ಕಾಸರಗೋಡು: ದೋಣಿ ಮಗುಚಿ ಮೂವರು ಮೀನುಗಾರರಿಗೆ ಗಾಯ

ಕಾಸರಗೋಡು, ಆ.9: ದೋಣಿ ಮಗುಚಿ ಮೂವರು ಮೀನುಗಾರರು ಗಾಯಗೊಂಡ ಘಟನೆ ಕಾಸರಗೋಡು ಕಸಬಾ ಸಮುದ್ರದಲ್ಲಿ ಮಂಗಳವಾರ ಸಂಭವಿಸಿದೆ. ಘಟನೆಯಿಂದಾಗಿ ಬಾಬು (45), ಜೋಜಿ (29) ಮತ್ತು ಅಖಿಲ್ (25) ಎಂಬವರು ಗಾಯಗೊಂಡಿದ್ದು ಇವರನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೈಬರ್ ದೋಣಿಯಲ್ಲಿ 12 ಮಂದಿಯ ತಂಡವು ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ಬೀಸಿದ ಬಲವಾದ ಗಾಳಿಯ ಅಬ್ಬರಕ್ಕೆ ದೋಣಿ ಮಗುಚಿ ಬಿತ್ತೆನ್ನಲಾಗಿದೆ. ಮಗುಚಿಬಿದ್ದ ಪರಿಣಾಮ ಬಲೆ, ಎರಡು ಎಂಜಿನ್ಗಳಿಗೆ ಹಾನಿಯಾಗಿದೆ. ಸುಮಾರು 2.20 ಲಕ್ಷ ರೂ . ನಷ್ಟ ಸಂಭವಿಸದೆ ಎಂದು ಅಂದಾಜಿಸಲಾಗಿದೆ.
Next Story





