ಬಂಟ್ವಾಳ ಎಸ್ಕೆಎಸ್ಸೆಸ್ಸೆಫ್‌ನಿಂದ ವಿಖಾಯ ಮೀಟ್

ಬಂಟ್ವಾಳ, ಆ. 9: ಎಸ್ಕೆಎಸ್ಸೆಸ್ಸೆೆಫ್ ಬಂಟ್ವಾಳ ವಲಯ ಸಮಿತಿಯ ವತಿಯಿಂದ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ವಿಖಾಯ ಮೀಟ್ ಕಾರ್ಯಕ್ರಮವು ವಗ್ಗ ಜುಮಾ ಮಸೀದಿ ವಠಾರದಲ್ಲಿ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಶೀರ್ ಮಜಲ್ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಷಾದ್ ಹುಸೈನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯಲ್ಲಿ ವಗ್ಗ ಜುಮಾ ಮಸೀದಿಯ ಖತೀಬ್ ಇಬ್ರಾಹೀಂ ಪೈಝಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮಧ್ಯಾಹ್ನದ ಬಳಿಕ ಜರಗಿದ ವಿಖಾಯ ಮೀಟ್ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸ್ವದಖತ್ತುಲ್ಲಾ ಪೈಝಿ ಕೆಲಿಂಜ ಬಾಗವಹಿಸಿದ್ದರು. ಮಂಗಳನಗರ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡಮಿ ಪ್ರಾಂಶುಪಾಲ ಕೆ.ಎಂ.ಖಾಸಿಂ ದಾರಿಮಿ ಕಿನ್ಯ ಅನುಸ್ಮರಣಾ ಮುಖ್ಯ ಪ್ರಭಾಷಣಗೈದರು.
ಮುಖ್ಯ ಅತಿಥಿಗಳಾಗಿ ಬಾಂಬಿಲ ಎಂಜೆಎಂ ಖತೀಬ್ ಸಿರಾಜುದ್ದೀನ್ ಪೈಝಿ, ಎಸ್ಕೆಎಸ್ಸೆಸ್ಸೆಫ್ ವಿಖಾಯ ಬಂಟ್ವಾಳ ವಲಯ ಅಧ್ಯಕ್ಷ ಮಯ್ಯದ್ದಿ ಕಲ್ಲಗುಡ್ಡೆ, ಉಪಾಧ್ಯಕ್ಷ ಲತೀಫ್ ಕಲ್ಲುಗುಡ್ಡೆ, ಕನ್ವಿನರ್ ಮುಹಮ್ಮದ್ ಫಾರೂಕ್, ಎಸ್ಕೆಎಸ್ಸೆಸ್ಸೆಫ್ ವಗ್ಗ ಶಾಖೆ ಅಧ್ಯಕ್ಷ ವಿ.ಎಂ.ಖಾಲಿದ್, ಐಎಂಎಸ್‌ಎಸ್ ವಗ್ಗ ಅಧ್ಯಕ್ಷ ಎಂ.ರಫೀಕ್ ಉಪಸ್ಥಿತರಿದ್ದರು. ಟಿ.ಎಂ.ಹನೀಫ್ ತಾಳಿಪಡ್ಪು ಸ್ವಾಗತಿಸಿದರು. ಶಾಕೀರ್ ಮಿತ್ತಬೈಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.







