ನಾಗನೊಂದಿಗೆ ಸೆಲ್ಫಿ: ಯುವಕನಿಗೆ 25,000 ರೂ. ದಂಡ!
ಅಹ್ಮದಾಬಾದ್,ಆ.11: ನಾಗರ ಹಾವಿನೊಂದಿಗೆ ಸೆಲ್ಫಿ ತೆಗೆದ ಯುವಕನಿಗೆ ಗುಜರಾತ್ ಅರಣ್ಯ ಇಲಾಕೆ 25,000ರೂಪಾಯಿ ದಂಡ ವಿಧಿಸಿದೆ ಎಂದು ವರದಿಯಾಗಿದೆ. ವಡೋದರದ ಯಾಹೇಶ್ ಬರೋಡಾ ಎಂಬಾತ ಹಾವಿನೊಂದಿಗೆ ಸೆಲ್ಫಿತೆಗೆದು ಸಾಮಾಜಿಕ ಮಾಧ್ಯಮಗಳಿಗೆ ಪೋಸ್ಟ್ ಮಾಡಿ ಸಾವಿರ ರೂಪಾಯಿಗೆ ಹಾವು ಮಾರಾಟಕ್ಕಿದೆ ಎಂದು ಬರೆದುಕೊಂಡಿದ್ದ, ಇದು ನಂತರ ವೈರಲ್ ಆಗಿತ್ತು. ಅರಣ್ಯ ಇಲಾಖೆಗೆ ಪ್ರಾಣಿ ಪ್ರಿಯರು ದೂರು ನೀಡಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ಮುಂದೆ ತಾನು ಹಾವಿನೊಂದಿಗೆ ಸೆಲ್ಫಿ ತೆಗೆದದ್ದನ್ನು ಯುವಕ ಒಪ್ಪಿಕೊಂಡಿದ್ದಾನೆ. ಅರಣ್ಯ ಇಲಾಖೆಯ ಕಾನೂನು ಪ್ರಕಾರ ಅಧಿಕಾರಿಗಳು ಈ ಯುವಕನಿಗೆ 25,000 ರೂ. ದಂಡವನ್ನು ವಿಧಿಸಿದ್ದಾರೆ ಎಂದು ವರದಿಯಾಗಿದೆ.
Next Story