Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಮಣಿಪುರದ ಮುಖ್ಯಮಂತ್ರಿಯಾಗುವುದು ನನ್ನ...

ಮಣಿಪುರದ ಮುಖ್ಯಮಂತ್ರಿಯಾಗುವುದು ನನ್ನ ಗುರಿ : ಇರೋಮ್ ಶರ್ಮಿಳಾ

ಜೇನು ಸವಿದು ವಿಶ್ವದ ಅತ್ಯಂತ ಸುದೀರ್ಘ ಉಪವಾಸ ಅಂತ್ಯಗೊಳಿಸಿದ ಹೋರಾಟಗಾತಿ

ವಾರ್ತಾಭಾರತಿವಾರ್ತಾಭಾರತಿ9 Aug 2016 7:18 PM IST
share
ಮಣಿಪುರದ ಮುಖ್ಯಮಂತ್ರಿಯಾಗುವುದು ನನ್ನ ಗುರಿ : ಇರೋಮ್ ಶರ್ಮಿಳಾ

ಇಂಫಾಲ್,ಆ.9: ಮಣಿಪುರದ ಉಕ್ಕಿನ ಮಹಿಳೆಯೆಂದೇ ಖ್ಯಾತರಾಗಿರುವ ಸಾಮಾಜಿಕ ಕಾರ್ಯಕರ್ತೆ ಇರೋಮ್ ಶರ್ಮಿಳಾ ಚಾನು(44) ಅವರು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಅಫ್‌ಸ್ಪಾ)ಯ ವಿರುದ್ಧ ಕಳೆದ 16 ವರ್ಷಗಳಿಂದ ನಡೆಸುತ್ತಿದ್ದ ತನ್ನ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮಂಗಳವಾರ ಅಂತ್ಯಗೊಳಿಸಿದರು. ಆತ್ಮಹತ್ಯೆ ಯತ್ನ ಪ್ರಕರಣದಲ್ಲಿ ಸ್ಥಳೀಯ ನ್ಯಾಯಾಲಯವು ತನಗೆ ಜಾಮೀನು ಮಂಜೂರು ಮಾಡಿದ ಬೆನ್ನಲ್ಲೇ ತನ್ನ ಈ ನಿರ್ಧಾರವನ್ನು ಪ್ರಕಟಿಸಿದ ಶರ್ಮಿಳಾ,ಮಿಲಿಟರಿ ದೌರ್ಜನ್ಯಗಳಿಗೆ ಅವಕಾಶ ಕಲ್ಪಿಸಿರುವ ಅಫ್‌ಸ್ಪಾವನ್ನು ತೊಡೆದುಹಾಕಲು ರಾಜಕೀಯ ರಂಗವನ್ನು ಪ್ರವೇಶಿಸುವುದಾಗಿ ತಿಳಿಸಿದರು. ಮುಂದಿನ ವರ್ಷ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ತಿಳಿಸಿದ ಅವರು, ಮಣಿಪುರದ ಮುಖ್ಯಮಂತ್ರಿಯಾಗುವುದು ತನ್ನ ಗುರಿ ಎಂದು ಘೋಷಿಸಿದರು.
ಆ.23ರಂದು ತನ್ನೆದುರು ಪುನಃ ಹಾಜರಾಗುವಂತೆ ನ್ಯಾಯಾಲಯವು ಅವರಿಗೆ ನಿರ್ದೇಶ ನೀಡಿತು. ಆತ್ನಹತ್ಯೆ ಯತ್ನ ಪ್ರಕರಣದಲ್ಲಿ ಅವರು ತಪ್ಪಿತಸ್ಥರೇ ಎಂಬ ಬಗ್ಗೆ ನ್ಯಾಯಾಲಯವು ಅಂದು ತನ್ನ ನಿರ್ಧಾರವನ್ನು ಪ್ರಕಟಿಸಲಿದೆ.
