Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮುಖ್ಯಮಂತ್ರಿಗಳಲ್ಲೊಂದು ವಿನೀತ ಕೋರಿಕೆ

ಮುಖ್ಯಮಂತ್ರಿಗಳಲ್ಲೊಂದು ವಿನೀತ ಕೋರಿಕೆ

ಇಸ್ಮತ್ ಫಜೀರ್ಇಸ್ಮತ್ ಫಜೀರ್10 Aug 2016 11:49 PM IST
share
ಮುಖ್ಯಮಂತ್ರಿಗಳಲ್ಲೊಂದು ವಿನೀತ ಕೋರಿಕೆ

ಮಾನ್ಯ ಮುಖ್ಯಮಂತ್ರಿಗಳಲ್ಲಿ ನನ್ನ ಮನವಿಯೇನೆಂದರೆ ಫಯಾಝ್‌ರ ಅಸಹಾಯಕ ಕುಟುಂಬಕ್ಕೆ ತಕ್ಷಣ ಗರಿಷ್ಠ ಮೊತ್ತದ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಫಯಾಝ್‌ರ ಕಂದಮ್ಮಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರ ಉಚಿತವಾಗಿ ಕೊಡಿಸಬೇಕು ಮತ್ತು ವೀರಮರಣವನ್ನಪ್ಪಿದ ಫಯಾಝ್‌ರ ಹೆಸರಲ್ಲಿ ರಾಜ್ಯ ಸರಕಾರವು ರಾಜ್ಯಮಟ್ಟದ ವಾರ್ಷಿಕ ಶೌರ್ಯ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು. 

