ಭಟ್ಕಳ: ಸಮುದ್ರಪಾಲಾದ ಮೀನುಗಾರನ ಮೃತದೇಹ ಪತ್ತೆ

ಭಟ್ಕಳ, ಆ.9: ಕಳೆದ ಐದಾರು ದಿನಗಳ ಹಿಂದೆ ಮೀನುಗಾರಿಕೆ ತೆರಳಿದ ದೋಣಿಯೊಂದು ಹವಾಮಾನ ವೈಪರೀತ್ಯದಿಂದಾಗಿ ಉರುಳಿಬಿದ್ದ ಪರಿಣಾಮ ನೀರುಪಾಲಾದ ಮೀನುಗಾರ ಮಂಜುನಾಥ್ ಬಾಬು ಖಾರ್ವಿ ಎನ್ನುವವರ ಮೃತದೇಹ ಮಂಗಳವಾರ ತ್ರಾಸಿ ಬಳಿಯ ಸಮುದ್ರ ಕಿನಾರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ದೊರಕಿದೆ.
ಆ.3ರಂದು ಮೀನುಗಾರಿಕೆ ತೆರಳಿದ ಎಂಟು ಮಂದಿ ಮೀನುಗಾರರಲ್ಲಿ 7ಜನರು ಸತತ ಒಂಬತ್ತು ಗಂಟೆ ಕಾಲ ಸಮುದ್ರದಲಿ ್ಲತಮ್ಮಜೀವದೊಂದಿಗೆ ಹೋರಾಟ ನಡೆಸಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮಂಜುನಾಥ್ ಬಾಬು ಖಾರ್ವಿ ಎನ್ನುವವರು ಸಮುದ್ರದಲ್ಲಿ ದಡ ಸೇರಲು ಆಗದೆ ನಾಪತ್ತೆಯಾಗಿದ್ದರು.
ಉತ್ತರ ಕನ್ನಡ ಜಿಲ್ಲಾ ಕೋಸ್ಟ್ ಗಾರ್ಡ್ ಸಿಬ್ಬಂದಿ ಹಾಗೂ ಸ್ಥಳಿಯ ಮೀನುಗಾರರು ಸತತ ಮೂರುದಿನಗಳ ಕಾಲ ಸಮುದ್ರದಲ್ಲಿ ತಡಕಾಡಿದರೂ ನಾಪತ್ತೆಯಾದ ಮಂಜುನಾಥ್‌ಖಾರ್ವಿಯವರ ಸುಳಿವು ಸಿಕ್ಕಿರಲಿಲ್ಲ. ಆದರೆ ಐದು ದಿನಗಳ ಬಳಿಕ ಮಂಗಳವಾರ ಮಂಜುನಾಥ್‌ಖಾರ್ವಿಯವರ ಮೃತದೇಹ ತ್ರಾಸಿ ಬಳಿಯ ಸಮುದ್ರ ಕಿನಾರೆಯಲ್ಲಿ ದೊರಕಿದೆ.
ಮಂಜುನಾಥ್ ಪತ್ನಿ, ಇಬ್ಬರು ಮಕ್ಕಳು ಹಾಗೂ ತಂದೆ ತಾಯಿಯನ್ನು ಅಗಲಿದ್ದಾರೆ.