10,000 ರೂ.ಗಳ ವೈಯಕ್ತಿಕ ಬಾಂಡ್‌ನ ಆಧಾರದಲ್ಲಿ ನ್ಯಾಯಾಲಯವು ಅವರನ್ನು ಜಾಮೀನು ಬಿಡುಗಡೆಗೊಳಿಸಿದೆ ಎಂದು ಶರ್ಮಿಳಾ ಪರ ನ್ಯಾಯವಾದಿ ಎಲ್.ರೆಬೆದಾ ತಿಳಿಸಿದರು.
ಶರ್ಮಿಳಾ ಇಂಫಾಲದ ಸಜಿವಾ ಕೇಂದ್ರ ಕಾರಾಗೃಹದ ವಶದಲ್ಲಿದ್ದರಾದರೂ ವರ್ಷಗಳಿಂದಲೂ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿರಿಸಲಾಗಿತ್ತು ಮತ್ತು ಮೂಗಿಗೆ ಅಳವಡಿಸಿದ್ದ ನಳಿಕೆಯ ಮೂಲಕ ಬಲವಂತದಿಂದ ಆಹಾರವನ್ನು ನೀಡಲಾಗುತ್ತಿತ್ತು.
ಮಂಗಳವಾರ ಜೇನು ಸೇವಿಸಿ ಉಪವಾಸವನ್ನು ಅಂತ್ಯಗೊಳಿಸಿದ ಸಂದರ್ಭ ಭಾವೋದ್ವೇಗಗೊಂಡ ಶರ್ಮಿಳಾ ಕಂಬನಿಗರೆದರು.
ವರ್ಷಗಳ ಕಾಲ ತನ್ನ ಗೂಡಾಗಿದ್ದ ಜೈಲು ಆಸ್ಪತ್ರೆಯನ್ನು ತೊರೆದು ರಾಜಕೀಯ ಮತ್ತ ಮದುವೆ ಸೇರಿದಂತೆ ಹೊಸ ಬದುಕಿನತ್ತ ಮೊದಲ ಹೆಜ್ಜೆಯನ್ನಿರಿಸಿದ ಅವರು ‘ನಾನು ದೇವತೆಯಲ್ಲ. ನಾನು ಮಾನವಳಾಗಿರಲು ಬಯಸುತ್ತೇನೆ. ಧನಾತ್ಮಕ ಬದಲಾವಣೆಗಳನ್ನು ತರಲು ಮಣಿಪುರದ ಮುಖ್ಯಮಂತ್ರಿಯಾಗಲು ಬಯಸುತ್ತೇನೆ ಎಂದು ಹೇಳಿದರು.
ಉಪವಾಸವನ್ನು ಅಂತ್ಯಗೊಳಿಸುವ ಶರ್ಮಿಳಾರ ನಿರ್ಧಾರವು ಭಾರತ ಸರಕಾರಕ್ಕೆ ವಿವಾದಾತ್ಮಕ ಅಫ್‌ಸ್ಪಾ ಕಾಯ್ದೆಯನ್ನು ರದ್ದುಗೊಳಿಸುವ ಅವಕಾಶವನ್ನು ಒದಗಿಸಿದೆ ಎಂದು ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಹೇಳಿದೆ.
2000,ನವೆಂಬರ್ 2ರಂದು ರಾಜಧಾನಿ ಇಂಫಾಲ್ ಸಮೀಪದ ಮಾಲೊಮ್‌ನಲ್ಲಿ ಅಸ್ಸಾಂ ರೈಫಲ್ಸ್‌ನ ಯೋಧರು 10 ಮಣಿಪುರಿ ಯುವಕರನ್ನು ಹತ್ಯೆಗೈದಿದ್ದರು. ಎರಡು ದಿನಗಳ ಬಳಿಕ ನ.4ರಂದು ‘ಸಶಸ್ತ್ರ ಪಡೆಗಳಿಗೆ ಕೊಲ್ಲುವ ಪರವಾನಿಗೆಯನ್ನು ನೀಡಿರುವ ’ ಅಫ್‌ಸ್ಪಾ ಕಾಯ್ದೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದರು.
