ಕಾಸರಗೋಡು: ನೇಣುಬಿಗಿದು ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಕಾಸರಗೋಡು, ಆ.9: ನರ್ಸಿಂಗ್ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಏತಡ್ಕದಲ್ಲಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿನಿಯನ್ನು ವಿಜಯಲತಾ (20) ಎಂದು ಗುರುತಿಸಲಾಗಿದೆ.
ಸ್ನಾನಕ್ಕೆಂದು ತೆರಳಿದ್ದ ವಿಜಯಲತಾ ಹಲವು ಸಮಯ ಕಳೆದರೂ ಹೊರಬಾರದೆ ಇದ್ದುದರಿಂದ ಗಾಬರಿಗೊಂಡು ಮನೆಯವರು ಗಮನಿಸಿದಾಗ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಜುಲೈ 19ರಂದು ವಿಜಯಲತಾರ ತಂದೆ ಗುರುವಪ್ಪ(58) ಹೃದಯಾಘಾತದಿಂದ ನಿಧನರಾಗಿದ್ದರು. ಇದರಿಂದ ವಿಜಯಲತಾ ಸಾಕಷ್ಟು ಮನನೊಂದಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





