Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಹೆಚ್ಚಿನ ಚಿಕಿತ್ಸೆಗಾಗಿ ನಿರಂಜನ್ ಭಟ್...

ಹೆಚ್ಚಿನ ಚಿಕಿತ್ಸೆಗಾಗಿ ನಿರಂಜನ್ ಭಟ್ ಮಣಿಪಾಲ ಆಸ್ಪತ್ರೆಗೆ

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ

ವಾರ್ತಾಭಾರತಿವಾರ್ತಾಭಾರತಿ10 Aug 2016 9:57 PM IST
share
ಹೆಚ್ಚಿನ ಚಿಕಿತ್ಸೆಗಾಗಿ ನಿರಂಜನ್ ಭಟ್ ಮಣಿಪಾಲ ಆಸ್ಪತ್ರೆಗೆ

ಉಡುಪಿ, ಆ.10: ವಜ್ರದ ಉಂಗುರ ಹಾಗೂ ಕಿವಿಯ ಓಲೆಯನ್ನು ನುಂಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ನಂದಳಿಕೆಯ ನಿರಂಜನ್ ಭಟ್(26)ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಇಂದು ಸಂಜೆ ವೇಳೆ ವರ್ಗಾಯಿಸಲಾಗಿದೆ.

ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ನಿರಂಜನ್ ಭಟ್‌ನನ್ನು ಆ.8ರಂದು ಪೊಲೀಸರು ಬಂಧಿಸಿದ್ದರು. ಈ ವೇಳೆ ಆತ ಆ.7ರಂದು ತನ್ನ ಕೈ ಬೆರಳಿದ್ದ ಒಂದು ವಜ್ರದ ಉಂಗುರ ಹಾಗೂ ಕಿವಿಯ ಎರಡು ಓಲೆಯನ್ನು ನುಂಗಿ ರುವುದಾಗಿ ತಿಳಿಸಿದ್ದನು. ಅದರಂತೆ ಆತನನ್ನು ಆ.8ರಂದು ರಾತ್ರಿ ವೇಳೆ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ವೈದ್ಯರು ಆಸ್ಪತ್ರೆಯಲ್ಲಿ ಔಷಧಿ ನೀಡಿದ್ದರಿಂದ ನಿನ್ನೆ ಸಂಜೆ ವೇಳೆ ಶೌಚದೊಂದಿಗೆ ಆತನ ಹೊಟ್ಟೆಯಲ್ಲಿದ್ದ ಒಂದು ವಜ್ರದ ಉಂಗುರ ಹಾಗೂ ಒಂದು ಕಿವಿಯ ಓಲೆ ಹೊರ ಬಂದಿವೆ. ಆದರೆ ಇನ್ನೊಂದು ಕಿವಿಯ ಓಲೆ ಹೊಟ್ಟೆಯಲ್ಲೇ ಉಳಿದುಕೊಂಡಿದೆ. ಅದು ಆತನ ದೊಡ್ಡ ಕರುಳಿಗೆ ಚುಚ್ಚಿ ಕೂತಿರುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಮಂಗಳೂರು ವೆನ್ಲಾಕ್ ಅಥವಾ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸುವಂತೆ ವೈದ್ಯರು ಸಲಹೆ ನೀಡಿದರು.

ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿಗಳು ನ್ಯಾಯಾಲಯದ ಅನುಮತಿ ಪಡೆದು ಆರೋಪಿ ನಿರಂಜನ್ ಭಟ್‌ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಂದು ಸಂಜೆ 4:30ರ ಸುಮಾರಿಗೆ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ. ಸದ್ಯ ಆತನಿಗೆ ಚಿಕಿತ್ಸೆ ಮುಂದುವರಿದಿದೆ. ಜೀವಕ್ಕೆ ಅಪಾಯ ಇಲ್ಲದಿದ್ದರೂ ಗಂಭೀರ ಎನಿಸಿರುವ ಈ ಪರಿಸ್ಥಿತಿಯಲ್ಲಿ ಆತನನ್ನು ನಾಳೆ ಕೂಡ ಆಸ್ಪತ್ರೆಯಲ್ಲಿ ಇರಿಸುವ ಸಾಧ್ಯತೆಗಳಿವೆ. ಚಿಕಿತ್ಸೆ ಮುಗಿದು ಆಸ್ಪತ್ರೆ ಯಿಂದ ಬಿಡುಗಡೆಗೊಂಡ ಬಳಿಕವಷ್ಟೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 ‘ನಿರಂಜನ್ ಭಟ್‌ನ ಹೊಟ್ಟೆಯಲ್ಲಿದ್ದ ವಜ್ರದ ಉಂಗುರ ಹಾಗೂ ಒಂದು ಕಿವಿಯ ಓಲೆ ಹೊರಬಂದಿದೆ. ಇನ್ನೊಂದು ಓಲೆ ಅದೇ ಭಾಗದಲ್ಲಿ ಚುಚ್ಚಿ ಕೂತಿದೆ. ಅದನ್ನು ತೆಗೆಯಲು ನಮ್ಮಲ್ಲಿ ವ್ಯವಸ್ಥೆ ಇಲ್ಲದ ಕಾರಣ ಬೇರೆ ಆಸ್ಪತ್ರೆಗೆ ವರ್ಗಾಯಿಸುವಂತೆ ಸೂಚನೆ ನೀಡಿದ್ದೇವೆ. ಅದರಂತೆ ಪೊಲೀಸರು ಆತನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇಂದು ಬೆಳಗ್ಗೆ ಒಂದು ಬಾರಿ ಎಕ್ಸ್‌ರೇ ತೆಗೆದಿದ್ದು, ಮತ್ತೆ ಆತನನ್ನು ಕರೆದುಕೊಂಡು ಹೋಗುವಾಗ ಎರಡನೆ ಬಾರಿಗೆ ಎಕ್ಸ್‌ರೇ ತೆಗೆಯಲಾಗಿದೆ. ಆಗಲೂ ಆ ಓಲೆ ಅಲ್ಲೇ ಇತ್ತು. ಇನ್ನು ಆ ಓಲೆಯನ್ನು ಕೊಲೊನೊಸ್ಕೋಪಿ ಮಾಡಿ ತೆಗೆಯಬಹುದು. ಇದರಿಂದ ಬಾರದಿದ್ದರೆ ಆಪರೇಷನ್ ಮಾಡಬೇಕಾಗಬಹುದು. ಓಲೆ ದೊಡ್ಡ ಕರುಳಿನಲ್ಲಿ ಸಿಕ್ಕಿಕೊಂಡಿರುವುದರಿಂದ ತುಂಬಾ ಕಷ್ಟ’ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಪ್ರಭಾರ ಸರ್ಜನ್ ಡಾ.ಮಧುಸೂದನ್ ನಾಯಕ್ ತಿಳಿಸಿದ್ದಾರೆ.

ಹೊಳೆಯಲ್ಲಿ ಮೂಳೆಗಳು ಪತ್ತೆ

ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಸುಟ್ಟು ಅಸ್ಥಿ ಯನ್ನು ನಂದಳಿಕೆಯ ನಿರಂಜನ್ ಭಟ್ ಮನೆಯಿಂದ ಎರಡು ಕಿ.ಮೀ. ದೂರದಲ್ಲಿ ಎಸೆದಿದ್ದಾರೆ ಎಂದು ಹೇಳಲಾದ ಹೊಳೆಯಲ್ಲಿ ಇಂದು ಕೆಲವು ಮೂಳೆ ತುಂಡುಗಳು ಪತ್ತೆಯಾಗಿವೆ.

ಇಂದು ಬೆಳಗ್ಗೆಯಿಂದ ಹೊಳೆಯಲ್ಲಿ ಹುಡುಕಾಟ ನಡೆಸಿದ ಪೊಲೀಸರಿಗೆ ಅರ್ಧ, ಒಂದು ಇಂಚು ಉದ್ದದ ತುಂಡಾದ ಮೂಳೆಗಳು ದೊರೆತಿವೆ. ಅದು ಮನುಷ್ಯರ ಮೂಳೆಯೇ ಅಥವಾ ಪ್ರಾಣಿಗಳದ್ದೆ ಎಂಬುದು ತಿಳಿಯಲು ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿ ಡಿಎನ್‌ಎ ಪರೀಕ್ಷೆಯ ಮೂಲಕ ಇದನ್ನು ಧೃಡಪಡಿಸಲಾಗುತ್ತದೆ.

