗಳುಗಳ ಹಿಂದೆ ನೇತ್ರಾವತಿಗೆ ಅಡ್ಡಲಾಗಿ ಅಡ್ಯಾರಿನಿಂದ ಪಾವೂರು ಹರೇಕಳವಾಗಿ ಕೋಣಾಜೆಯನ್ನು ಸಂಪರ್ಕಿಸಲು 40 ಕೋ.ರೂ. ಅಂದಾಜಿನಲ್ಲಿ ಸೇತುವೆ ನಿರ್ಮಾಣದ ಬಗ್ಗೆ ಪತ್ರಿಕೆಗಳಲ್ಲಿ ಉಲ್ಲೇಖವಾಗಿತ್ತು. ಇದು ವರ್ತುಲ ರಸ್ತೆಯ ಒಂದು ಭಾಗವಾಗಿರಬಹುದು.
*ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣ

*ñಮಂಗಳೂರಿನಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಕಟ್ಟಲು 1999ರಲ್ಲಿ ಕರ್ನಾಟಕ ಕ್ರಿಕೆಟ್ ಅಸೋಸಿಯೇಶನ್ ಮುಂದೆ ಬಂದಿತ್ತು. ಸುಮಾರು 15 ಎಕರೆಯಷ್ಟು ಸ್ಥಳವನ್ನು ನಗರದಲ್ಲೆಲ್ಲಾದರೂ ಒದಗಿಸಿ ಕೊಟ್ಟಲ್ಲಿ ಸ್ಟೇಡಿಯಂ ಕಟ್ಟುವ ಜವಾಬ್ದಾರಿಯನ್ನು ಕೆ.ಸಿ.ಎ. ವಹಿಸಿಕೊಂಡಿತ್ತು. 2002 ನೆ ಇಸವಿಯಲ್ಲಿ ಜರಗಿದ ಪಿಲಿಕುಳ ನಿಸರ್ಗಧಾಮದ ವಾರ್ಷಿಕ ಮಹಾಸಭೆಯಲ್ಲಿ ಪಿಲಿಕುಳದಲ್ಲಿರುವ ಗಾಲ್ಫ್ ಕೋರ್ಟ್‌ನ್ನು ತಣ್ಣೀರು ಬಾವಿಗೆ ಸ್ಥಳಾಂತರಿಸಿ ಆ 72 ಎಕರೆ ಪ್ರದೇಶದಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ಮಾತ್ರವಲ್ಲದೆ ಹಲವು ಕ್ರೀಡಾ ವಿಭಾಗಗಳನ್ನೊಳಗೊಂಡ ಸಮಗ್ರ ಕ್ರೀಡಾ ಸಂಕೀರ್ಣವೊಂದನ್ನು ನಿರ್ಮಿಸಬೇಕೆಂದು ತೀರ್ಮಾನಿಸಲಾಗಿತ್ತು. 15 ವರ್ಷಗಳ ನಂತರವೂ ಯಾವುದೇ ಒಂದು ದೃಢ ನಿರ್ಧಾರವನ್ನು ಈ ನಿಟ್ಟಿನಲ್ಲಿ ತೆಗೆದುಕೊಳ್ಳದೆ ಕ್ರಿಕೆಟ್ ಸ್ಟೇಡಿಯಂ ಮತ್ತು ಕ್ರೀಡಾ ಸಂಕೀರ್ಣ ಎರಡರಿಂದಲೂ ನಮ್ಮ ಜಿಲ್ಲೆ ವಂಚಿತವಾಗಿದೆ. ಈ ನಡುವೆ ಸುಮಾರು ಆರೇಳು ವರ್ಷಗಳಿಂದ ಮಂಗಳೂರಿನ ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಈಜು ಕೊಳ ನಿರ್ಮಿಸುವ ಬಗ್ಗೆ ಕೇಳುತ್ತಿದ್ದೇವೆ. ಅಸಂಖ್ಯಾತ ಸಂಖ್ಯೆಯ ರಾಷ್ಟೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಖ್ಯಾತನಾಮರಾದ ಕ್ರಿಕೆಟ್, ಫುಟ್ಬಾಲ್, ಕಬಡ್ಡಿ, ದೇಹದಾರ್ಢ್ಯ ಮತ್ತು ಅಥ್ಲೆಟಿಕ್ಸ್ ಕೀಡಾಳುಗಳನ್ನು ನಾಡಿಗೆ ಅರ್ಪಿಸಿದ ಈ ಜಿಲ್ಲೆೆಗೆ ಒಂದು ಸಮಗ್ರ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಸಂಬಂಧಪಟ್ಟವರು ಇನ್ನೂ ಒಲವು ತೋರಿಸದಿರುವುದು ವಿಷಾದನೀಯ.ೂಗು ಸೇತುವೆ ನಿರ್ಮಾಣ

*¸ಮಾಜಿ ಶಾಸಕ ಯೋಗೀಶ್ ಭಟ್‌ರವರ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ-ಸುಲ್ತಾನ್ ಬತ್ತೇರಿ ತಣ್ಣೀರು ಬಾವಿ ಪ್ರದೇಶಕ್ಕೆ ಪ್ರವಾಸೋದ್ಯಮ ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವವೆನಿಸುವ ತೂಗು ಸೇತುವೆ ನಿರ್ಮಾಣ. ದಶಕದ ಹಿಂದೆ ಈ ಯೋಜನೆಗೆ ಹಾಕಿಕೊಂಡ ಅಂದಾಜು ವೆಚ್ಚ ಕೆಲವು ಲಕ್ಷ ರೂಪಾಯಿಗಳಾದರೆ ಈಗ ಅದಕ್ಕೆ ಸುಮಾರು 11 ಕೋ.ರೂ. ಎಂದು ಅಂದಾಜಿಸಲಾಗಿದೆ. 3 ವರ್ಷಗಳ ಹಿಂದೆ ಇದಕ್ಕೆ ಶಂಕುಸ್ಥಾಪನೆ ನಡೆದು ಕಾಮಗಾರಿಗೆ ಚಾಲನೆ ನೀಡಲಾಯಿತು. ಈಗ ಬಹುಶಃ ಈ ತೂಗು ಸೇತುವೆ ಯೋಜನೆ ತೂಗುಯ್ಯಾಲೆಯಲ್ಲಿದೆ. ೆಂಗ್ರೆ ಪ್ರದೇಶಕ್ಕೆ ಸೇತುವೆ ನಿರ್ಮಾಣ

*Bಮಂಗಳೂರಿಗೆ ಅಗತ್ಯವಾಗಿ ಬೇಕಾಗಿರುವುದು ಹಳೇ ಬಂದರು ಪ್ರದೇಶದಿಂದ ಬೆಂಗ್ರೆಗೆ ಸೇತುವೆ ನಿರ್ಮಾಣ. ಅದೃಷ್ಟವಶಾತ್ ನಮ್ಮ ಕರಾವಳಿ ಇದುವರೆಗೆ ಸುರಕ್ಷಿತ ಪ್ರದೇಶವಾಗಿ ಉಳಿದಿದೆ. ಒಂದೊಮ್ಮೆ ಬಿರುಗಾಳಿ, ಸ್ಸುನಾಮಿ, ಸುಂಟರಗಾಳಿ ಸಮುದ್ರ ಉಬ್ಬರದಂತಹ ನೈಸರ್ಗಿಕ ಪ್ರಾಕೃತಿಕ ವಿಕೋಪಗಳು ನಮ್ಮ ಕರಾವಳಿಗೆ ಎಂದಾದರೂ ಅಪ್ಪಳಿಸಿದಲ್ಲಿ ಬೆಂಗ್ರೆಯಲ್ಲಿ ವಾಸಿಸುವ ಸಾವಿರಾರು ಕುಟುಂಬಗಳು ಬದುಕುಳಿಯುವ ಒಂದೇ ಒಂದು ಮಾರ್ಗ ಕೂಡಾ ಇರುವುದಿಲ್ಲ. ಬೆಂಗ್ರೆ ಪ್ರದೇಶ ಗುರುಪುರ ನದಿ ಮತ್ತು ಸಮುದ್ರದ ನಡುವೆ ಇದ್ದು, ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿ ಇರದಿರುವುದರಿಂದ ಯಾವುದೇ ಒಂದು ನೈಸರ್ಗಿಕ ಅನಾಹುತವು ಅಲ್ಲಿಯ ಜನರನ್ನು ಸಂಕಷ್ಟದಲ್ಲಿ ಸಿಲುಕಿಸುವ ಸಾಧ್ಯತೆ ಹೆಚ್ಚು. ಆದುದರಿಂದ ಸಾವಿರಾರು ಜನರ ಸುರಕ್ಷತೆಯ ದೃಷ್ಟಿಯಿಂದ ಈ ಸೇತುವೆಯನ್ನು ಕಟ್ಟುವುದು ಅವಶ್ಯವಾಗಿದೆ. ಇನ್ನೊಂದು ದಿಕ್ಕಿನಿಂದ ಇದನ್ನು ಯೋಚಿಸಿದರೆ ದಿನಂಪ್ರತಿ ಬೆಂಗ್ರೆವರೆಗೆ 500ಕ್ಕೂ ಹೆಚ್ಚು ವಾಹನಗಳು ಹೋಗಿ ಬರುತ್ತಿವೆ. ಕೂಳೂರು ಮೂಲಕ ಸುತ್ತು ಬಳಸಿ ಈ ಸ್ಥಳ ತಲುಪಲು ಸುಮಾರು 20 ಕಿ.ಮೀ. ಕ್ರಮಿಸಬೇಕಾಗುತ್ತದೆ. ಸೇತುವೆಯ ನಿರ್ಮಾಣದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ರೂಪದಲ್ಲಿ ದೇಶಕ್ಕೆ ಎಷ್ಟು ವಿದೇಶಿ ವಿನಿಮಯ ಉಳಿತಾಯವಾಗಲು ಸಾಧ್ಯ ಎನ್ನುವುದನ್ನು ಗ್ರಹಿಸಿದಾಗ ಈ ಒಂದು ಯೋಜನೆಯ ಮಹತ್ವ ಅರಿವಾಗುತ್ತದೆ. ಾರಾಹಿ ಯೋಜನೆ ತ್ಯಂತ ಹೆಚ್ಚು ಮಳೆ ಬೀಳುವ ಪ್ರದೇಶವಾದ ನಮ್ಮ ಜಿಲ್ಲೆಗೆ ಒಂದೇ ಒಂದು ನೀರಾವರಿ ಯೋಜನೆಯನ್ನು ಈವರೆಗೆ ಕೊಟ್ಟಿಲ್ಲ. 1974ನೆ ಇಸವಿಯಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಾರಾಹಿ ಯೋಜನೆಯನ್ನು ಮಂಜೂರು ಮಾಡಲಾಯಿತು. 40 ವರ್ಷಗಳ ಹಿಂದೆ ಆರಂಭವಾದ ಈ ಯೋಜನೆಯ ಕಾಮಗಾರಿ ಇನ್ನೂ ಮುಗಿದಿಲ್ಲ. ಕೆಲವು ಕೋಟಿ ರೂಪಾಯಿಗಳೆಂದು ಅಂದಾಜಿಸಲಾಗಿದ್ದ ಈ ಯೋಜನೆಯ ವೆಚ್ಚ ಈಗಾಗಲೇ ಸುಮಾರು ನೂರು ಪಟ್ಟು ಹೆಚ್ಚಾಗಿದೆ. ಇದರ ಬಗ್ಗೆ ಹಲವು ಅಪಸ್ವರಗಳೂ ಕೇಳಿ ಬಂದಿವೆ. ಮಳೆಗಾಲದಲ್ಲಿ ನಮ್ಮ ಜಿಲ್ಲೆಯಲ್ಲಿ ಸುರಿಯುವ ಅಗಾಧ ಪ್ರಮಾಣದ ನೀರು, ನೀರಾವರಿ ಯೋಜನೆಯಿಲ್ಲದೆ, ಸಮುದ್ರ ಸೇರಿ ಪೋಲಾಗುತ್ತಿದೆ. ನೇತ್ರಾವತಿ ನದಿ ತಿರುವು, ಎತ್ತಿನ ಹೊಳೆಯಂತಹ ಅಪಾಯಕಾರಿ ಹಾಗೂ ದುಬಾರಿ ವೆಚ್ಚದ ಯೋಜನೆಗಳ ಬದಲಿಗೆ, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಸುರಿಯುವ ಅಗಾಧ ಪ್ರಮಾಣದ ಮಳೆ ನೀರನ್ನು ನೀರಾವರಿ ಯೋಜನೆಗಳ ಮೂಲಕ ಉಳಿಸಿಕೊಂಡಲ್ಲಿ ಬಹುಶಃ ಇಡೀ ರಾಜ್ಯದ ನೀರಿನ ಕ್ಷಾಮವನ್ನು ನೀಗಿಸಬಹುದೇನೋ?