ಆ.14ರಂದು ಎಸ್‌ಐಒ ರಾಷ್ಟ್ರಾಧ್ಯಕ್ಷ ಇಕ್ಬಾಲ್ ಹುಸೈನ್ ಮಂಗಳೂರಿಗೆ

ಮಂಗಳೂರು, ಆ.9: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ(ಎಸ್‌ಐಒ)ದ ಕರ್ನಾಟಕ ಘಟಕವು ‘ರಚನಾತ್ಮಕ ಸಮಾಜಕ್ಕಾಗಿ ಸಂತುಲಿತ ಚಿಂತನೆ- ತೀವ್ರವಾದವನ್ನು ವಿರೋಧಿಸೋಣ, ಹಿತವಾದಿಗಳಾಗೋಣ’ವಿಷಯದಲ್ಲಿ ಆ. 10ರಿಂದ 14 ರವರೆಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಸಮಾವೇಶವನ್ನು ಹಮ್ಮಿಕೊಂಡಿದೆ.
ಮಂಗಳೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಎಸ್‌ಐಒ ರಾಷ್ಟ್ರಾಧ್ಯಕ್ಷ ಇಕ್ಬಾಲ್ ಹುಸೈನ್ ಆ.14 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಎಸ್‌ಐಒ ದ.ಕ. ಜಿಲ್ಲಾ ಘಟಕವು ಪ್ರಕಟನೆಯಲ್ಲಿ ತಿಳಿಸಿದೆ.
Next Story





