ಸುಧಾರಣೆಯ ದೃಷ್ಟಿಯಿಂದ ತೆರಿಗೆ ಪಾವತಿ ಅನಿವಾರ್ಯ : ಕೆ.ಎ.ಚಂದ್ರಶೇಖರ್
ಆದಾಯ ಘೋಷಣೆ ಯೋಜನೆ-2016 ಮಾಹಿತಿ ಕಾರ್ಯಕ್ರಮ

ಪುತ್ತೂರು, ಅ.10: ತೆರಿಗೆ ಕಟ್ಟುವ ಕಾರಣದಿಂದ ದೇಶದಲ್ಲಿ ಸುಧಾರಣಾ ಕೆಲಸಗಳು ನಡೆಯುತ್ತದೆ. ಈ ನಿಟ್ಟಿನಲ್ಲಿ ವ್ಯವಸ್ಥೆಯ ಹಿತದೃಷ್ಟಿಯಿಂದ ತೆರಿಗೆ ಪಾವತಿ ಅನಿವಾರ್ಯ ಎಂದು ಮಂಗಳೂರು ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತ ಕೆ.ಎ.ಚಂದ್ರಕುಮಾರ್ ಹೇಳಿದರು.
ಅವರು ಪುತ್ತೂರು ಆದಾಯ ತೆರಿಗೆ ಇಲಾಖೆ ಮತ್ತು ತಾಲೂಕು ಅಡಿಕೆ ವರ್ತಕರ ಅಸೋಶಿಯೇಶನ್ ಆಶ್ರಯದಲ್ಲಿ ಎಪಿಎಂಸಿ ಯಾರ್ಡ್ ಸಭಾಂಗಣದಲ್ಲಿ ಬುಧವಾರ ನಡೆದ ‘ಆದಾಯ ಘೋಷಣೆ ಯೋಜನೆ-2016’ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಘೋಷಿತ ಆದಾಯ ಘೋಷಣೆಗೆ ಬಾಕಿ ಇರುವವರ ಅನುಕೂಲಕ್ಕೆ ಕೇಂದ್ರ ಸರಕಾರ ಆದಾಯ ಘೋಷಣೆ ಯೋಜನೆ ಜಾರಿಗೆ ತಂದಿದೆ. ಅದಕ್ಕಾಗಿ ಫಾರಂ-1 ರಲ್ಲಿ ಆದಾಯ ಘೋಷಿಸಿಕೊಳ್ಳಬೇಕಾಗುತ್ತದೆ. ಬಳಿಕ ನಾಲ್ಕು ಹಂತದಲ್ಲಿ ಘೋಷಣೆಯ ಪ್ರಮಾಣ ಪತ್ರ ನೀಡಲಾಗುತ್ತದೆ. ಆದಾಯ ಮತ್ತು ಕಟ್ಟಿದ ತೆರಿಗೆಯನ್ನು ಬಹಿರಂಗಗೊಳಿಸುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.
ಎಪಿಎಂಸಿ ಅಧ್ಯಕ್ಷ ಕೃಷ್ಣ ಶೆಟ್ಟಿ ಸಬಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆದಾಯ ತೆರಿಗೆ ಅಧಿಕಾರಿ ರೋಬರ್ಟ್ ಕ್ಯಾಸ್ತಲಿನೊ., ಎಪಿಎಂಸಿ ನಿರ್ದೇಶಕ ಶುಕೂರ್ ಹಾಜಿ, ಅಡಿಕೆ ವರ್ತಕರ ಅಸೋಶಿಯೇಶನ್ ಗೌರವಾಧ್ಯಕ್ಷ ಶಶಾಂಕ್ ಮೊದಲಾದವರು ಉಪಸ್ಥಿತರಿದ್ದರು.
ಅಡಿಕೆ ವರ್ತಕರ ಅಸೋಶಿಯೇಶನ್ ಅಧ್ಯಕ್ಷ ರವೀಂದ್ರನಾಥ ರೈ ಬಳ್ಳಮಜಲು ಸ್ವಾಗತಿಸಿದರು. ಸಿದ್ದೀಕ್ ನಿರೂಪಿಸಿದರು.





