Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಆರೋಗ್ಯವಂತರನ್ನು ರೋಗಿಗಳಾಗಿಸುವ ಹೆಲ್ತ್...

ಆರೋಗ್ಯವಂತರನ್ನು ರೋಗಿಗಳಾಗಿಸುವ ಹೆಲ್ತ್ ಚೆಕಪ್ ಎಂಬ ಮಹಾ ಹಗರಣ!

ಬೆಚ್ಚಿ ಬೀಳಿಸುವ ಮಾಹಿತಿಗಳು

ಅನಿರುದ್ಧ ಮಲ್ಪಾನಿಅನಿರುದ್ಧ ಮಲ್ಪಾನಿ9 Aug 2016 1:17 PM IST
share
ಆರೋಗ್ಯವಂತರನ್ನು ರೋಗಿಗಳಾಗಿಸುವ ಹೆಲ್ತ್ ಚೆಕಪ್ ಎಂಬ ಮಹಾ ಹಗರಣ!

ನಾವು ಮಕ್ಕಳಿರುವಾಗಲೇ ಚಿಕಿತ್ಸೆಗಿಂತ ಮೊದಲೇ ರೋಗವನ್ನು ತಡೆಯುವುದು ಉತ್ತಮ ಎನ್ನುವುದನ್ನು ಕೇಳಿಕೊಂಡೇ ಬೆಳೆದಿದ್ದೇವೆ. ಇದೇ ಕಾರಣದಿಂದ ಆರೋಗ್ಯ ಚೆಕಪ್‌ಗಳು ಇಷ್ಟೊಂದು ಜನಪ್ರಿಯವಾಗಿವೆ. ಇದರಿಂದ ವೈದ್ಯರು ನಿಮ್ಮ ವೈದ್ಯಕೀಯ ಸಮಸ್ಯೆಗಳನ್ನು ಆರಂಭದಲ್ಲೇ ಪತ್ತೆ ಹಚ್ಚಬಹುದು ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು ಎಂದೇ ತಿಳಿಯಲಾಗಿದೆ. ದುರದೃಷ್ಟವಶಾತ್ ಈ ಲಾಜಿಕ್ ಹೇಳಿದಷ್ಟು ಹಿತವಾಗಿಲ್ಲ. ಆರೋಗ್ಯ ಚೆಕಪ್ ಗಳು ಕೇವಲ ವೈದ್ಯರಿಗೆ ಮಾತ್ರ ಉತ್ತಮ. ಪರೀಕ್ಷಾ ಕೇಂದ್ರಗಳು ಮತ್ತು ಆಸ್ಪತ್ರೆಗಳು ಲಾಭ ಮಾಡುತ್ತಿವೆಯೇ ವಿನಾ ರೋಗಿಗಳಲ್ಲ!