ಮೆಗತಿಯಲ್ಲಿ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಗಳು

ತಲಪಾಡಿಯಿಂದ ಕುಂದಾಪುರದ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ 2013ರಲ್ಲಿ ಪೂರ್ಣಗೊಳ್ಳಬೇಕಾದದ್ದು, ಇನ್ನೂ 3 ವರ್ಷಗಳಾದರೂ ಮುಗಿಯುವ ಹಾಗೆ ಕಾಣುತ್ತಿಲ್ಲ. 3 ವರ್ಷಗಳಲ್ಲಿ ಪೂರ್ಣವಾಗ ಬೇಕಾಗಿದ್ದ, ಸುರತ್ಕಲ್, ಬಿ.ಸಿ.ರೋಡ್, ಬಂದರು ಸಂಪರ್ಕ ರಸ್ತೆ ಕಾಮಗಾರಿ ಪೂರ್ಣಗೊಳ್ಳಲು 8 ವರ್ಷಗಳೇ ಹಿಡಿದಿವೆ. ಅದರಲ್ಲೂ ನಂತೂರಿನಲ್ಲಿ ಮೇಲ್ಸೇತುವೆ ನಿರ್ಮಾಣವನ್ನು ಕೈಬಿಡಲಾಗಿತ್ತು. ಪಾಣೆಮಂಗಳೂರು ಮತ್ತು ಉಪ್ಪಿನಂಗಡಿ ಎರಡು ಸೇತುವೆಗಳ ನಿರ್ಮಾಣಕ್ಕೆ ಸುಮಾರು 5 ವರ್ಷಗಳಿಗಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾಗಿತ್ತು. ಬ್ರಹ್ಮರ ಕೂಟ್ಲುವಿನ ಮೇಲ್ದಾರಿಯ ನಿರ್ಮಾಣಕ್ಕೂ 5 ವರ್ಷಗಳಿಗಿಂತಲೂ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲಾಗಿತ್ತು. ಇವೆಲ್ಲವನ್ನು ಗಮನಿಸಿದಾಗ, ನಮ್ಮ ಜಿಲ್ಲೆಗೆ ಎಷ್ಟೊಂದು ಮಹತ್ವವನ್ನು ನಮ್ಮ ಸರಕಾರಗಳು, ಅಧಿಕಾರಿಗಳು ಹಾಗೂ ರಾಜಕಾರಣಿಗಳು ನೀಡುತ್ತಾರೆ ಎನ್ನುವುದು ವೇದ್ಯವಾಗುತ್ತಿದೆ.ತರ ಕಾಮಗಾರಿಗಳುಕೋ.ರೂ. ಏಶಿಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಸಾಲದಿಂದ ಕೈಗೆತ್ತಿಕೊಂಡ ನಗರಾಭಿವೃದ್ಧಿ ಕಾಮಗಾರಿಗಳಾದ ಒಳಚರಂಡಿ ಯೋಜನೆ, ನೀರು ಸರಬರಾಜು ಯೋಜನೆ, ರಸ್ತೆ ಅಭಿವೃದ್ಧಿ ಕೆಲಸಗಳು ಇನ್ನೂ ಅಪೂರ್ಣ ಸ್ಥಿತಿಯಲ್ಲಿಯೇ ಇವೆ.
