ಪಾಕ್ ರಾಯಭಾರಿಯನ್ನು ಕರೆಸಿಕೊಂಡು ಪ್ರತಿಭಟನೆ ಸಲ್ಲಿಸಿದ ವಿದೇಶಾಂಗ ಸಚಿವಾಲಯ
ಹೊಸದಿಲ್ಲಿ,ಆ.9: ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹಳಸತೊಡಗುತ್ತಿರುವ ನಡುವೆಯೇ ಪಾಕಿಸ್ತಾನದ ರಾಯಭಾರಿ ಅಬ್ದುಲ್ ಬಾಸಿತ್ ಅವರನ್ನು ಮಂಗಳವಾರ ಕರೆಸಿಕೊಂಡ ಭಾರತ ಸರಕಾರವು, ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯನ್ನು ಪ್ರಚೋದಿಸಿರುವ ಗಡಿಯಾಚೆಯ ಭಯೋತ್ಪಾದನೆಗೆ ಆ ರಾಷ್ಟ್ರದ ನಿರಂತರ ಬೆಂಬಲ ಕುರಿತು ಕಟುವಾದ ಪ್ರತಿಭಟನೆಯನ್ನು ಸಲ್ಲಿಸಿತು.
ಸೌತ್ ಬ್ಲಾಕ್‌ನ ತನ್ನ ಕಚೇರಿಗೆ ಬಾಸಿತ್‌ರನ್ನು ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು, ಉತ್ತರ ಕಾಶ್ಮೀರದಲ್ಲಿ ಇತ್ತೀಚಿನ ಗುಂಡಿನ ಕಾಳಗದ ಸಂದರ್ಭ ಸೆರೆ ಸಿಕ್ಕಿರುವ ಲಷ್ಕರ್ ಭಯೋತ್ಪಾದಕ ಹಾಗೂ ಪಾಕ್ ಪ್ರಜೆ ಬಹಾದುರ್ ಅಲಿಯನ್ನು ವಿಶೇಷವಾಗಿ ಪ್ರಸ್ತಾಪಿಸಿ ಪ್ರತಿಭಟನಾ ಪತ್ರವನ್ನು ನೀಡಿದರು.
Next Story