ಆರೋಗ್ಯ ಪರೀಕ್ಷೆಗಳನ್ನು ಅಷ್ಟೊಂದು ತೀವ್ರತಮವಾಗಿ ಏಕೆ ಪ್ರೋತ್ಸಾಹಿಸಲಾಗುತ್ತಿದೆ ಎನ್ನುವುದನ್ನು ನಾವು ನೋಡೋಣ. ಚೆಕಪ್ ದೊಡ್ಡ ಮಟ್ಟದಲ್ಲಿ ಉತ್ತಮ ವ್ಯಕ್ತಿಗಳನ್ನು ರೋಗಿಗಳಾಗಿ ಪರಿವರ್ತಿಸುತ್ತಿದೆ. ಆರೋಗ್ಯಸೇವೆ ವ್ಯವಸ್ಥೆಯಲ್ಲಿ ನಿರಂತರವಾಗಿ ಗ್ರಾಹಕರನ್ನು ಸೃಷ್ಟಿಮಾಡುವ ಪ್ರಯತ್ನ ಇದಾಗಿದೆ. ವಾರ್ಷಿಕವಾಗಿ ಚೆಕಪ್ ಮಾಡಿಕೊಳ್ಳುವುದು ವ್ಯಕ್ತಿಗಳಿಗೆ ನೆರವಾಗಲಿದೆಯೆ? ನೀವು ಸಾಕಷ್ಟು ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಕೊಂಡಲ್ಲಿ ಎಲ್ಲೋ ಒಂದು ಕಡೆ ಅಸಹಜತೆ ಕಂಡೇ ಬರುತ್ತದೆ ಎನ್ನುವುದು ಗಣಿತದ ಜ್ಞಾನ. ಪ್ರಯೋಗಾಲಯದ ಫಲಿತಾಂಶಗಳು ಅಸಹಜವಾಗಿ ಬಂದಾಗ ಗ್ರಾಹಕರು ಚಿಂತೆಗೊಳಗಾಗುತ್ತಾರೆ ಮತ್ತು ಗಂಭೀರ ಸಮಸ್ಯೆಯೇ ಅಲ್ಲವೇ ಎಂದು ತಿಳಿದುಕೊಳ್ಳಲು ತಜ್ಞರ ಸಲಹೆಗಾಗಿ ವೈದ್ಯರ ಬಳಿಗೊಡುತ್ತಾರೆ. ಅಂದರೆ ಒಮ್ಮೆ ನಿಮಗೆ ಅಸಹಜತೆ ಪತ್ತೆಯಾದಲ್ಲಿ ವ್ಯಕ್ತಿಯನ್ನು ಆರೋಗ್ಯ ಸೇವರ್ ವ್ಯವಸ್ಥೆಯ ಲೋಭಕ್ಕೆ ದೂಡಲಾಗುತ್ತದೆ ಮತ್ತು ಒಂದು ವಿಷವರ್ತುಲ ಆರಂಭವಾಗುತ್ತದೆ.

ಇಲ್ಲಿನ ಸಮೀಕರಣ ಸರಳವಾಗಿದೆ. ಅಸಹಜತೆ=ಹೆಚ್ಚು ಪರೀಕ್ಷೆಗಳು= ಹೆಚ್ಚು ಸಲಹೆಗಳು= ಹೆಚ್ಚು ಚಿಕಿತ್ಸೆ. ಇವುಗಳಲ್ಲಿ ಬಹುತೇಕ ಅನಗತ್ಯ. ನಾವು 40 ವರ್ಷದ ರೋಗ ಚಿಹ್ನೆಗಳಿಲ್ಲದ ಮಹಿಳೆಯ ಉದಾಹರಣೆ ನೋಡೋಣ. ಆಕೆ ಡಿಲಕ್ಸ್ ಸೂಪರ್ ಡೂಪರ್ ಆರೋಗ್ಯ ಚೆಕಪ್ ಗಾಗಿ ಪಂಚತಾರಾ ಆಸ್ಪತ್ರೆಗೆ ಹೋಗುತ್ತಾರೆ. ಆಕೆ ಪ್ಲಾಟಿನಂ ಸ್ಕೀಮ್ ಆರಿಸಿಕೊಂಡ ಕಾರಣ ವೈದ್ಯರು ಆಕೆಯ ಅಂಡಾಶಯ ಪರೀಕ್ಷಿಸಲು ವಜಿನಲ್ ಅಲ್ಟ್ರಾಸೌಂಡ್ ಸ್ಕಾನ್ ಮಾಡುತ್ತಾರೆ. ಆಕೆಯಲ್ಲಿ ಸಣ್ಣ ಅಂಡದ ಗಡ್ಡೆ ಕಾಣಬಹುದು. ಅಲ್ಲೇ ಸಮಸ್ಯೆ ಶುರುವಾಗುವುದು. ಮಹಿಳೆಯಲ್ಲಿ ಅಂಡಾಶಯದ ಗಡ್ಡೆ ಸಾಮಾನ್ಯ ಸಮಸ್ಯೆ ಮತ್ತು ಬಹಳಷ್ಟು ತಮ್ಮಷ್ಟಕ್ಕೇ ಗುಣವಾಗುತ್ತವೆ. ಆದರೆ ವೈದ್ಯರು ರೋಗಿಯನ್ನು ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎನ್ನುವಂತೆ ಬೆದರಿಸುತ್ತಾರೆ. ಬಹಳಷ್ಟು ಭಯ ತರುವ ತಂತ್ರಗಳನ್ನು ಬಳಸುತ್ತಾರೆ. ಅಂದರೆ, ಅದರ ಗಾತ್ರ ಹೆಚ್ಚಾಗಬಹುದು; ಅದು ಸ್ಫೋಟಗೊಳ್ಳಬಹುದು ಅಥವಾ ಅದು ಕ್ಯಾನ್ಸರ್ ಗಡ್ಡೆಯಾಗಿ ಬದಲಾಗಬಹುದು ಎನ್ನಬಹುದು. ಸೊನೊಗ್ರಾಫರ್ ಕೂಡ ಈ ಹಗರಣದ ಭಾಗವಾಗಿರುತ್ತಾರೆ. ತಮ್ಮ ಪತ್ತೆಯನ್ನು ಭೂತಗನ್ನಡಿಯಲ್ಲಿಟ್ಟು ದೊಡ್ಡದಾಗಿ ತೋರಿಸುತ್ತಾರೆ. ಗಾತ್ರವನ್ನು cm ಬದಲಾಗಿ mm ನಲ್ಲಿ ಹೇಳಬಹುದು. (4 cm ಗಡ್ಡೆ ಎಂದರೆ ದೊಡ್ಡದಾಗಿ ತೋರಿಸಲು ಅದನ್ನು 40 mm ಗಡ್ಡೆ ಎಂದು ಹೇಳಬಹುದು.) ಮೃದುಕೋಶವಾಗಿರುವ ಕಾರಣ ಇದನ್ನು ಕನಿಷ್ಠತಮ ಶಸ್ತ್ರಚಿಕಿತ್ಸೆಯಾಗಿ ಮುಗಿಸಬಹುದು. ಹಾಗೆ ಯಾವುದೇ ಕತ್ತರಿ ಪ್ರಯೋಗವಿಲ್ಲದೆ ನಿತ್ಯದ ಆಧಾರದಲ್ಲಿ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದು. ಅಲ್ಲದೆ ವಿಮೆಯನ್ನು ಬಳಸುವ ಕಾರಣದಿಂದ ಹಣಕಾಸು ಹಾನಿಯೂ ಇರದು!