ಸರಕಾರದ ವಿಶೇಷ ಅನುದಾನದಿಂದ ನಗರದ ಕೆಲವು ರಸ್ತೆಗಳು ಕಾಂಕ್ರಿಟೀಕರಣಗೊಂಡವು. ಆದರೆ ಪಾದಚಾರಿಗಳಿಗೆ ನಡೆಯಲು ಕಾಲುದಾರಿಗಳ ನಿರ್ಮಾಣ ಹೆಚ್ಚಿನೆಡೆ ಇನ್ನೂ ಆಗಿಲ್ಲ. ಕೇವಲ ವಾಹನ ಉಳ್ಳವರಿಗೆ (ಸ್ಥಿತಿವಂತರು) ಉತ್ತಮ ರಸ್ತೆಗಳನ್ನು ಒದಗಿಸಿ, ನಡೆದುಕೊಂಡು ಹೋಗುವ ಬಡಪಾಯಿ ಜನಸಾಮಾನ್ಯರನ್ನು ನಿರ್ಲಕ್ಷಿಸುವುದು ಸರಿಯೇ?
ದಶಕದ ಹಿಂದೆ, ಯಡಿಯೂರಪ್ಪ-ಕುಮಾರಸ್ವಾಮಿ ಆಡಳಿತ ಇದ್ದಂತಹ ಸಂದರ್ಭ ಮಂಗಳೂರಿನಲ್ಲಿ ಮಿನಿವಿಧಾನ ಸೌಧ ಕಟ್ಟಲು ನಿರ್ಧರಿಸಲಾಗಿ ಹಿಂದೆ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಈ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಯಿತು. ಕಾಮಗಾರಿ ಆರಂಭವಾಗಿ 5 ವರ್ಷಗಳೇ ಸಂದರೂ ಇನ್ನೂ ಆಮೆಗತಿಯಲ್ಲಿ ಈ ಕಟ್ಟಡ ನಿರ್ಮಾಣ ಕಾಮಗಾರಿ ಮುಂದುವರಿಯುತ್ತಿದೆ.
ಲೇಡಿಗೋಶನ್ ಆಸ್ಪತ್ರೆಗೆ ಎಂಆರ್‌ಪಿಎಲ್ ಸಂಸ್ಥೆಯ ಸುಮಾರು 22 ಕೋ.ರೂ. ಅನುದಾನದಿಂದ ನಿರ್ಮಿಸಲಾರಂಭಿಸಿದ ಕಟ್ಟಡ ಕಾಮಗಾರಿ ಅವಧಿ ಮೀರಿದರೂ ಇನ್ನೂ ಆಮೆಗತಿಯಲ್ಲಿ ಮುಂದುವರಿದಿದೆ.
ತಣ್ಣೀರು ಬಾವಿ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ದೃಷ್ಟಿಯಿಂದ ಅಲ್ಲಿ ಒಂದು ಅಂತಾರಾಷ್ಟ್ರೀಯ ಮಟ್ಟದ ಗಾಲ್ಫ್ ಕೋರ್ಟ್ ಮತ್ತು ಬೃಹತ್ ಮತ್ಸಾಲಯವನ್ನು ಸ್ಥಾಪಿಸುವ ಯೋಜನೆ ಹಲವು ವರ್ಷಗಳಿಂದ ಇನ್ನೂ ಬಾಯಿ ಮಾತಿನ ಯೋಜನೆಯಾಗಿಯೇ ಉಳಿದಿದೆ.
