ಬಲವಂತದ ಮತಾಂತರದ ಆರೋಪದಲ್ಲಿ ಝಾಕಿರ್ ನಾಯ್ಕ್ ರ ಐ.ಆರ್.ಎಫ್ ನಿಷೇಧ ?
![ಬಲವಂತದ ಮತಾಂತರದ ಆರೋಪದಲ್ಲಿ ಝಾಕಿರ್ ನಾಯ್ಕ್ ರ ಐ.ಆರ್.ಎಫ್ ನಿಷೇಧ ? ಬಲವಂತದ ಮತಾಂತರದ ಆರೋಪದಲ್ಲಿ ಝಾಕಿರ್ ನಾಯ್ಕ್ ರ ಐ.ಆರ್.ಎಫ್ ನಿಷೇಧ ?](https://www.varthabharati.in/sites/default/files/images/articles/2016/08/9/zakir-naik.jpg)
ಹೊಸದಿಲ್ಲಿ,ಆ.9: ಕೇರಳ ಪೊಲೀಸರು ದಾಖಲಿಸಿರುವ ಮತಾಂತರ ಪ್ರಕರಣ ಆಧಾರದಲ್ಲಿ ಝಾಕಿರ್ ನಾಯ್ಕ್ ರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನನ್ನು ಭಯೋತ್ಪಾದನಾ ವಿರೋಧಿ ಕಾನೂನು (ಯುಎಪಿಎ) ಅಡಿಯಲ್ಲಿ ನಿಷೇಧಿಸಲು ಗೃಹ ಸಚಿವಾಲಯ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಝಾಕಿರ್ ನಾಯ್ಕ್ ವಿರುದ್ಧ ಸಾಕ್ಷ್ಯಗಳಿಲ್ಲ ಎಂದು ಗುಪ್ತಚರ ಸಂಸ್ಥೆಗಳು ಬಹಿರಂಗ ಪಡಿಸಿದ ಬಳಿಕ ಕೇರಳ ಪೊಲೀಸರ ಮೂಲಕ ದಾಖಲಾದ ಬಲವಂತ ಮತಾಂತರ ಪ್ರಕರಣದ ಆಧಾರದಲ್ಲಿ ಅವರ ಸಂಘಟನೆಯಾದ ಇಸ್ಲಾಮಿಕ್ ರಿಸರ್ಚ್ ಪೌಂಡೇಶನನ್ನು ನಿಷೇಧಿಸಲು ಸಾಧ್ಯವಿದೆ ಎಂದು ಕೇಂದ್ರ ಗೃಹಸಚಿವಾಲಯದ ಅಭಿಪ್ರಾಯ ಎನ್ನಲಾಗಿದೆ.
ಝಾಕಿರ್ ನಾಯ್ಕ್ ಬಲವಂತದ ಮತಾಂತರವನ್ನು ಮಾಡಿಸಿದ್ದಾರೆ ಮತ್ತು ಅವರು ತನ್ನ ಉಪನ್ಯಾಸಗಳು ಮತ್ತು ಕಾರ್ಯಚಟುವಟಿಕೆಗಳ ಮೂಲಕ ವಿವಿಧ ಧಾರ್ಮಿಕ ವಿಭಾಗಗಳಲ್ಲಿ ಸ್ಪರ್ಧೆಯುಂಟಾಗುವಂತೆ ಮಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಅವರ ಸಂಘಟನೆಯನ್ನು ನಿಷೇಧಿಸಲು ಗೃಹ ಸಚಿವಾಲಯ ಚಿಂತನೆ ನಡೆಸಿದೆ ಎಂದು ವರದಿ ತಿಳಿಸಿದ್ದು , ಯುಎಪಿಎ ಕಾನೂನಿನಲ್ಲಿ ಭಯೋತ್ಪಾದಕ ಸಂಘಟನೆಗಿಂತ "ಕಾನೂನು ವಿರೋಧಿ ಸಂಘಟನೆ" ಎಂಬುದು ವ್ಯತ್ಯಸ್ತವಾದುದು ಎನ್ನಲಾಗಿದೆ.