‘ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಲು ಕರೆ’
ಫಲಾನುಭವಿಗಳ ಆಯ್ಕೆ ಕಾರ್ಯಕ್ರಮ
ಕಡೂರು, ಆ.9: ಸರಕಾರ ರೈತರಿಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆಯಿಂದ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಶರತ್‌ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ತೋಟಗಾರಿಕೆ ಕಚೇರಿ ಅವರಣದಲ್ಲಿ ರಾಷ್ಟ್ರೀಯ ತೋಟಗಾರಿಕಾ ಇಲಾಖೆ ಮಿಷನ್ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಸಾಲಿನಲ್ಲಿ ರೈತರು ನೀಡಿದ ಅರ್ಜಿಗಳು ಹೆಚ್ಚಿರುವ ಕಾರಣ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದೆ,ಆಯ್ಕೆಗೊಂಡ ಫಲಾನುಭವಿಗಳು ಇಲಾಖೆ ನೀಡುವ ಸಲಕರಣೆಗಳನ್ನು ವೈಜ್ಞ್ಞಾನಿಕವಾಗಿ ಬಳಸಿಕೊಂಡು, ಅಭಿವೃದ್ಧಿ ಹೊಂದುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಪಿತಾಮಹಾ ಎಂದೇ ಗುರುತಿಸಲಾಗುವ ಡಾ. ಎಂ.ಎಚ್. ಮರಿಗೌಡರ ನೂರನೇ ವರ್ಷದ ಜನ್ಮಾ ದಿನಚರಣೆಯನ್ನು ನಡೆಸುತ್ತಿದ್ದು, ರೈತರು ಇವರ ಯೋಚನೆಗಳನ್ನು ಮತ್ತು ಕಾರ್ಯಗಳನ್ನು ಕಾರ್ಯಗತಗೊಳಿಸುವಂತೆ ಕರೆ ನೀಡಿದರು.
ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜಪ್ಪ, ತಾಲೂಕು ಪಂಚಾಯತ್ ಸದಸ್ಯೆ, ಸದಸ್ಯೆ ಕಾವೇರಿಲಕ್ಕಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ದಿವಂಗತ ಎಚ್.ಎಂ. ಮರಿಗೌಡರ ಜನ್ಮಾ ದಿನಾಚರಣೆ ಅಂಗವಾಗಿ ರೈತರಿಗೆ ಮಾವು, ಕರಿಬೇವು,ಸಪೋಟ ಹಾಗೂ ತೆಂಗಿನ ಸಸಿಗಳನ್ನು ವಿತರಿಸ ಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಬ್ಯಾಗಡೇಹಳ್ಳಿ ಬಸವರಾಜು, ಕೃಷಿ ಅಧಿಕಾರಿ ಅರುಣ್, ಅನಿನಾಶ್, ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.