ರೋಗದ ಲಕ್ಷಣಗಳಿಲ್ಲದ ಗ್ರಾಹಕರನ್ನು ನೀವೆಂದೂ ಸಂತಸಪಡಿಸಲಾರಿರಿ ಎನ್ನುವುದು ವಾಸ್ತವ. ಆಕೆಯ ಬಳಿ ದೂರುಗಳೇ ಇಲ್ಲದಿದ್ದಾಗ ಆಕೆಯ ದೈಹಿಕ ಆರೋಗ್ಯದಲ್ಲಿ ಮಧ್ಯಪ್ರವೇಶದ ಅಗತ್ಯವೂ ಇರುವುದಿಲ್ಲ. ಚಿಕಿತ್ಸೆ ಅಗತ್ಯವಿಲ್ಲ ಎನ್ನುವುದೇ ಸೂಕ್ತ ಸಲಹೆ. ಆದರೆ ಇಂತಹ ಸಲಹೆ ನೀಡುವ ಪ್ರಬುದ್ಧತೆ ಬೆರಳೆಣಿಕೆಯ ವೈದ್ಯರಿಗೆ ಮಾತ್ರವಿರುತ್ತದೆ. ಬದಲಾಗಿ ಬಹುತೇಕ ವೈದ್ಯರು ರೋಗಿಗಳಿಗೆ ಚೆಕಪ್ ಮಾಡಿಕೊಂಡಿರುವುದು ಒಳಿತಾಯಿತು ಎಂದು ಹೇಳಿ ಭವಿಷ್ಯದಲ್ಲಿ ದೊಡ್ಡ ಸಮಸ್ಯೆಯಾಗುವ ರೋಗವೊಂದು ಪತ್ತೆಯಾಗಿದೆ ಎನ್ನುತ್ತಾರೆ. ಇಂತಹ ಅಸಹಜತೆ ಪತ್ತೆಯಾಗಿರುವುದನ್ನು ಕೇಳಿದಾಗ ರೋಗಿಗಳು ನಿಜವಾಗಿಯೂ ಖುಷಿಪಡುತ್ತಾರೆ. (ಆರೋಗ್ಯ ಚೆಕಪ್‌ಗಾಗಿ ವ್ಯರ್ಥ ಮಾಡಿದ ಹಣಕ್ಕಾಗಿ ಸಮರ್ಥನೆ ಇರುತ್ತದಲ್ಲವೆ?) ಬಹುತೇಕ ರೋಗಿಗಳು ಸಮಸ್ಯೆ ದೊಡ್ಡ ವಿಷಯವಾಗುವ ಮೊದಲೇ ಪತ್ತೆಯಾಗಿರುವುದಕ್ಕೆ ಸಂತಸಪಡುತ್ತಾರೆ.

