ಗ್ಯಾಸ್ ಟ್ಯಾಂಕರ್ ಪಲ್ಟಿ: ನೀರು ಪೂರೈಕೆ ವ್ಯತ್ಯಯ

ಮಂಗಳೂರು, ಆ.9: ಉದನೆ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನದಿಗೆ ಬಿದ್ದು, ನೀರಿಗೆ ಗ್ಯಾಸ್ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಆರೋಗ್ಯ ಸುರಕ್ಷತೆಗಾಗಿ ತುಂಬೆ ನೇತ್ರಾವತಿ ವೆಂಟೆಡ್ ಡ್ಯಾಂನಿಂದ ಮಂಗಳವಾರ ಸಂಜೆಯಿಂದ ನೀರು ಪಂಪ್ ಮಾಡುವುದನ್ನು ನಿಲ್ಲಿಸಲಾಗಿದೆ.
ಇದರಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮಹಾನಗರಪಾಲಿಕೆಯ ಪ್ರಕಟನೆ ತಿಳಿಸಿದೆ.
Next Story





