ಮೋದಿ 3 ದಿನಗಳೊಳಗೆ ಕ್ಷಮೆ ಕೇಳಬೇಕು, ಇಲ್ಲವೇ ಕಾನೂನು ಕ್ರಮ ಎದುರಿಸಬೇಕು!: ಗೋವರ್ಧನ ಪೀಠದ ಶಂಕರಾಚಾರ್ಯ

ಮಥುರ,ಆ.10: ಗೊಸಂರಕ್ಷರ ವಿರುದ್ಧ ಹೇಳಿಕೆ ನೀಡಿದ ಪ್ರಧಾನಿ ನರೇಂದ್ರ ಮೋದಿ ತನ್ನ ಹೇಳಿಕೆಯನ್ನು ಹಿಂಪಡೆದು ಮೂರುದಿವಸದೊಳಗೆ ಕ್ಷಮೆ ಯಾಚಿಸಬೇಕೆಂದು ಗೋವರ್ಧನಾ ಪೀಠದ ಶಂಕರಾಚಾರ್ಯರು ಪ್ರಧಾನಿಗೆ ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ. ಇಲ್ಲದಿದ್ದರೆ ಪ್ರಧಾನಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಅವರು ತಿಳಿಸಿದ್ದಾರೆ. "ಗೋಸಂರಕ್ಷಕರ ಅಂತಸ್ತಿಗೆ ಹಾನಿಯೊಡ್ಡುವ ಹೇಳಿಕೆಯನ್ನು ಪ್ರಧಾನಿ ನೀಡಿದ್ದಾರೆ" ಎಂದು ಅವರು ಆರೋಪಿಸಿದ್ದಾರೆ ಎನ್ನಲಾಗಿದೆ.
"ಮೋದಿ ಬಹಿರಂಗವಾಗಿ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ನಾವು ಮಾನನಷ್ಟ ಮೊಕದ್ದಮೆ ಹೂಡುತ್ತೇವೆ. ಗೋವು,ಗಂಗೆ ಹಾಗೂ ಗೀತೆ ಮೋದಿಯನ್ನು ಈಗಿನ ಸ್ಥಾನಕ್ಕೆ ತಲುಪಿಸಿದೆ ಎಂಬುದನ್ನು ಅವರು ಮರೆಯಬಾರದು" ಎಂದು ಶಂಕರಾಚಾರ್ಯ ಸ್ವಾಮಿ ಅಧೋಕ್ಷಾಜಾನಂದ ಸರಸ್ವತಿ ಮಾಧ್ಯಮಗಳೊಂದಿಗೆ ಹೇಳಿದ್ದಾರೆಂದು ವರದಿಯಾಗಿದೆ.
ಗೋರರಕ್ಷಕರ ವೇಷದಲ್ಲಿ ಇಳಿದವರಲ್ಲಿ ಶೇ.80ರಷ್ಟು ಮಂದಿ ಸಾಮಾಜ ವಿರೋಧಿಗಳು ಹಾಗೂ ಕ್ರಿಮಿನಲ್‌ಗಳೆಂದು ಮೋದಿ ಹೇಳಿದ್ದರು. ದಲಿತರ ವಿರುದ್ಧ ನಡೆದ ಹಲ್ಲೆಯನ್ನು ಉಲ್ಲೇಖಿಸಿ ಹೀಗೆ ಖಾರವಾದ ಹೇಳಿಕೆ ನೀಡಿದ್ದರು. ಇದೀಗ ಮೋದಿಯ ವಿರುದ್ಧ ಹಿಂದೂ ಮಹಾಸಭಾ ಹಾಗೂ ಶಿವಸೇನೆ ರಂಗಪ್ರವೇಶಿಸಿದೆ ಎಂದು ವರದಿ ತಿಳಿಸಿದೆ.