ಗೌರವಾನ್ವಿತ ಮುಖ್ಯಮಂತ್ರಿಗಳೇ,

06-08-2016 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಕಡಲ ಭೋರ್ಗರೆವ ಅಲೆಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಮಿಳುನಾಡು ಮೂಲದ ನಾಡದೋಣಿ ಮೀನುಗಾರರ ರಕ್ಷಣೆಗೆ ಕಡಲಿಗೆ ಧುಮುಕಿ ಓರ್ವನನ್ನು ರಕ್ಷಿಸಿ ಇನ್ನೋರ್ವನ ರಕ್ಷಣೆಗಾಗಿ ಹರಸಾಹಸಪಡುತ್ತಿದ್ದಾಗ ಕಡಲಿನಾಳದ ಬಂಡೆಯೇಟು ತಗಲಿ ವೀರ ಮರಣವನ್ನಪ್ಪಿದ ಆಪದ್ಬಾಂಧವ ಫಯಾಝ್ ಬಗ್ಗೆ ತಮಗೆ ಈಗಾಗಲೇ ಮಾಹಿತಿ ದೊರಕಿರಬಹುದು. ಫಯಾಝ್ ತನ್ನ ತಾಯಿ, ಪತ್ನಿ ಮತ್ತು ಮೂವರು ಎಳೆಯ ಕಂದಮ್ಮಗಳನ್ನು ಅಗಲಿ ಹೋಗಿದ್ದಾರೆ. ಮೀನು ಒಣಗಿಸಿ ಮಾರಾಟ ಮಾಡುತ್ತಿದ್ದ ಶ್ರಮಜೀವಿ ಫಯಾಝ್‌ರ ದುಡಿಮೆಯೇ ಕುಟುಂಬಕ್ಕೆ ಆಧಾರವಾಗಿತ್ತು. ಫಯಾಝ್‌ರ ಅಗಲಿಕೆಯಿಂದಾಗಿ ಆ ಬಡ ಕುಟುಂಬ ಕಂಗಾಲಾಗಿದೆ. ಫಯಾಝ್ ಈ ಹಿಂದೆಯೂ ಕಡಲ ತೆರೆಗಳಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಹಲವಾರು ಜೀವಗಳನ್ನು ರಕ್ಷಿಸಿದ್ದಾರೆ. ಕೆಲವು ಸಮಯದ ಹಿಂದೆ ಮೈಸೂರು ಮೂಲದ ನಾಲ್ವರು ವಿಹಾರಾರ್ಥಿಗಳು ಕಡಲ ಭೋರ್ಗರೆತಕ್ಕೆ ಬಲಿಯಾಗಿದ್ದಾಗ ಅವರ ಮೃತ ದೇಹವನ್ನು ಹುಡುಕಲು ಕಡಲಿನಲ್ಲಿ ಹಗಲು ರಾತ್ರಿಯೆನ್ನದೇ ಈಜಾಡಿದ್ದರು. ಮಾತ್ರವಲ್ಲ, ಮೃತದೇಹಗಳನ್ನು ಹುಡುಕಿ ತಂದಿದ್ದರು. ಕೆಲವು ವರ್ಷಗಳ ಹಿಂದೆ ಗುರುಪುರದ ಫಲ್ಗುಣಿ ನದಿಗೆ ಶಾಲಾ ವಾಹನವೊಂದು ಮಗುಚಿ ಅನೇಕ ಎಳೆ ಕಂದಮ್ಮಗಳು ಬಲಿಯಾದಾಗ ಅವರ ಮೃತ ದೇಹಗಳನ್ನು ನದಿಯಾಳದಿಂದ ಹುಡುಕಿ ತರುವಲ್ಲಿಯೂ ಫಯಾಝ್‌ರ ದಣಿವರಿಯದ ಶ್ರಮವಿತ್ತು. ಇಷ್ಟು ಮಾತ್ರವಲ್ಲದೆ ಪರಿಸರದಲ್ಲಿ ಯಾವುದೇ ಅಪಘಾತ, ವಿಪತ್ತು ಸಂಭವಿಸಿದಾಗೆಲ್ಲಾ ಫಯಾಝ್ ನೆರವಿಗಾಗಿ ಧಾವಿಸುತ್ತಿದ್ದರು. ಈ ಹಿಂದೆ ಫಯಾಝ್ ಕಡಲ ಸೆಳೆತದಿಂದ ರಕ್ಷಿಸಿದ ಅನೇಕ ಜೀವಗಳಲ್ಲಿ ವಿವಿಧ ಜಾತಿ, ಧರ್ಮಗಳ ಮಂದಿಯಿದ್ದರು. ಕೋಮು ಸೌಹಾರ್ದ ಹದಗೆಟ್ಟಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫಯಾಝ್‌ರಂತಹ ಅಪ್ಪಟ ಮಾನವತಾವಾದಿಗಳೂ ಇದ್ದಾರೆ ಎನ್ನುವುದಕ್ಕೆ ಫಯಾಝ್‌ರ ಆಪದ್ಬಾಂಧವ ಗುಣವೇ ಸಾಕ್ಷಿ. ಈ ನಿಟ್ಟಿನಲ್ಲಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ನನ್ನ ಮನವಿಯೇನೆಂದರೆ ಫಯಾಝ್‌ರ ಅಸಹಾಯಕ ಕುಟುಂಬಕ್ಕೆ ತಕ್ಷಣ ಗರಿಷ್ಠ ಮೊತ್ತದ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ಫಯಾಝ್‌ರ ಕಂದಮ್ಮಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರಕಾರ ಉಚಿತವಾಗಿ ಕೊಡಿಸಬೇಕು. ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಸಿಲುಕಿ ತನ್ನ ದೇಹ ಎರಡು ತುಂಡಾಗಿದ್ದಾಗಲೂ ತನ್ನ ಕಿಡ್ನಿ ಮತ್ತು ಕಣ್ಣನ್ನು ಯಾರಿಗಾದರೂ ಅಳವಡಿಸಿ ಅವರ ಬದುಕಲ್ಲಿ ಬೆಳಕು ಕಾಣಬೇಕೆಂದು ಆಶಿಸುತ್ತಾ ಕೊನೆಯುಸಿರೆಳೆದ ಹರೀಶ್‌ರ ಹೆಸರಲ್ಲಿ ಆಗಿನ ಆರೋಗ್ಯ ಸಚಿವ ಯು.ಟಿ.ಖಾದರ್‌ರವರ ಮುತುವರ್ಜಿಯಲ್ಲಿ ‘ಹರೀಶ್ ಯೋಜನೆ’ಯನ್ನು ಸರಕಾರ ಪ್ರಾರಂಭಿಸಿದ್ದು ಶ್ಲಾಘನೀಯ. ಅಂತೆಯೇ ಮಾನ್ಯ ಯು.ಟಿ.ಖಾದರ್‌ರವರ ಕ್ಷೇತ್ರದ ಇದೀಗ ವೀರಮರಣವನ್ನಪ್ಪಿದ ಫಯಾಝ್‌ರ ಹೆಸರಲ್ಲಿ ರಾಜ್ಯ ಸರಕಾರವು ರಾಜ್ಯಮಟ್ಟದ ವಾರ್ಷಿಕ ಶೌರ್ಯ ಪ್ರಶಸ್ತಿಯೊಂದನ್ನು ಸ್ಥಾಪಿಸಬೇಕು. ತನ್ಮೂಲಕ ಅನಾಮಿಕ ಆಪದ್ಬಾಂಧವ ಫಯಾಝ್‌ರ ಹೆಸರನ್ನು ಚಿರಸ್ಥಾಯಿಯಾಗಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇನೆ.

share
ಇಸ್ಮತ್ ಫಜೀರ್
ಇಸ್ಮತ್ ಫಜೀರ್
Next Story
X