ಆದರೆ ವಾಸ್ತವದಲ್ಲಿ ಈ ಅಸಹಜತೆಗಳು ದೊಡ್ಡ ಸಮಸ್ಯೆಯೇನೂ ಆಗಿರುವುದಿಲ್ಲ. ಅವುಗಳು ಆಕಸ್ಮಿಕವಾಗಿ ಆಧುನಿಕ ವೈದ್ಯಕೀಯ ತಂತ್ರಜ್ಞಾನ ಪತ್ತೆ ಹಚ್ಚಿದ ವಿಷಯಗಳಾಗಿರುತ್ತವೆ. ಅದರ ಪತ್ತೆಯಾಗದೆ ಇದ್ದರೂ ರೋಗಿಗಳು ವಯಸ್ಸಾಗಿ ಸತ್ತು ಹೋದಾಗ ಆ ಸಮಸ್ಯೆಯನ್ನು ತಮ್ಮ ಸಮಾಧಿಗೆ ಕೊಂಡೊಯ್ಯುತ್ತಿದ್ದರೇ ವಿನಾ ಇನ್ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಈ ಎಲ್ಲಾ ಅತಿಯಾದ ಪರೀಕ್ಷೆಗಳು ಅತಿಯಾದ ಚಿಕಿತ್ಸೆಗೆ ಕಾರಣವಾಗುತ್ತಿದೆ. ಇದು ಬದಲಾಗುವುದೆ?

