16 ವರ್ಷದ ಬಾಲಕಿಯನ್ನು ಕೂಡಿಹಾಕಿ 2 ದಿವಸಗಳವರೆಗೆ ಸಾಮೂಹಿಕ ಅತ್ಯಾಚಾರವೆಸಗಿದ ದುರುಳರು!

ಹೊಸದಿಲ್ಲಿ,ಆ.11: ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯನ್ನು ಎರಡು ದಿವಸ ಕೂಡಿಹಾಕಿ ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ದಕ್ಷಿಣ ದಿಲ್ಲಿಯ ಕಲ್‌ಕಾಜಿಯಿಂದ ವರದಿಯಾಗಿದೆ. ಇಬ್ಬರು ವ್ಯಕ್ತಿಗಳು ಹತ್ತನೆ ತರಗತಿಯ ವಿದ್ಯಾರ್ಥಿನಿಯನ್ನು ಎರಡು ದಿವಸಗಳ ಕಾಲ ಪ್ಲಾಟೊಂದರಲ್ಲಿ ಕೂಡಿಹಾಕಿ ಅತ್ಯಾಚಾರವೆಸಗಿದ್ದು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕರಣ್ ಸಿಂಗ್, ಸಂಜಯ್ ಕುಮಾರ್ ಬಾಲಕಿಯನ್ನು ಅತ್ಯಾಚಾರ ಎಸಗಿದ್ದು, ಇವರ ಗೆಳೆಯರಾದ ಮಹೇಶ್, ಕಲಾ, ಎಂಬಿಬ್ಬರು ವೀಡಿಯೊ ಚಿತ್ರೀಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೀಡಾದ ಬಾಲಕಿ ಗುರ್ಗಾಂವ್ ನ ಸರಕಾರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಆಗಸ್ಟ್ 6,7 ತಾರೀಕಿನಂದು ದುರುಳರು ಬಾಲಕಿಯನ್ನು ಅತ್ಯಾಚಾರಕ್ಕೆ ಗುರಿಪಡಿಸಿದ್ದಾರೆ ಎನ್ನಲಾಗಿದೆ. ಬಾದ್‌ಶಾಪೂರ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರಿ ಯುವಕರ ವಿರುದ್ಧ ಬಾಲಕಿ ದೂರು ನೀಡಿದ್ದಾಳೆ. ಪರ್ಲ ಎಂಬಲ್ಲಿನ ಕರುಣ್‌ನ ಪರಿಚಯ ಬಾಲಕಿಗಿತ್ತು. ಆತ ಬೈಕ್‌ನಲ್ಲಿ ಬಾಲಕಿಯನ್ನು ಮಂದಿರಕ್ಕೆ ಮುಂತಾದೆಡೆ ಸುತ್ತಾಡಿಸಿ ನಂತರ ಹತ್ತಿರದ ಪ್ಲಾಟ್‌ಗೆ ಕರೆತಂದಿದ್ದ. ನಂತರ ಅಲ್ಲಿಗೆ ಮೂವರು ಗೆಳೆಯರನ್ನು ಕರೆಯಿಸಿಕೊಂಡಿದ್ದಾನೆ, ಕರಣ್ ಮತ್ತು ಸಂಜಯ್ ಬಾಲಕಿಯನ್ನು ಅತ್ಯಾಚಾರ ಮಾಡಿದ್ದರೆ, ಇನ್ನಿಬ್ಬರು ಗೆಳೆಯರು ಅದನ್ನು ವೀಡಿಯೊ ಮೂಲಕ ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ. ಇದನ್ನು ಹೊರಗೆ ಹೇಳಬಾರದೆಂದು ಆರೋಪಿಗಳು ತನಗೆ ಬೆದರಿಕೆ ಹಾಕಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಎರಡು ದಿವಸಗಳಾದ ಬಳಿಕ ಇವರ ಕೈಯಿಂದ ತಪ್ಪಿಸಿಕೊಂಡ ಬಾಲಕಿ ಮನೆಗೆ ಹೋಗಿ ತನ್ನಮೇಲಾದ ಅನ್ಯಾಯವನ್ನು ವಿವರಿಸಿದ್ದಾಳೆ. ನಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಅತ್ಯಾಚಾರ, ಅಪ್ರಾಪ್ತ ವಯಸ್ಸಿನವರ ವಿರುದ್ಧ ಲೈಂಗಿಕ ದೌರ್ಜನ್ಯ, ಸಾಮೂಹಿಕ ಬಲಾತ್ಕಾರ ಮುಂತಾದ ಆರೋಪ ಹೊರಿಸಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ,ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ ಎಂದು ವರದಿ ತಿಳಿಸಿದೆ.