ಮಂಗಳೂರು ನಮ್ಮ ರಾಜ್ಯದ ಒಂದು ಪ್ರಮುಖ ಬಂದರು ಪಟ್ಟಣ. ರಾಜ್ಯದ ಹೆಚ್ಚಿನ ಎಲ್ಲ ಸರಕು ಸಾಗಾಟ ನಡೆಯುವುದು ಮಂಗಳೂರು ಬಂದರಿನಿಂದ. ಆದುದರಿಂದ ರಾಜ್ಯದ ರಾಜಧಾನಿಯಿಂದ ಮಂಗಳೂರಿಗೆ ಉತ್ತಮ ರಸ್ತೆ ಸಂಪರ್ಕ ಇರುವುದು ಬಹಳ ಅಗತ್ಯ.ವೆಲ್ಲವೂ ಕೆಲವು ನಿದರ್ಶನಗಳಷ್ಟೆ. ಯೋಚಿಸಿದ, ಯೋಚಿಸಿ ಮಾಡಬೇಕಾದ ಹಲವಾರು ಯೋಜನೆಗಳು ಇನ್ನೂ ಇವೆ. ಆದರೆ ನಮ್ಮ ಜನರು ಇದೆಲ್ಲಾ ಗೊತ್ತಿದ್ದೂ ಯಾವುದೇ ರೀತಿ ತಲೆಕೆಡಿಸಿಕೊಳ್ಳದೆ, ಇವೆಲ್ಲ ತಮಗೆ ಸಂಬಂಧಿಸಿದ ವಿಷಯಗಳೇ ಅಲ್ಲ ಎನ್ನುವ ರೀತಿಯಲ್ಲಿ ಸುಮ್ಮನೆ ಏಕೆ ಕುಳಿತಿದ್ದಾರೆೆ ಎನ್ನುವುದೇ ಅರ್ಥವಾಗುತ್ತಿಲ್ಲ. ಈ ನಮ್ಮ ದೌರ್ಬಲ್ಯಕ್ಕೆ ಮುಖ್ಯ ಕಾರಣ, ನಮ್ಮ ಜಿಲ್ಲೆಗೆ, ಮುಖ್ಯವಾಗಿ ನಮ್ಮ ನಗರಕ್ಕೆ ಓರ್ವ ಸಮರ್ಥ ನಾಯಕನ ಅಥವಾ ನಾಯಕರ ಕೊರತೆ. ನಮ್ಮನ್ನು ದಿನಾ ಕಾಡುತ್ತಿರುವ, ಅಭಿವೃದ್ಧಿ ಪಥದಲ್ಲಿ ಸಾಗಲು ಮುಳ್ಳಾಗಿರುವ ಹಲವು ಸಾಮಾಜಿಕ ಪಿಡುಗುಗಳಾದ ವಿಪರೀತ ಭ್ರಷ್ಟಾಚಾರ, ನನ್ನ ಕೆಲಸವನ್ನು ಹೇಗಾದರೂ ಮೊದಲು ಮಾಡಿಸಿಕೊಳ್ಳುವ ಸ್ವಾರ್ಥ, ಸಂಕುಚಿತ ಮನೋಭಾವನೆ, ಯಾರಾದರೊಂದು ಒಳ್ಳೆಯ ಕೆಲಸವನ್ನು ಮಾಡಿದಾಗ ಅದನ್ನು ಪ್ರಶಂಸಿಸುವ ಬದಲು ಅದರಲ್ಲಿ ಏನಾದರೂ ಒಂದು ಹುಳುಕನ್ನು ಹುಡುಕುವ ಅಸೂಯೆ ಹಾಗೂ ದ್ವೇಷ ಮನೋಭಾವನೆ ಮುಂತಾದ ಕೊರತೆಗಳಿಂದ ಮೇಲೆದ್ದು, ಎಲ್ಲರೂ ಕೂಡಿಕೊಂಡು ನಮ್ಮ ನಗರವನ್ನು ಹಾಗೂ ಜನತೆಯನ್ನು ಅಭಿವೃದ್ಧಿ ಹಾಗೂ ನೆಮ್ಮದಿಯೆಡೆಗೆ ಮುಂದೊಯ್ಯುವ ಕೆಲಸವಾಗಬೇಕಾಗಿದೆ. ನಾವೆಲ್ಲರೂ ಎಚ್ಚೆತ್ತು ಕೊಳ್ಳೋಣವೇ?
ನಾವೆಲ್ಲರೂ ಒಟ್ಟಾಗಿ ಧ್ವನಿಯೆತ್ತುವ ಕಾಲ ಸನ್ನಿಹಿತವಾಗಿದೆ

share
ಎನ್.ಜಿ. ಮೋಹನ್
ಎನ್.ಜಿ. ಮೋಹನ್
Next Story
X