ಇಲ್ಲ- ಸಮಯ ಹೋಗುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಬರ್ಬರವಾಗಲಿದೆ. ಉತ್ತಮ ತಂತ್ರಜ್ಞಾನಗಳು ಬರುತ್ತಲೇ ಉತ್ತಮ ಗುಣಮಟ್ಟದ ದೃಶ್ಯಗಳನ್ನು ಮಾನವ ದೇಹದ ಯಾವುದೇ ಮೂಲೆಯಿಂದಲೂ ಪತ್ತೆ ಹಚ್ಚುವುದು ಸುಲಭ ಮತ್ತು ಅಗ್ಗವಾಗುತ್ತದೆ. ಆದರೆ ಉತ್ತಮ ದೃಶ್ಯಗಳೆಂದ ಮಾತ್ರಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತದೆ ಎಂದಲ್ಲ. ಈ ಬಹುತೇಕ ದೃಶ್ಯಗಳಲ್ಲಿ ದೈಹಿಕ ಸಮಸ್ಯೆಗಳು ಗೋಚರವಾಗಬಹುದು. ಕೆಲವೊಮ್ಮೆ ಅವು ದೈಹಿಕ ಏರುಪೇರುಗಳಷ್ಟೇ ಆಗಬಹುದು. ಆದರೆ ಅದನ್ನು ಅತೀ ಉತ್ಸಾಹಿ ವೈದ್ಯರು ಚಿಕಿತ್ಸೆಗೆ ಪ್ರಯತ್ನಿಸುತ್ತಾರೆ. ನಿಮ್ಮ ಹಣ ವ್ಯರ್ಥವಾಗಲಿದೆ. ಅಲ್ಲದೆ ಅಂತಹ ಅಸಹಜತೆ ಪತ್ತೆಯಾದಲ್ಲಿ ಅದನ್ನು ಶಸ್ತ್ರಚಿಕಿತ್ಸೆ ಮಾಡದೆ ತೆಗೆಯಬಹುದು ಎಂದು ಹೇಳಲು ಅತೀ ಧೈರ್ಯವಂತ ವೈದ್ಯರ ಅಗತ್ಯವಿದೆ. ಆತ ಶಸ್ತ್ರಚಿಕಿತ್ಸೆ ಮಾಡಿದರೂ ಯಾರೂ ಅದಕ್ಕೆ ಅಡ್ಡಿಪಡಿಸರು. (ಸರ್ಜರಿಯ ಅಗತ್ಯವಿದೆಯೇ ಇಲ್ಲವೇ ಎನ್ನುವುದು ಚರ್ಚೆಯಾಗಿರುವುದೇ ಇಲ್ಲ). ಸಮಸ್ಯೆ ಪತ್ತೆ ಹಚ್ಚು ಮತ್ತು ಅದನ್ನು ಸರಿಮಾಡು ಎನ್ನುವುದು ತಕ್ಷಣದ ಪ್ರತಿಕ್ರಿಯೆ. ಇದು ಅವರಿಗೆ ಹೆಚ್ಚು ಲಾಭಕರವೂ ಆಗಬಹುದು. ಆದರೆ ಅವರು ಶಸ್ತ್ರಚಿಕಿತ್ಸೆ ಬೇಡ ಎಂದು ಹೇಳಿದರೆ, ಸಮಸ್ಯೆ ಕಾಲದ ಜೊತೆಗೆ ತೀವ್ರವಾದಲ್ಲಿ (ಅಂತಹ ಸಾಧ್ಯತೆ ಬಹಳ ಕಡಿಮೆ ರೋಗಿಗಳಲ್ಲಿ ಮಾತ್ರವಿರುತ್ತದೆ) ರೋಗಿ ತನ್ನ ಆರೋಗ್ಯವನ್ನು ಮೊದಲು ಪತ್ತೆಯಾದಾಗಲೇ ಚಿಕಿತ್ಸೆ ನೀಡಲಿಲ್ಲ ಎಂದು ವೈದ್ಯರ ಮೇಲೆ ಮೊಕದ್ದಮೆಯನ್ನೂ ಹೂಡಬಹುದು. ಉತ್ತಮ ವೈದ್ಯರು ಸಹ ಅದೇ ಕಾರಣದಿಂದ ಸ್ವಯಂರಕ್ಷಣೆಗಾಗಿ ಶಸ್ತ್ರಚಿಕಿತ್ಸೆಯನ್ನು ಸೂಚಿಸುತ್ತಾರೆ. ಹೃದಯದಲ್ಲಿ ಅದರ ಅಗತ್ಯವಿಲ್ಲ ಎಂದು ತಿಳಿದಿದ್ದರೂ ರೋಗಿಯ ಆರೋಗ್ಯದ ದೃಷ್ಟಿಯಿಂದ ನಿರ್ಧಾರ ತಳೆಯುತ್ತಾರೆ.

