ಸೊಸೆ ಆತ್ಮಹತ್ಯೆ: ಅತ್ತೆ ಹೃದಯಾಘಾತದಿಂದ ಮೃತ್ಯು
ಕುಶಾಲನಗರ, ಆ.9: ಸಮೀಪದ ಶಿರಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಶೃತಿ(25)ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಎರಡೂವರೆ ತಿಂಗಳ ಹಿಂದೆಯಷ್ಟೆ ಗಣೇಶ್ ಎಂಬಾತನೊಂದಿಗೆ ವಿವಾಹವಾಗಿ ನಲ್ಲೂರುಕೊಪ್ಪದಲ್ಲಿ ವಾಸವಿದ್ದರು. ನಗರ ಪ್ರದೇಶದ ಜೀವನ ಶೈಲಿಗೆ ಹೊಂದಿಕೊಂಡಿದ್ದ, ಪದವೀಧರೆ ಶೃತಿಯು ಗಂಡನೊಂದಿಗೆ ಹಳ್ಳಿಯಿಂದ ಹೊರಹೋಗಿ ಪಟ್ಟಣದಲ್ಲಿ ವಾಸಮಾಡುವಂತೆ ಪೀಡಿಸುತಿದ್ದಳು ಎನ್ನಲಾಗಿದೆೆ. ತಾಯಿಯ ಆರೋಗ್ಯ ಸರಿಯಿಲ್ಲದ ಕಾರಣ ಗಣೇಶ್ ಇದನ್ನು ನಿರಾಕರಿಸಿದ್ದರು. ಇದರಿಂದ ಮನನೊಂದು ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.
ಕಾಯಿಲೆಯಿಂದ ಬಳಲುತ್ತಿದ್ದ ಗಣೇಶ್‌ರ ತಾಯಿ ಪಾರ್ವತಮ್ಮ(68) ಸೊಸೆಯ ಆತ್ಮಹತ್ಯೆಯಿಂದ ಆಘಾತಗೊಂಡು ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆಯೂ ನಡೆದಿದೆೆ.
ಈ ಸಂಬಂಧ ಕುಶಾಲನಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ. ಕುಶಾಲನಗರ ಸಮುದಾಯದ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಯ ನಂತರ ಮೃತ ದೇಹಗಳನ್ನು ವಾರಸುದಾರರಿಗೆ ಒಪ್ಪಿಸಲಾಯಿತು.





