4 ವರ್ಷದ ವಂಡರ್ ಗರ್ಲ್ ಅನನ್ಯಾ 9ನೇ ಕ್ಲಾಸಿಗೆ ದಾಖಲು !
.jpg)
ಲಕ್ನೊ, ಆ.10: ಉತ್ತರ ಪ್ರದೇಶದ ಲಕ್ನೊದ ಅನನ್ಯಾ ವರ್ಮ ಎಂಬ ನಾಲ್ಕು ವರ್ಷ ಏಳು ತಿಂಗಳು ವಯಸ್ಸಿನ ಬಾಲಕಿಗೆ 9ನೆ ಕ್ಲಾಸಿಗೆ ದಾಖಲಾತಿ ಸಿಕ್ಕಿದೆ. ಅನನ್ಯಾ ಇನ್ನೊಬ್ಬಳು ವಂಡಲ್‌ಗರ್ಲ್ ಖ್ಯಾತಿಯ ಸುಷ್ಮಾ ವರ್ಮಾಳ ಚಿಕ್ಕ ತಂಗಿಯಾಗಿದ್ದಾಳೆ. ಸುಷ್ಮಾ ತನ್ನ ಹದಿನೈದನೆ ವರ್ಷದಲ್ಲಿ ಎಂಎಸ್ಸಿ ಪಾಸು ಮಾಡಿ ಪಿಎಚ್‌ಡಿಗೆ ಸೇರಿಕೊಂಡಿದ್ದಳೆಂದು ವರದಿಯಾಗಿದೆ. ಅನನ್ಯಾಳನ್ನು ಒಂಬತ್ತನೆ ತರಗತಿಗೆ ಸೇರಿಸಿಕೊಳ್ಳಲಾಗಿದ್ದರೂ ಮಾಧ್ಯಮಿಕ ಶಿಕ್ಷಣ ಪರಿಷತ್ ಅನುಮತಿ ನೀಡಿದ ನಂತರವೇ ಅವಳು ಒಂಬತ್ತನೆ ತರಗತಿಯ ಪರೀಕ್ಷೆ ಬರೆಯಲು ಸಾಧ್ಯವಾಗಲಿದೆ. ಅನನ್ಯಾಳ ತಂದೆ ತೇಜ್ ಬಹಾದೂರ್‌ವರ್ಮಾ ಬಿಬಿಎಯುನಲ್ಲಿ ಸೂಪರ್‌ವೈಸರ್ ಆಗಿ ಕೆಲಸಮಾಡುತ್ತಿದ್ದಾರೆ. ಸೈಂಟ್ ಮೇರೀಸ್ ಕಾಲೇಜಿನ ಶಿಕ್ಷಕರೊಬ್ಬರ ಕೈಯಲ್ಲಿದ್ದ ಪುಸ್ತಕವನ್ನು ತೆಗೆದು ಅನನ್ಯಾ ಲೀಲಾಜಾಲವಾಗಿ ಓದಿದ್ದಳು. ಇದನ್ನು ಕಂಡು ಅವರು ಒಂಬತ್ತನೆ ತರಗತಿಗೆ ಸೇರಿಸಲು ಸಲಹೆ ನೀಡಿದರೆಂದು ಅನನ್ಯಾಳ ತಂದೆ ಹೇಳಿದ್ದಾರೆ. ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಬಳಿಕ ಅವಳನ್ನು ಒಂಬತ್ತನೆ ತರಗತಿಗೆ ಸೇರಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ. ಇದೇ ಶಾಲೆಯಲ್ಲಿ ಈ ಹಿಂದೆ ಅನನ್ಯಾಳ ಅಕ್ಕ ಸುಷ್ಮಾ ವರ್ಮಾ ಕೂಡಾ ಒಂತ್ತನೆ ತರಗತಿಗೆ ಸೇರಿ ದಾಖಲೆ ಸೃಷ್ಟಿಸಿದ್ದಳು ಎಂದು ವರದಿಯಾಗಿದೆ.





