ಪಡಿತರ ಕೂಪನ್ ವ್ಯವಸ್ಥೆಗೆ ಜನತೆ ಸಹಕರಿಸಬೇಕು: ಯು.ಟಿ.ಖಾದರ್

ಬೆಂಗಳೂರು, ಆ.9: ಜನತೆಗೆ ಪಡಿತರ ಪದಾರ್ಥಗಳು ಸುಲಭವಾಗಿ ಸಿಗಬೇಕು, ಪಡಿತರ ವಿತರಕರಿಗೆ ನಷ್ಟವಾಗಬಾರದು, ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು, ಈ ನಿಟ್ಟಿನಲ್ಲಿ ‘ಪಡಿತರ ಕೂಪನ್’ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಇದಕ್ಕೆ ಜನತೆ ಸಹಕರಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.
ಮಂಗಳವಾರ ವಿಕಾಸಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಕೂನ್ ವ್ಯವಸ್ಥೆಯಿಂದ ಪಡಿತರ ಪದಾ ರ್ಥಗಳನ್ನು ಪಡೆದಿರುವ ಜನತೆ ಈ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿ ಸಿದ್ದಾರೆ. ಆದರೆ, ಕೆಲವು ಕಡೆ ಸರ್ವರ್ ಗಳ ಕೊರತೆಯಿಂದಾಗಿ ಸ್ವಲ್ಪ ತೊಂದರೆ ಯಾಗಿದೆ. ಇದನ್ನು ನಿವಾರಿಸುವ ಕುರಿತು ‘ಈ ಆಡಳಿತ’ದ ಜೊತೆ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ಪ್ರಾರಂಭಿಕ ಹಂತವಾಗಿ ಆಯ್ದ ಜಿಲ್ಲೆಯ ಕೇಂದ್ರ ಪ್ರದೇಶಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾತ್ರ ಪಡಿ ತರ ಕೂಪನ್ ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಜನತೆಯ ಸ್ಪಂದನೆಯ ಅನುಸಾರವಾಗಿ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದರು.
ಪಡಿತರ ಕೂಪನ್ ಉಚಿತ: ಪಡಿತರ ಕೂಪನ್ ವಿತರಣೆ ಮಾಡಲು ‘ಬೆಂಗ ಳೂರು ಒನ್’ ಹಾಗೂ ಖಾಸಗಿ ಸೇವಾ ಕೇಂದ್ರಗಳಿಗೆ ಅವಕಾಶ ಮಾಡಿಕೊಡ ಲಾಗಿದೆ. ಸರಕಾರದ ವತಿಯಿಂದಲೇ ಪ್ರತಿ ಕೂಪನ್‌ಗೆ 3 ರೂ. ಕೊಡಲಾಗುತ್ತಿದೆ. ಹೀಗಾಗಿ ಪಡಿತರ ಕಾರ್ಡ್‌ದಾರರಿಂದ ಯಾವುದೆ ಹಣ ವಸೂಲಿ ಮಾಡಬಾರದು. ಒಂದು ವೇಳೆ ಪಡಿತರದಾರರಿಂದ ಹಣ ವಸೂಲಿ ಮಾಡಿದರೆ ಅಂತಹ ಸೇವಾ ಕೇದ್ರಗಳನ್ನು ರದ್ದು ಮಾಡಲಾಗುವುದು ಎಂದು ಅವರು ಹೇಳಿದರು.
ಅನುಕೂಲತೆಗಳು
ಪಡಿತರ ಕೂಪನ್ ಪಡೆದರೆ ತಾಲೂಕಿನ ಯಾವುದೆ ನ್ಯಾಯ ಬೆಲೆ ಅಂಗಡಿಯಲ್ಲಿ ಪಡಿತರ ಪದಾರ್ಥಗಳನ್ನು ಪಡೆಯಬಹುದು. ಹಾಗೂ ಯಾವ ಕಾರ್ಡ್‌ಗೆ ಎಷ್ಟು ಧಾನ್ಯ, ಸೀಮೆಎಣ್ಣೆ ಕೊಡಲಾಗುತ್ತಿದೆ ಎಂಬುದು ಪಡಿತರ ಕೂಪನ್‌ನಲ್ಲಿ ದಾಖಲಾಗುತ್ತದೆ. ಇದರಿಂದ ಪಡಿತರ ವಿತರಕರು ಪಡಿತರದಾರರಿಗೆ ವಂಚನೆ ಮಾಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಜನತೆ ಈ ವ್ಯವಸ್ಥೆಯನ್ನು ಮುಕ್ತವಾಗಿ ಸ್ವಾಗತಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.