‘ಕೆಲವು ಮೂಳೆಗಳ ತುಂಡುಗಳು ಹೊಳೆಯಲ್ಲಿ ಪತ್ತೆಯಾಗಿದ್ದು, ಅದು ಭಾಸ್ಕರ್ ಶೆಟ್ಟಿ ಅವರದ್ದೆ ಅಥವಾ ಪ್ರಾಣಿಯದ್ದೆ ಎಂಬುದು ಪರೀಕ್ಷೆಯಿಂದ ತಿಳಿಯಬೇಕಾಗಿದೆ. ಮೊನ್ನೆ ಒಂದು ದಿವಸ ಮಂಗಳೂರು ವಿಧಿವಿಜ್ಞಾನ ಪ್ರಯೋಗಾಲಯದ ತಂಡ ಬಂದು ಹಲವು ಸ್ಯಾಂಪಲ್‌ಗಳನ್ನು ತೆಗೆದು ಕೊಂಡು ಹೋಗಿ ಪರೀಕ್ಷೆ ಒಳಪಡಿಸಿತ್ತು. ಇದೀಗ ಪತ್ತೆಯಾಗಿರುವ ಮೂಳೆ ಗಳನ್ನು ಅಲ್ಲಿಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ತನಿಖಾ ಧಿಕಾರಿಯಾಗಿರುವ ಸುಮನಾ ತಿಳಿಸಿದರು.

ಅದೇ ರೀತಿ ನಿರಂಜನ್ ಭಟ್ ಮನೆಯಲ್ಲಿ ಭಾಸ್ಕರ್ ಶೆಟ್ಟಿಯ ಮೃತದೇಹ ವನ್ನು ಸುಟ್ಟು ಹಾಕಿದ್ದರೆನ್ನಲಾದ ಹೋಮ ಕುಂಡವನ್ನು ಅಗೆಯುವ ಕಾರ್ಯ ಇಂದು ನಡೆಸಲಾಯಿತು. ಆದರೆ ಅದರಲ್ಲಿ ಯಾವುದೇ ಮೂಳೆಗಳಾಗಲೀ ಮೃತದೇಹಕ್ಕೆ ಸಂಬಂಧಿಸಿದ ಕುರುಹುಗಳಾಗಲಿ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಯಾಗಿ ಸುಮನಾ ನೇಮಕ

ಪ್ರಕರಣದ ತನಿಖಾಧಿಕಾರಿಯಾಗಿ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ವಿರುದ್ಧ ಕೆಲವೊಂದು ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆ ಯಲ್ಲಿ ಆ ಜವಾಬ್ದಾರಿಯಿಂದ ಅವರನ್ನು ತೆಗೆದು ಆ ಸ್ಥಾನಕ್ಕೆ ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕಿ ಸುಮನಾ ಅವರನ್ನು ನೇಮಕ ಮಾಡಲಾಗಿದೆ.

ಆರಂಭದಲ್ಲಿ ದೂರು ಸ್ವೀಕರಿಸಲು ನಿರಾಕರಣೆ, ತನಿಖೆಯಲ್ಲಿ ವಿಳಂಬ, ಆರೋಪಿಗಳಿಗೆ ರಾಜ ಮಾರ್ಯಾದೆ ನೀಡಿರುವ ಆರೋಪಗಳು ಗಿರೀಶ್ ವಿರುದ್ಧ ಕೇಳಿಬಂದಿದ್ದು, ಅವರನ್ನು ಬದಲಾಯಿಸುವಂತೆ ಬಂಟರ ಸಂಘ ತೀವ್ರ ಒತ್ತಡ ಹಾಕಿತ್ತು ಎಂದು ತಿಳಿದುಬಂದಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X