ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ

ಕಾರವಾರ, ಆ.10: ಹೆಚ್ಚುತ್ತಿರುವ ಜನಸಂಖ್ಯೆಯಿಂದ ಡೀಸೆಲ್ ಕಡಿಮೆಯಾಗುತ್ತಿದೆ. ಕೆಲವು ವರ್ಷಗಳಲ್ಲಿ ಮುಗಿಯುವ ಸಾಧ್ಯತೆ ಇದ್ದು, ಮುಂದಿನ ಪೀಳಿಗೆಗೆ ಉಪಯೋಗವಾಗಲು ಜೈವಿಕ ಇಂಧನವನ್ನು ಬಳಸಬೇಕು ಎಂದು ಕಾರವಾರ ವಲಯ ಅರಣ್ಯ ಸಂರಕ್ಷಣಾಧಿಕಾರಿ ಕೆ. ಡಿ. ನಾಯ್ಕ ಹೇಳಿದ್ದಾರೆ.
ಅವರು ಜೈವಿಕ ಇಂಧನ ಹಾಗೂ ಪ್ರಾತ್ಯಕ್ಷಿಕಾ ಕೇಂದ್ರ ಹಾಗೂ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಕೋಡಿಭಾಗದ ಸ್ವಾಮಿ ವಿವೇಕಾನಂದ ಪ್ರೌಢ ಶಾಲೆಯಲ್ಲಿ ನಡೆದ ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಜೈವಿಕ ಇಂಧನ ಗಿಡ ನೆಡುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅತಿ ಹೆಚ್ಚು ಜೈವಿಕ ಇಂಧನ ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದರು. ಅಧ್ಯಕ್ಷರಾಗಿ ಪಾಲ್ಗೊಂಡಿದ್ದ ಅರವಿಂದ ತೆಂಡುಲ್ಕರ್ ಅವರು ಜೈವಿಕ ಇಂಧನ ಗಿಡಗಳ ಕುರಿತು ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯ ಮಂಜುನಾಥ ಪವಾರ ಅವರು ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕಾ ಕೇಂದ್ರ ನಡೆಸುತ್ತಿರುವ ಜಾಗೃತಿ ಹಾಗೂ ತರಬೇತಿ ಕಾರ್ಯಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಜೈವಿಕ ಇಂಧನದ ಮಹತ್ವವನ್ನು ತಿಳಿಸಿದರು. ಈ ಸಂದರ್ಭ ವಿಜ್ಞಾನ ಕೇಂದ್ರದ ಸದಸ್ಯರು, ಸಚಿನ್, ವೌನೀಶ, ಅತುಲ ಕಾರ್ಯಕ್ರಮದಲ್ಲಿದ್ದರು. ಪ್ರಜಕ್ತ ಮಾಹೇಕರ ಸ್ವಾಗತಿಸಿ, ವಿಕ್ರಾಂತ ತಾಂಡೇಲ್ ನಿರ್ವಹಿಸಿ, ಮಾಯಾ ಕಿನ್ನರಕರ್ ವಂದಿಸಿದರು.





