2016ರ ಮೊದಲಿನ ಪಿಂಚಣಿದಾರರಿಗೆ ಆ.31ರೊಳಗೆ ಏರಿಕೆಯಾದ ಪಿಂಚಣಿ ಮತ್ತು ಬಾಕಿ ಪಾವತಿ
ಹೊಸದಿಲ್ಲಿ,ಆ.9: 2016ಕ್ಕಿಂತ ಮೊದಲು ಸೇವೆಯಿಂದ ನಿವೃತ್ತರಾಗಿರುವ ಎಲ್ಲ ಕೇಂದ್ರ ಸರಕಾರಿ ನೌಕರರು ಪಿಂಚಣಿಯಲ್ಲಿ ಹೆಚ್ಚಳ ಮತ್ತು ಬಾಕಿಯಂತಹ ಏಳನೆ ವೇತನ ಆಯೋಗದ ಶಿಫಾ ರಸುಗಳ ಲಾಭಗಳನ್ನು ಈ ತಿಂಗಳ ಅಂತ್ಯದೊಳಗೆ ಪಡೆಯಲಿದ್ದಾರೆ ಎಂದು ಸರಕಾರವು ತಿಳಿಸಿದೆ. 2015,ಡಿಸೆಂಬರ್ 31ರವರೆಗೆ ನಿವೃತ್ತರಾಗಿರುವ ಹಾಲಿ ಪಿಂಚಣಿದಾರಿಗೆ ಆರನೆ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿದ್ದ ಸಂದರ್ಭ ನಿಗದಿಗೊಳಿಸಿದ್ದ ಪಿಂಚಣಿ ಅಥವಾ ಕುಟುಂಬ ಪಿಂಚಣಿಯನ್ನು 2.57ರಿಂದ ಗುಣಿಸುವ ಮೂಲಕ ಪರಿಷ್ಕೃತ ಪಿಂಚಣಿ ಅಥವಾ ಕುಟುಂಬ ಪಿಂಚಣಿಯನ್ನು ನಿರ್ಧರಿಸಲಾಗುತ್ತದೆ ಮತ್ತು ಇದು 2016, ಜ.1ರಿಂದ ಪೂರ್ವಾ ನ್ವಯಗೊಳ್ಳುತ್ತದೆ. 2016ರ ಮೊದಲಿನ ಪಿಂಚಣಿದಾರರ ಪಿಂಚಣಿಯಲ್ಲಿ ಏರಿಕೆ ಮತ್ತು ಬಾಕಿ ಮಂಜೂರಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ.
ಈ ಪಿಂಚಣಿದಾರರಿಗೆ ಪರಿಷ್ಕೃತ ಪಿಂಚಣಿ ಮತ್ತು ಬಾಕಿ 2016,ಆ.31ರೊಳಗೆ ಪಾವತಿ ಯಾಗುವಂತೆ ನೋಡಿಕೊಳ್ಳುವಂತೆ ಎಲ್ಲ ಪಿಂಚಣಿ ವಿತರಣೆ ಅಧಿಕಾರಿಗಳಿಗೆ ಮತ್ತು ಪಿಂಚಣಿ ವಿತರಣೆಯನ್ನು ನಿರ್ವಹಿಸುತ್ತಿರುವ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಅದು ನಿರ್ದೇಶ ನೀಡಿದೆ.





