ದುಬೈ: ಹೆರಿಗೆ ರಜೆ ಕಾನೂನು ಪರಿಷ್ಕರಣೆಗೆ ಸಮಿತಿ ರಚನೆ
.png)
ದುಬೈ,ಆ.10: ದೇಶದಲ್ಲಿ ಈಗಿರುವ ಹೆರಿಗೆ ರಜೆ ಕಾನೂನನ್ನು ಪರಿಷ್ಕರಿಸುವುದಕ್ಕಾಗಿ ರಾಷ್ಟ್ರೀಯ ಸಮಿತಿಯೊಂದನ್ನು ರೂಪೀಕರಿಸಲಾಗಿದೆ. ಕೆಲಸದ ಸ್ಥಳಗಳಲ್ಲಿ ಲಿಂಗ ಸಮಾನತೆಯನ್ನುಖಚಿತಪಡಿಸಲಿಕ್ಕಾಗಿ ಸಮಿತಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಯುಎಇ ಲಿಂಗ ಸಮಾನತಾ ಕೌನ್ಸಿಲ್- ದುಬೈ ವುಮೆನ್ ಎಸ್ಟಾಬ್ಲಿಷ್‌ಮೆಂಟ್ ಅಧ್ಯಕ್ಷೆ ಶೇಖ್ ಮನಾಲ್ ಬಿಂತ್ ಮುಹಮ್ಮದ್ ಬಿನ್ ರಾಶಿದ್ ಮಕ್ತೂಂ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸ್ಥಿತ್ವದಲ್ಲಿರುವ ಮಾನದಂಡಗಳ ಪ್ರಕಾರ ಹೆರಿಗೆ ರಜೆ ಕಾನೂನನ್ನು ಪರಿಷ್ಕರಿಸಲಾಗುವುದು. ಇತರ ದೇಶಗಳ ಕಾನೂನನ್ನು ಅಧ್ಯಯನ ಮಾಡಿದ ಬಳಿಕ ಈ ವಿಷಯದಲ್ಲಿ ತೀರ್ಮಾನಕ್ಕೆ ಬರಲಾಗುವುದು ಎಂದು ಅವರು ಹೇಳಿದ್ದಾರೆ.ಕೆಲಸದ ಸ್ಥಳಗಳಲ್ಲಿ ಮಹಿಳೆಯರು-ಪುರುಷರ ಸಮಾನತೆಯನ್ನು ಖಚಿತ ಪಡಿಸಲು ಕ್ರಮಗಳನ್ನು ಸ್ವೀಕರಿಸಲಾಗುವುದು. ಸಾರ್ವಜನಿಕ-ಖಾಸಗಿ ಸಂಸ್ಥೆಗಳಲ್ಲಿ ಮಹಿಳೆಯರಿಗಾಗಿ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಾಗುವುದು. ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದ್ದಾರೆ. ರಾಜಕೀಯ ನಾಯಕತ್ವದಲ್ಲಿ ಹೆಚ್ಚು ಮಹಿಳೆಯರನ್ನು ತರಲು ಉದ್ದೇಶಿಸಲಾಗಿದೆ ಎಂದು ಕೌನ್ಸಿಲ್ ಉಪಾಧ್ಯಕ್ಷೆ ಮುನಾ ಗನೀಂ ಅಲ್ ಮರ್ರಿ ತಿಳಿಸಿದ್ದಾರೆ. ಕೆಲಸಕ್ಕೆ ಸೇರುವಂತೆ ಮಹಿಳೆಯರನ್ನು ಪ್ರೊತ್ಸಾಹಿಸಲಾಗುವುದು,ಇದಕ್ಕಾಗಿ ಸರಕಾರಿ,ಖಾಸಗಿವಲಯಗಳಲ್ಲಿ ಪಾರ್ಟ್‌ಟೈಂ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುವುದು. ದೇಶದ ಆರ್ಥಿಕ ರಂಗದ ಪ್ರಗತಿಗೆ ಇದು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆಂದು ವರದಿಯಾಗಿದೆ.





