ಟಿಕೆಟ್ ಬುಕಿಂಗ್: ಸಂಸದರಿಗೆ ವಿಶಿಷ್ಟ ಗುರುತು ನೀಡಲಿರುವ ರೈಲ್ವೆ
ಹೊಸದಿಲ್ಲಿ,ಆ.10: ರೈಲ್ವೆಯ ಟಿಕೆಟ್‌ಗಳನ್ನು ಕಾಯ್ದಿರಿಸಲು ಸಹಾಯಕ ವಾಗುವಂತೆ ಎಲ್ಲ ಸಂಸದರು ಮತ್ತು ಮಾಜಿ ಸಂಸದರಿಗೆ ವಿಶಿಷ್ಟ ಗುರುತನ್ನು ನೀಡಲು ಮತ್ತು ಒಂದಕ್ಕಿಂತ ಹೆಚ್ಚು ಟಿಕೆಟ್‌ಗಳ ಬುಕಿಂಗ್ ಮೂಲಕ ಯಾವುದೇ ದುರುಪಯೋಗಕ್ಕೆ ಅಂತ್ಯ ಹಾಡಲು ರೈಲ್ವೆಯು ಮುಂದಾಗಿದೆ ಎಂದು ರೈಲ್ವೆ ಸಚಿವ ಸುರೇಶ ಪ್ರಭು ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.
ವಾಸ್ತವದಲ್ಲಿ ಸಂಸದರೋರ್ವರು ಬೇರೆ ಬೇರೆ ಸ್ಥಳಗಳಿಗೆ ತೆರಳುವ ಬೇರೆ ಬೇರೆ ರೈಲುಗಳಲ್ಲಿ ಏಕಕಾಲಕ್ಕೆ ಬಹು ಬುಕಿಂಗ್‌ಗಳನ್ನು ಮಾಡಬಹುದು. ಆದರೆ ನಿಜಕ್ಕೂ ಸಂಸದರು ಯಾವ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ತಿಳಿದುಕೊಳ್ಳುವ ಯಾವುದೇ ವ್ಯವಸ್ಥೆ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಈ ಸೌಲಭ್ಯವು ದುರುಪಯೋಗವಾಗುವ ಸಂಭವವಿದೆ ಎಂದ ಅವರು, ಇದನ್ನು ತಡೆಯಲು ಸಂಸದರು ಮಾತ್ರವೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುವಂತೆ ಅವರಿಗೆ ಪಾಸ್‌ವರ್ಡ್‌ನೊಂದಿಗೆ ವಿಶಿಷ್ಟ ಗುರುತನ್ನು ನೀಡಲಾಗುವುದು. ಟಿಕೆಟ್ ಬುಕ್ ಮಾಡಲ್ಪಟ್ಟಾಗ ತಕ್ಷಣವೇ ಸಂಸದರ ಮೊಬೈಲ್ ಫೋನ್‌ಗೆ ಎಸ್‌ಎಂಎಸ್ ಬರಲಿದೆ. ತನ್ಮೂಲಕ ವ್ಯವಸ್ಥೆಯು ಪಾರದರ್ಶಕಗೊಳ್ಳುತ್ತದೆ ಎಂದು ವಿವರಿಸಿದರು.





