ಇಸ್ರೇಲ್ ಕೂಡ ಫೆಲೆಸ್ತೀನ್ ಜನತೆಯ ವಿರುದ್ಧ ಪೆಲೆಟ್ ಗನ್ ಗಳನ್ನು ಬಳಸುವುದಿಲ್ಲ : ಯೆಚೂರಿ
ಹೊಸದಿಲ್ಲಿ, ಆ.9 : ಕಾಶ್ಮೀರದಲ್ಲಿ ನಾಗರೀಕರ ವಿರುದ್ಧ ಪೆಲೆಟ್ ಗನ್ ಗಳನ್ನು ಬಳಸಿರುವ ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಸೋಮವಾರ ರಾಜ್ಯಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಅವರು " ಇಸ್ರೇಲ್ ಕೂಡ ಫೆಲೆಸ್ತೀನ್ ಜನತೆಯ ವಿರುದ್ಧ ಪೆಲೆಟ್ ಗನ್ ಗಳನ್ನು ಬಳಸುವುದಿಲ್ಲ " ಎಂದು ಹೇಳಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಚರ್ಚೆ ನಡೆಸಲು ಅನುಮತಿ ಕೋರಿ ಕಾಂಗ್ರೆಸ್ ನೋಟಿಸ್ ನೀಡಿದ ಬೆನ್ನಲ್ಲೇ ಯೆಚೂರಿ ಮಾತನಾಡಿದರು.
ಚರ್ಚೆ ಪ್ರಾರಂಭಿಸಿದ ಗುಲಾಂ ನಬಿ ಆಜ್ಹಾದ್ ಸರಕಾರ ಇದನ್ನು ಕೇವಲ ಕಾನೂನು, ಸುವ್ಯವಸ್ಥೆ ವಿಷಯವಾಗಿ ಮಾತ್ರ ನೋಡಬಾರದು ಎಂದು ಹೇಳಿದರು.
Next Story