ರಿಯೋ ಒಲಿಂಪಿಕ್ಸ್: ಸತೀಶ್, ಅವತಾರ್ ಸಿಂಗ್ ನಿರಾಶೆ
ರಿಯೋ ಡಿ ಜನೈರೊ, ಆ.10: ಭಾರತದ ವೇಟ್‌ಲಿಫ್ಟರ್ ಸತೀಶ್ ಶಿವಲಿಂಗಂ ಹಾಗೂ ಜುಡೋ ಪಟು ಅವತಾರ್ ಸಿಂಗ್ ರಿಯೋ ಒಲಿಂಪಿಕ್ಸ್‌ನ ಮೊದಲ ಸುತ್ತಿನಲ್ಲಿ ಮುಗ್ಗರಿಸುವುದರೊಂದಿಗೆ ಭಾರೀ ನಿರಾಸೆಗೊಳಿಸಿದರು.
ಪುರುಷರ 77 ಕೆಜಿ ತೂಕ ವಿಭಾಗದಲ್ಲಿ ಸ್ಪರ್ಧಿಸಿದ ಸತೀಶ್ ‘ಬಿ’ ಗುಂಪಿನಲ್ಲಿ ನಾಲ್ಕನೆ ಸ್ಥಾನ ಪಡೆಯುವುದರೊಂದಿಗೆ ಫೈನಲ್‌ಗೆ ತಲುಪಲು ವಿಫಲರಾದರು. ಸತೀಶ್ ಒಟ್ಟು 329 ಕೆಜಿ ತೂಕ ಎತ್ತಿದ್ದರು.
ಪುರುಷರ 90 ಕೆಜಿ ಜುಡೋದಲ್ಲಿ ಸ್ಪರ್ಧಿಸಿದ ಅವತಾರ್ ಸಿಂಗ್ ಒಲಿಂಪಿಕ್ಸ್‌ನಲ್ಲಿ ಇದೇ ಮೊದಲ ಬಾರಿ ಆಡುತ್ತಿರುವ ನಿರಾಶ್ರಿತ ತಂಡದ ಸದಸ್ಯ ಪೊಪೊಲ್ ಮಿಸೆಂಗಾ ವಿರುದ್ಧ ಶರಣಾದರು. ಮಿಸೆಂಗಾ ಒಲಿಂಪಿಕ್ಸ್‌ನಲ್ಲಿ ಮೊದಲ ಗೆಲುವು ಸಾಧಿಸಿದ ನಿರಾಶ್ರಿತ ತಂಡದ ಸದಸ್ಯ ಎನಿಸಿಕೊಳ್ಳುವ ಮೂಲಕ ಇತಿಹಾಸ ಬರೆದರು.
Next Story