ಆರೋಗ್ಯ ಚೆಕಪ್ ಗಳನ್ನು ಮಾರುಕಟ್ಟೆ ಮಾಡುವುದು ಹೊಸ ಕಾರ್ಪೋರೇಟ್ ಲ್ಯಾಬ್ ಸರಣಿಗಳಿಗೆ ಲಾಭದಾಯಕ. ಏಕೆಂದರೆ ಎಲ್ಲಾ ಗ್ರಾಹಕರಿಗೂ ಅವರು ಇದನ್ನು ಮಾರಬಹುದಾಗಿದೆ. ಯಾರೋ ಒಳಬರುವವರೆಗೆ ಕಾಯಬೇಕಾಗಿಲ್ಲ, ಅಂದರೆ ಬರುವ ಗ್ರಾಹಕರ ಸಂಖ್ಯೆ ವ್ಯಾಪಕವಾಗಿರುತ್ತದೆ. ಅತೀ ದೊಡ್ಡ ಮಟ್ಟದ ಉದ್ಯಮ ಬಹಳ ಆಕರ್ಷಕವಾಗಿರುತ್ತದೆ. ಏಕೆಂದರೆ ಅದರಲ್ಲಿ ಯಂತ್ರಗಳು ತಿರುಗುತ್ತಲೇ ಇರುತ್ತವೆ. ವಿಪರ್ಯಾಸವೆಂದರೆ ದೊಡ್ಡ ಕಂಪೆನಿಗಳು ತಮ್ಮ ಎಲ್ಲಾ ಸಿಬ್ಬಂದಿಗಳಿಗೂ ತಮ್ಮ ಕಾರ್ಪೋರೇಟ್ ಆರೋಗ್ಯ ಕಾರ್ಯಕ್ರಮಗಳ ಹೆಸರಲ್ಲಿ ಅಗತ್ಯವಿಲ್ಲದೆಯೂ, ಅವುಗಳು ಮಾಡುವ ಹಾನಿಯ ಬಗ್ಗೆ ಅರಿವಿಲ್ಲದೆಯೇ ಇಂತಹ ತಲೆಯಿಲ್ಲದ ಪರೀಕ್ಷೆಗಳನ್ನು ಹೇರುತ್ತಾರೆ. ನಿತ್ಯದ ಪರೀಕ್ಷೆಗಳಾಗಿರುವ ಇಲೆಕ್ಟ್ರೋಕಾರ್ಡಿಯೋಗ್ರಾಮ್, ಚೆಸ್ಟ್ ಎಕ್ಸ್ ರೇಗಳು ಮತ್ತು ಪೂರ್ಣ ರಕ್ತ ಸ್ಕ್ರೀನಿಂಗ್ ಆರೋಗ್ಯಕರ ವ್ಯಕ್ತಿಗೆ ಹೆಚ್ಚೇನೂ ಲಾಭ ತರುವುದಿಲ್ಲ ಎಂದು ಅಮೆರಿಕದ ಪ್ರಿವೆಂಟಿವ್ ಸರ್ವಿಸಸ್ ಟಾಸ್ಕ್ ಫೋರ್ಸ್ ಹೇಳಿದೆ.

