ರಿಯೋ ಒಲಿಂಪಿಕ್ಸ್: ಅರ್ಮೆನಿಯನ್ ವೇಟ್ ಲಿಫ್ಟರ್ ಕೈ ಮುರಿತ...!

ರಿಯೋ ಡಿ, ಜನೈರೊ, ಆ.11: ರಿಯೋ ಒಲಿಂಪಿಕ್ಸ್‌ನ ಭಾರ ಎತ್ತುವ ಸ್ಪರ್ಧೆಯಲ್ಲಿ ಅರ್ಮೆನಿಯನ್ ವೇಟ್ ಲಿಫ್ಟರ್ ಆಂಡ್ರನಿಕ್ ಕರಾಪೆಟ್ಯನ್ ಕೈ ಮುರಿದಿದೆ.
ಪುರುಷರ77ಕೆ.ಜಿ. ವಿಭಾಗದ ಸ್ಪರ್ಧೆಯ ಫೈನಲ್ ನಲ್ಲಿ ಆಂಡ್ರನಿಕ್ ಕರಾಪೆಟ್ಯನ್ ಎಡಗೈ ಮುರಿದಿದ್ದು, ಪದಕದ ಆಸೆ ತೊರೆದು ಕಣ್ಣೀರಿಡುತ್ತಲೇ ಅಲ್ಲಿಂದ ತೆರಳಿದರು.
ಇಪ್ಪತ್ತರ ಹರೆಯದ ಕರಾಪೆಟ್ಯನ್ ಎರಡನೆ ಯತ್ನದಲ್ಲಿ 195 ಕೆ.ಜಿ. ಭಾರ ಎತ್ತುವ ವೇಳೆ ಅವರ ಎಡಗೈಯ ಮೊಣಗಂಟಿನ ಕೀಲು ತಪ್ಪಿದೆ.
ಭಾರತ ಎತ್ತಿ ಕೆಳಗಿಳಿಸುವ ಸಂದರ್ಭದಲ್ಲಿ ಅವರಿಗೆ ಎಡಗೈಗೆ ಗಾಯವಾಯಿತು. ನೋವು ತಡೆಯಲಾರದೆ ಚೀರಿದರು. ತಕ್ಷಣ ವೈದ್ಯಕೀಯ ಸಿಬಂದಿಗಳು ಧಾವಿಸಿ ಅವರನ್ನು ಆಸ್ಪತ್ರಗೆ ಕರೆದೊಯ್ದರು.
ಕರಾಪೆಟ್ಯನ್ ಹಾಲಿ ಯುರೋಪಿಯನ್ ಚಾಂಪಿಯನ್ ಆಗಿದ್ದಾರೆ. ಆದರೆ ರಿಯೋ ಒಲಿಂಪಿಕ್ಸ್‌ನಲ್ಲಿ ಗೆಲ್ಲುವ ಕನಸು ನನಸಾಗಲಿಲ್ಲ. ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಗಾಯಾಳುಗಳ ಸಂಖ್ಯೆ ದಿನ ನಿತ್ಯ ಜಾಸ್ತಿಯಾಗುತ್ತಿದೆ.
Oh no!!! Armenian weightlifter #AndranikKarapetyan suffers #graphic #injury at #Rio2016!! https://t.co/gXUgGJVVAjhttps://t.co/pefdHYhThi
— Perez (@ThePerezHilton) August 11, 2016