ಆ.9ರಂದು ಉಪವಾಸವನ್ನು ಅಂತ್ಯಗೊಳಿಸುವುದಾಗಿ ಮತ್ತು ಮದುವೆಯಾಗುವ ಯೋಜನೆಯನ್ನು ಹೊಂದಿರುವುದಾಗಿ ಜು.26ರಂದು ಪ್ರಕಟಿಸುವ ಮೂಲಕ ಶರ್ಮಿಳಾ ಪ್ರತಿಯೊಬ್ಬರನ್ನೂ ಅಚ್ಚರಿಯಲ್ಲಿ ಕೆಡವಿದ್ದರು.
ಶರ್ಮಿಳಾರ ನಿರ್ಧಾರದ ಬಗ್ಗೆ ಮಣಿಪುರದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಅವರು ಉಪವಾಸವನ್ನು ನಿಲ್ಲಿಸದೆ ತನ್ನ ಹೋರಾಟವನ್ನು ಮುಂದುವರಿಸಬೇಕೆಂದು ಕೆಲವರು ಬಯಸಿದ್ದರೆ, ಅವರ ಬದುಕು ಯಾರದೇ ಸೊತ್ತಲ್ಲ ಮತ್ತು ಅದನ್ನು ಅವರು ತನಗಿಷ್ಟ ಬಂದಂತೆ ಬದುಕುತ್ತಾರೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ಡೆಸ್ಮಂಡ್ ಕುಟಿನ್ಹೋ ಅವರು 2011ರಲ್ಲಿ ಶರ್ಮಿಳಾರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಬಳಿಕ ಅವರ ಖಾಸಗಿ ಬದುಕು ಅವರ ಸಾರ್ವಜನಿಕ ಬದುಕಿನ ಮೇಲೆ ಪ್ರಾಬಲ್ಯ ಸಾಧಿಸತೊಡಗಿತ್ತು. 2009ರಿಂದ ಆಗ 48 ವರ್ಷ ವಯಸ್ಸಾಗಿದ್ದ ಕುಟಿನ್ಹೋ ಮತ್ತು ಶರ್ಮಿಳಾರ ನಡುವೆ ಪತ್ರ ವ್ಯವಹಾರ ನಡೆಯುತ್ತಿತ್ತು. ತಮ್ಮಿಬ್ಬರ ಭೇಟಿಯ ಬಳಿ ತಾನು ಅವರನ್ನು ಪ್ರೀತಿಸುತ್ತಿದ್ದುದಾಗಿ ಶರ್ಮಿಳಾ ಹೇಳಿದ್ದರು.
ಇದೂ ಕೂಡ ಹಲವು ಮಣಿಪುರಿಗಳಿಗೆ ಪಥ್ಯವಾಗಿರಲಿಲ್ಲ. ಅಫ್‌ಸ್ಪಾ ವಿರೋಧಿ ಚಳವಳಿಯಿಂದ ಶರ್ಮಿಳಾರನ್ನು ವಿಮುಖಗೊಳಿಸಲೆಂದೇ ಭಾರತ ಸರಕಾರವು ಕುಟಿನ್ಹೋರನ್ನು ನಿಯೋಜಿಸಿದೆ ಎಂದು ಅವರು ನಂಬಿದ್ದರು.
ಜೈಲು,ಆಸ್ಪತ್ರೆ ಎಂದು ಹಲವಾರು ವರ್ಷಗಳನ್ನು ಮನೆಯಿಂದ ಹೊರಗೇ ಕಳೆದಿದ್ದ ಶರ್ಮಿಳಾ ಮಂಗಳವಾರ ಬಿಡುಗಡೆಗೊಂಡ ಬಳಿಕ ತನ್ನ ತಾಯಿ ಸಾಖಿ ದೇವಿ(94) ಮತ್ತು ಅಣ್ಣ ಇರೋಮ್ ಸಿಂಘಜಿತ್ ವಾಸವಾಗಿರುವ ಇಲ್ಲಿಯ ಕೊಂಗ್‌ಕಾಮ್‌ನ ತನ್ನ ಮನೆಗೆ ತೆರಳಿದರು.


 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X