ಅಮೆರಿಕದಲ್ಲಿ ಅಧಿಕಾರಿಯ ಹುದ್ದೆ ದೊಡ್ಡದಾಗಿದ್ದಷ್ಟೂ ಆರೋಗ್ಯ ಪ್ಯಾಕೇಜ್ ಕೊಡುಗೆಗಳು ಹೆಚ್ಚಾಗಿರುತ್ತವೆ. (ಡೈಮಂಡ್ ಪ್ಯಾಕೇಜ್ ಅಲ್ಲಿ 70 ಪರೀಕ್ಷೆಗಳು, ಗೋಲ್ಡ್ ಪ್ಯಾಕೇಜಲ್ಲಿ 40 ಇತ್ಯಾದಿ). ಇದು ಇನ್ನೂ ಹೆಚ್ಚಿನ ಅಪಾಯಕಾರಿಯಾಗಿ ಪರಿಣಮಿಸಲಿದೆ. ಏಕೆಂದರೆ ಏನೋ ಒಂದು ಸಮಸ್ಯೆ ಕಂಡುಕೊಳ್ಳುವ ಸಾಧ್ಯತೆ ಹೆಚ್ಚೇ ಇರುತ್ತದೆ. ದುರದೃಷ್ಟವಶಾತ್ ಈ ರೋಗಿಗಳ ಸಂಖ್ಯೆಯಲ್ಲಿ (ಸ್ಕ್ರೀನಿಂಗಿಗೆ ಮಾತ್ರ ಪರೀಕ್ಷೆ ಮಾಡಿಸಿಕೊಳ್ಳುವ ಆರೋಗ್ಯವಂತ ಜನರು) ಬಹುತೇಕ ಅಸಹಜತೆಗಳಿಗೆ ಯಾವುದೇ ವೈದ್ಯಕೀಯ ಪ್ರಾಮುಖ್ಯತೆ ಇರುವುದು ಸಂಶಯ. ಅವುಗಳನ್ನು ಸುಳ್ಳು ಪಾಸಿಟಿವ್ ಗಳೆಂದು ಕರೆಯಲಾಗುತ್ತದೆ. ಆದರೆ ಈ ಅಸಹಜ ಫಲಿತಾಂಶವನ್ನು ಹಿಡಿಯಲಾಗುತ್ತದೆ ಮತ್ತು ಆತಂಕ ಸೃಷ್ಟಿಯಾಗುತ್ತದೆ ಮತ್ತು ವೈದ್ಯರು ಸಂತೋಷದಿಂದ ಮುಂದಿನ ಪರೀಕ್ಷೆಗಳಿಗೆ ಆದೇಶಿಸುತ್ತಾರೆ. ಹಾಗೆ ಅಸಹಜ ಪರೀಕ್ಷಾ ಫಲಿತಾಂಶದ ಪ್ರಾಮುಖ್ಯತೆ ಕಂಡುಕೊಳ್ಳುವ ಯತ್ನದಲ್ಲಿ ಅಪಾಯಕಾರಿ ಸ್ಥಿತಿಯನ್ನು ಮುಂದಿಟ್ಟು ಆರೋಗ್ಯಕರ ವ್ಯಕ್ತಿಯನ್ನು ರೋಗಿಯನ್ನಾಗಿ ಪರಿವರ್ತಿಸುತ್ತಾರೆ. ಜೇಡರ ಬಲೆಯಲ್ಲಿ ಸಿಲುಕಿದ ಸೊಳ್ಳೆಯನ್ನು ಜೇಡ ಸ್ವಾಗತಿಸಿದಂತೆ ವೈದ್ಯಕೀಯ ವ್ಯವಸ್ಥೆ ಇಂತಹ ಆರೋಗ್ಯ ಚೆಕಪ್ ಯೋಜನೆಗಳ ಮೂಲಕ ರೋಗಿಗಳನ್ನು ಆಕರ್ಷಿಸುತ್ತವೆ.

ಎಲ್ಲಾ ಸ್ಕ್ರೀನಿಂಗ್ ಗಳೂ ತಪ್ಪು ಎನ್ನುವುದೂ ಸರಿಯಲ್ಲ. ಆದರೆ ಚೆಕಪ್ ಗಳನ್ನು ಚತುರತೆ ಮತ್ತು ಆಯ್ಕೆಯಲ್ಲಿ ಬಳಸಬೇಕು. ಎಲ್ಲವನ್ನೂ ಒಂದೇ ತೂಕದಲ್ಲಿಟ್ಟು ನೋಡಿದರೆ ಬೇಸರದ ಸ್ಥಿತಿಯನ್ನೇ ಎದುರಿಸಬೇಕು. ಅಲ್ಲಿ ನಾವು ವ್ಯಕ್ತಿಯ ಬದಲಾಗಿ ಪ್ರಯೋಗಾಲಯದ ವರದಿಗೆ ಚಿಕಿತ್ಸೆ ಕೊಡುತ್ತೇವೆ. ಪ್ರಯೋಗಾಲಯದ ಸರಣಿಗಳ ಕೆಳಹಂತದಲ್ಲಿ ಇದು ಉತ್ತಮವಾದರೂ ಬಡ ರೋಗಿಗಳಿಗೆ ಕೆಟ್ಟ ಸಂದೇಶ. ಬಹಳಷ್ಟು ವೈದ್ಯಕೀಯ ಸಂಪನ್ಮೂಲಗಳನ್ನು ಇಂತಹ ಅನಗತ್ಯ ಪರೀಕ್ಷೆಗಳಲ್ಲಿ ವ್ಯರ್ಥ ಮಾಡಲಾಗುತ್ತಿದೆ.

ಕೃಪೆ: firstpost.com

share
ಅನಿರುದ್ಧ ಮಲ್ಪಾನಿ
ಅನಿರುದ್ಧ ಮಲ್ಪಾನಿ
Next Story
X