ಹಳೆಯಂಗಡಿ: ಯುವತಿ ನಾಪತ್ತೆ; ದೂರು

ಮುಲ್ಕಿ, ಆ.10: ಹಳೆಯಂಗಡಿ ಇಂದಿರಾ ನಗರ ನಿವಾಸಿ ಅನ್ವರ್‌ಎಂಬವರ ಪುತ್ರಿ ರಶೀದಾ (20) ಎಂಬಾಕೆ ಸೋಮವಾರ ಮುಂಜಾನೆ ಮನೆಯಿಂದ ಕಾಣೆಯಾಗಿದ್ದಾರೆ ಎಂದು ಮುಲ್ಕಿ ಠಾಣೆಗೆ ದೂರು ನೀಡಲಾಗಿದೆ.
ರಶೀದಾ ರವಿವಾರ ರಾತ್ರಿ ಸುಮಾರು 1ಗಂಟೆಯವರೆಗೆ ಮನೆಮಂದಿಯೊಂದಿಗೆ ಟಿವಿ ನೋಡಿ ಮಲಗಿದ್ದರು. ಮುಂಜಾನೆ 5 ಗಂಟೆ ವೇಳೆಗೆ ಎಬ್ಬಿಸಲು ಹೋದ ಸಂದರ್ಭ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಅನ್ವರ್ ಮೂಲ್ಕಿ ಠಾಣೆಗೆ ದೂರು ನೀಡಿದ್ದಾರೆ.
ನಾಪತ್ತೆಯಾದ ರಶೀದಾ 5ಅಡಿ ಎತ್ತರವಿದ್ದು, ಎಣ್ಣೆಕಪ್ಪು ಮೈಬಣ್ಣ,ಉದ್ದ ಕೂದಲು, ಹಸಿರುಬಣ್ಣದ ಪ್ಯಾಂಟ್ ಮತ್ತು ಕ್ರೀಮ್ ಟಾಪ್ ಧರಿಸಿದ್ದಾರೆ. ಹಿಂದಿ, ಕನ್ನಡ, ತುಳು, ಉರ್ದು, ಬ್ಯಾರಿ ಭಾಷೆ ಬಲ್ಲವರಾಗಿದ್ದು, ಈ ಬಗ್ಗೆ ಮಾಹಿತಿ ಲಭಿಸಿದಲ್ಲಿ ಮೂಲ್ಕಿ ಠಾಣೆ ದೂ.ಸಂ.: 0824-2290533 ಅಥವಾ ಮೊ.ಸಂ.: 9480805359ನ್ನು ಸಂಪರ್ಕಿಸಲು ಕೋರಲಾಗಿದೆ.
Next Story





