ನಿರ್ಭಯಾ ನಿಧಿಗೆ ರೂ.200 ಕೋಟಿ ಮೀಸಲು
ಹೊಸದಿಲ್ಲಿ, ಆ.10: ಲೈಂಗಿಕ ಅಪರಾಧ ಸಂತ್ರಸ್ತ ಮಹಿಳೆಯರು ಮತ್ತು ಮಕ್ಕಳಿಗೆ ಪರಿಹಾರ ಒದಗಿಸುವುದಕ್ಕಾಗಿ ನಿರ್ಭಯಾ ನಿಧಿಗೆ ಕೇಂದ್ರ ಸರಕಾರವು ರೂ.200 ಕೋಟಿಯನ್ನು ಮೀಸಲಿರಿಸಿದೆಯೆಂದು ರಾಜ್ಯಸಭೆಗಿಂದು ಮಾಹಿತಿ ನೀಡಲಾಗಿದೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ತಮ್ಮ ತಮ್ಮ ಪ್ರಾಂತಗಳ ಸಂತ್ರಸ್ತರ ಪರಿಹಾರ ಯೋಜನೆಯ ಬಗ್ಗೆ ಅಧಿಸೂಚನೆ ಹೊರಡಿಸಿವೆಯೆಂದು ಗೃಹ ಸಹಾಯಕ ಸಚಿವ ಹಂಸರಾಜ್ ಆಹಿರ್ ತಿಳಿಸಿದರು.
ರಾಜ್ಯಗಳು ಈ ಯೋಜನೆಯನ್ವಯ ಸಂತ್ರಸ್ತರಿಗೆ ನೀಡುವ ಪರಿಹಾರದ ಲೆಕ್ಕವನ್ನು ಕೇಂದ್ರೀಯವಾಗಿ ಇರಿಸಿಕೊಂಡಿಲ್ಲವೆಂದು ಅವರು ಹೇಳಿದರು.
Next Story





